ನವದೆಹಲಿ: ಭಾರತದ ಒಳಗೆ ಬರೋದಕ್ಕೆ, ದೇಶದಿಂದ ಹೊರ ಹೋಗೋದಕ್ಕೆ ಇಲ್ಲವೇ ಇಲ್ಲಿ ನೆಲೆಸಲು ನಕಲಿ ಪಾಸ್ ಪೋರ್ಟ್ ಮತ್ತು ವೀಸಾ ಬಳಸಿದರೇ 7 ವರ್ಷ ಅಂತವರಿಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ದಂಡ ವಿಧಿಸುವಂತ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಈ ಸಂಬಂಧ ಕೇಂದ್ರ ಸರ್ಕಾರ ವಿದೇಶಿಯರು ಮತ್ತು ವಲಸೆ ಸಂಬಂಧ ಪ್ರಸ್ತುತ ಇರುವಂತ ಹಲವು ಕಾಯ್ದೆಗಳನ್ನು ಒಟ್ಟುಗೂಡಿಸಿ, ವಲಸೆ ಮತ್ತು ವಿದೇಶಿಯರ ಮಸೂದೆ 2025 ಅನ್ನು ಸಂಸತ್ತಿನಲ್ಲಿ ಮಂಡಿಸಿದೆ. ಈ ಮಸೂದೆಗೆ ಲೋಕಸಭೆ ಹಾಗೂ ರಾಜ್ಯಸಭೆಗಳೆರಡರಲ್ಲೂ ಅನುಮೋದನೆ ದೊರೆತಿದೆ.
ಈ ಹೊಸ ಮಸೂದೆಯ ಅನ್ವಯ ಹೋಟೆಲ್ ಗಳು, ವಿಶ್ವವಿದ್ಯಾಲಯಗಳು ಮತ್ತು ಇತರೆ ವಿದ್ಯಾ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ತಮ್ಮಲ್ಲಿರುವ ವಿದೇಶಿಯರ ಸಂಪೂರ್ಣ ಮಾಹಿತಿಯನ್ನು ಗೃಹ ಸಚಿವಾಲಯಕ್ಕೆ ಒದಗಿಸುವುದು ಕಡ್ಡಾಯವಾಗಿದೆ. ಈ ಮೂಲಕ ವೀಸಾ ಅವಧಇ ಮುಗಿದರೂ ಭಾರತದಲ್ಲೇ ವಾಸಿಸುತ್ತಿರುವ ವಿದೇಶಿಗರನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ.
ಇನ್ನೂ ವಿದೇಶಿಗರು ಆಗಾಗ್ಗೆ ಭೇಟಿ ನೀಡುವ ಸ್ಥಳಗಳ ಮೇಲೆ ನಿಯಂತ್ರಣ ಮತ್ತು ನಿರ್ದಿಷ್ಟ ವರ್ಗದ ವಿದೇಶಿಗರಿಗೆ ಮಾತ್ರ ಪ್ರವೇಶವನ್ನು ನಿಷೇಧಿಸಲು ಕೇಂದ್ರ ಸರ್ಕಾರಕ್ಕೆ ಈ ಮಸೂದೆ ಅಧಿಕಾರವನ್ನು ನೀಡಲಿದೆ.
ರಾಜ್ಯದ ಶೇ.75ರಷ್ಟು ಭೌಗೋಳಿಕ ಪ್ರದೇಶದಲ್ಲಿ ಹೆಚ್ಚಿದ ಉಷ್ಣಾಂಶ: ಸುಡುಬಿಸಿಲಿಗೆ ‘ಕರುನಾಡು ಕೆಂಡ’
BIG NEWS: `ಇ ಖಾತಾ’ ಇಲ್ಲದೆ ಆಸ್ತಿ ನೋಂದಣಿ ಇಲ್ಲ: ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ.!