Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ SSLC ಪರೀಕ್ಷೆ-1ರಲ್ಲಿ `ಫೇಲ್’ ಆದವರಿಗೆ ಗುಡ್ ನ್ಯೂಸ್ : ಸರ್ಕಾರವೇ ಭರಿಸಲಿದೆ ಪರೀಕ್ಷಾ ಶುಲ್ಕ.!

28/04/2026 12:43 PM

ಧಾರವಾಡ ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿಯ ವಿಚಾರಣೆ ಸ್ವೀಕರಿಸಿದ ಹೈಕೋರ್ಟ್

28/04/2026 12:35 PM

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ : ಕಾರ್ಮಿಕರು ವಾಸವಿದ್ದ 12 ಶೆಡ್ ಗಳಿಗೆ ಬೆಂಕಿ, ತಪ್ಪಿದ ಭಾರಿ ಅನಾಹುತ!

28/04/2026 12:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರೈತರಿಗೆ 65 ಕಾರ್ಖಾನೆಗಳಿಂದ 3,101 ಕೋಟಿ ರೂ. ಕಬ್ಬಿನ ಬಿಲ್‌ ಬಾಕಿ, 33 ಕಾರ್ಖಾನೆಗಳಿಗೆ ನೋಟಿಸ್ : ಸಚಿವ ಶಿವಾನಂದ ಪಾಟೀಲ ಮಾಹಿತಿ
KARNATAKA

BIG NEWS : ರೈತರಿಗೆ 65 ಕಾರ್ಖಾನೆಗಳಿಂದ 3,101 ಕೋಟಿ ರೂ. ಕಬ್ಬಿನ ಬಿಲ್‌ ಬಾಕಿ, 33 ಕಾರ್ಖಾನೆಗಳಿಗೆ ನೋಟಿಸ್ : ಸಚಿವ ಶಿವಾನಂದ ಪಾಟೀಲ ಮಾಹಿತಿ

By kannadanewsnow5717/03/2025 4:08 PM

ಬೆಂಗಳೂರು: ರಾಜ್ಯದಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ 65 ಕಾರ್ಖಾನೆಗಳು 3,101.91 ಕೋಟಿ ರೂ.ಗಳು ಪಾವತಿ ಮಾಡುವುದು ಬಾಕಿ ಇದೆ. ಶೀಘ್ರ ಹಣ ಪಾವತಿಸುವಂತೆ 33 ಸಕ್ಕರೆ ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಅವರು ತಿಳಿಸಿದ್ದಾರೆ.

ವಿಧಾನ ಪರಿಷತ್‌ ಶಾಸಕ ದಿನೇಶ ಗೂಳಿಗೌಡ ರವರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ ರಾಜ್ಯದಲ್ಲಿ ಒಟ್ಟು 99 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದು, ಇವುಗಳ ಪೈಕಿ 79 ಕಾರ್ಖಾನೆಗಳು ಪ್ರಸ್ತುತ ಕಾರ್ಯನಿರತವಾಗಿವೆ. 2024-25ನೇ ಹಂಗಾಮಿನಲ್ಲಿ 2025ರ ಫೆ. 28ರ ಅಂತ್ಯಕ್ಕೆ ಕಬ್ಬು ಸರಬರಾಜು ಮಾಡಿದ ರೈತರಿಗೆ 17,596.92 ಕೋಟಿ ರೂಪಾಯಿ ಬಿಲ್ ಪಾವತಿ ಮಾಡಬೇಕಿದ್ದು, ಅವುಗಳಲ್ಲಿ 14,655.91 ಕೋಟಿ ರೂ. ಮೊತ್ತವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

2024-25ನೇ ಸಾಲಿನ ಕಬ್ಬು ಅರೆಯುವ ಹಂಗಾಮು ಚಾಲ್ತಿಯಲ್ಲಿದ್ದು, ಕಬ್ಬು ಬಿಲ್ಲು ಪಾವತಿಸಲು ಅವಕಾಶವಿರುತ್ತದೆ. ಆದಾಗ್ಯೂ, 2024-25ನೇ ಹಂಗಾಮಿನಲ್ಲಿ ಕಬ್ಬು ಬಿಲ್ಲು ಉಳಿಸಿಕೊಂಡಿರುವ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಇದೇ ಜನವರಿ16 ಮತ್ತು ಫೆ.4 ರಂದು ಶಾಸನಬದ್ಧ ನೋಟಿಸುಗಳನ್ನು ಜಾರಿಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಶೇ.15 ರ ಬಡ್ಡಿ ನೀಡಬೇಕು
ಕಬ್ಬು (ನಿಯಂತ್ರಣ) ಆದೇಶ 1966 ರ ಖಂಡ 3 ರಲ್ಲಿ, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನಗಳ ಒಳಗಾಗಿ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಬಿಲ್ಲನ್ನು ಪಾವತಿಸಬೇಕಿದೆ. ನಿಗದಿತ ಅವಧಿಯಲ್ಲಿ ಕಬ್ಬಿನ ಬಿಲ್ಲನ್ನು ಪಾವತಿ ಮಾಡದೇ ಇದ್ದಲ್ಲಿ ಕಬ್ಬು (ನಿಯಂತ್ರಣ) ಆದೇಶ 1966 ರ ಖಂಡ (3A) ರನ್ವಯ 14 ದಿನಗಳ ನಂತರ ತಡವಾಗಿ ಪಾವತಿಸಿದ ದಿನಗಳಿಗೆ ಶೇ.15 ರಷ್ಟು ಬಡ್ಡಿಯನ್ನು ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಾಗಿರುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

