ಬೆಂಗಳೂರು: ಹಾಸನದ ಬೇಲೂರಿನಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇಂತಹ ಮೃತ ಮಹಿಳೆಯ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಘೋಷಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಸೂರಜ್ ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಆನೆ ಮತ್ತು ಮಾನವ ಸಂಘರ್ಷ ಇಂದು, ನಿನ್ನೆಯದಲ್ಲ. ಇದು ಹಲವು ವರ್ಷಗಳಿಂದ ನಡೆಯುತ್ತಿರುವಂತ ಸಂಘರ್ಷವಾಗಿದೆ ಎಂದರು.
ಕೊರೋನಾ ಬಳಿಕ ಹಾಸನದಲ್ಲಿ 4 ರಿಂದ 5 ಜನರು ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ನಾವು ಪರಿಹಾರ ಕೊಡಬಹುದೇ ಹೊರತು, ಜೀವ ವಾಪಾಸ್ ತರಲು ಸಾಧ್ಯವಿಲ್ಲ ಎಂಬುದಾಗಿ ವಿಷಾದ ವ್ಯಕ್ತ ಪಡಿಸಿದರು.
ಕಾಡಾನೆ ಹಾವಳಿ ಸಂಬಂಧ ನಿಯಂತ್ರಣ ಕೊಠಡಿ ಮಾಡಿದ್ದೇವೆ. ಎಲಿಫ್ಯಾಂಟ್ ಟಾಸ್ಕ್ ಪೋರ್ಸ್ ರಚನೆ ಮಾಡಿದ್ದೇವೆ. ಆನೆಗೆ ಬೇಕಾದ ಬಿದಿರು ಮತ್ತು ಇತರೆ ಬೆಳೆ ಬೆಳೆಯಲು ಸೂಚನೆ ನೀಡಲಾಗಿದೆ. ರೈತರ ಬೆಳೆ ಹಾಳಾಗಿದ್ದಕ್ಕೆ ಬೆಲೆ ನಿಗದಿ ಪಡಿಸಲಾಗಿದೆ ಎಂದರು.
ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಕ್ರಮ ಕೈಗೊಳ್ಳುತ್ತೇವೆ. ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಹಾಸನದ ಬೇಲೂರಿನಲ್ಲಿ ಕಾಡಾನೆ ದಾಳಿಯಿಂದ ಮೃತರಾದಂತವರ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು.
ಜನವರಿಯಲ್ಲಿ ಶೇ.2.31ರಷ್ಟಿದ್ದ ಸಗಟು ಹಣದುಬ್ಬರ ಫೆಬ್ರವರಿಯಲ್ಲಿ ಶೇ.2.38ಕ್ಕೆ ಏರಿಕೆ | inflation
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಬೋಧಕ, ಬೋಧಕೇತರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್