ಭೂ ಕಂದಾಯ ಬಾಕಿ ಎಂದು ಪರಿಗಣನೆ

ನಿಗದಿತ ಅವಧಿಯೊಳಗೆ ಸಂಬಂಧಿಸಿದ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ಲನ್ನು ಪಾವತಿಸದಿದ್ದಲ್ಲಿ ಭೂಕಂದಾಯದ ಬಾಕಿಯಂತೆ ಕಬ್ಬು ಬಿಲ್ಲು ವಸೂಲು ಮಾಡಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ವಸೂಲಾತಿ ಪ್ರಮಾಣ ಪತ್ರವನ್ನು ಹೊರಡಿಸಲು ಕಬ್ಬು (ನಿಯಂತ್ರಣ) ಆದೇಶ 1966 ರ ಖಂಡ 8 ರಲ್ಲಿ ಅವಕಾಶವಿದೆ. ಸರ್ಕಾರದ ಅಧಿಸೂಚನೆಯಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವಸೂಲಾತಿ ಪ್ರಮಾಣ ಪತ್ರವನ್ನು ಹೊರಡಿಸುವ ಅಧಿಕಾರವನ್ನು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಮತ್ತು ಆಯುಕ್ತರಿಗೆ ನೀಡಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

101 crore in sugarcane bills from 65 factories BIG NEWS: Farmers owe Rs 3 notices issued to 33 factories: Minister Shivanand Patil
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ SSLC ಪರೀಕ್ಷೆ-1ರಲ್ಲಿ `ಫೇಲ್’ ಆದವರಿಗೆ ಗುಡ್ ನ್ಯೂಸ್ : ಸರ್ಕಾರವೇ ಭರಿಸಲಿದೆ ಪರೀಕ್ಷಾ ಶುಲ್ಕ.!

28/04/2026 12:43 PM1 Min Read

ಧಾರವಾಡ ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿಯ ವಿಚಾರಣೆ ಸ್ವೀಕರಿಸಿದ ಹೈಕೋರ್ಟ್

28/04/2026 12:35 PM1 Min Read

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ : ಕಾರ್ಮಿಕರು ವಾಸವಿದ್ದ 12 ಶೆಡ್ ಗಳಿಗೆ ಬೆಂಕಿ, ತಪ್ಪಿದ ಭಾರಿ ಅನಾಹುತ!

28/04/2026 12:30 PM1 Min Read
Recent News

ರಾಜ್ಯದಲ್ಲಿ SSLC ಪರೀಕ್ಷೆ-1ರಲ್ಲಿ `ಫೇಲ್’ ಆದವರಿಗೆ ಗುಡ್ ನ್ಯೂಸ್ : ಸರ್ಕಾರವೇ ಭರಿಸಲಿದೆ ಪರೀಕ್ಷಾ ಶುಲ್ಕ.!

28/04/2026 12:43 PM

ಧಾರವಾಡ ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿಯ ವಿಚಾರಣೆ ಸ್ವೀಕರಿಸಿದ ಹೈಕೋರ್ಟ್

28/04/2026 12:35 PM

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ : ಕಾರ್ಮಿಕರು ವಾಸವಿದ್ದ 12 ಶೆಡ್ ಗಳಿಗೆ ಬೆಂಕಿ, ತಪ್ಪಿದ ಭಾರಿ ಅನಾಹುತ!

28/04/2026 12:30 PM

ಮೊಬೈಲ್ ಶಾಪ್ ಆರಂಭಿಸುವ ಪ್ಲಾನ್ ಇದೆಯೇ? ಬೇಕಾಗುವ ಬಂಡವಾಳ ಮತ್ತು ಲಾಭದ ಸಂಪೂರ್ಣ ಮಾಹಿತಿ ಇಲ್ಲಿದೆ

28/04/2026 12:30 PM
State News
KARNATAKA

ರಾಜ್ಯದಲ್ಲಿ SSLC ಪರೀಕ್ಷೆ-1ರಲ್ಲಿ `ಫೇಲ್’ ಆದವರಿಗೆ ಗುಡ್ ನ್ಯೂಸ್ : ಸರ್ಕಾರವೇ ಭರಿಸಲಿದೆ ಪರೀಕ್ಷಾ ಶುಲ್ಕ.!

By kannadanewsnow5728/04/2026 12:43 PM KARNATAKA 1 Min Read

ಬೆಂಗಳೂರು: 2026ನೇ ಸಾಲಿನ ರಾಜ್ಯದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ದಾಖಲೆಯ ಶೇ. 94.18ರಷ್ಟು ವಿದ್ಯಾರ್ಥಿಗಳು…

ಧಾರವಾಡ ಯೋಗೀಶ್ ಗೌಡ ಕೊಲೆ ಕೇಸ್ : ಶಾಸಕ ವಿನಯ್ ಕುಲಕರ್ಣಿ ಮೇಲ್ಮನವಿ ಅರ್ಜಿಯ ವಿಚಾರಣೆ ಸ್ವೀಕರಿಸಿದ ಹೈಕೋರ್ಟ್

28/04/2026 12:35 PM

ಬೆಂಗಳೂರಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ : ಕಾರ್ಮಿಕರು ವಾಸವಿದ್ದ 12 ಶೆಡ್ ಗಳಿಗೆ ಬೆಂಕಿ, ತಪ್ಪಿದ ಭಾರಿ ಅನಾಹುತ!

28/04/2026 12:30 PM

ಮೊಬೈಲ್ ಶಾಪ್ ಆರಂಭಿಸುವ ಪ್ಲಾನ್ ಇದೆಯೇ? ಬೇಕಾಗುವ ಬಂಡವಾಳ ಮತ್ತು ಲಾಭದ ಸಂಪೂರ್ಣ ಮಾಹಿತಿ ಇಲ್ಲಿದೆ

28/04/2026 12:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.