ನವದೆಹಲಿ: 2000ರಲ್ಲಿ ಗುಜರಾತ್ ನಲ್ಲಿ ನಡೆದ ಗೋಧ್ರಾ ಗಲಭೆಗಳ ಕುರಿತಾದ ಚರ್ಚೆಗಳಲ್ಲಿ ನನ್ನ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಹೆಣೆದಿದ್ದ ಕಟ್ಟು ಕಥೆಗಳಿದ್ದವು. ಹಿಂಸೆಯ ಬಳಿಕ ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು ಅಂದ್ರೆ ಕಾಂಗ್ರೆಸ್ ಪಕ್ಷ ಶಿಕ್ಷೆಯಾಗುವುದನ್ನು ಬಯಸಿದ್ದರು. ಆದರೇ ಕೋರ್ಟ್ ನನ್ನನ್ನು ನಿರ್ದೋಷಿ ಎಂದು ಘೋಷಿಸಿತು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರದಂದು ಪ್ರಸಾರವಾದ ಅಮೇರಿಕಾದ ಖ್ಯಾತ ಫಾಡ್ ಕಾಸ್ಟರ್ ಲಿಕ್ಸ್ ಫ್ರೀಡ್ ಮನ್ ಜೊತೆಗಿನ 3 ಗಂಟೆಗಳ ಫಾಡ್ ಕಾಸ್ಟ್ ನಲ್ಲಿ ಮೋದಿ ಅವರು ಗೋಧ್ರಾ ಗಲಭೆಯ ಕುರಿತಾಗಿ ಪ್ರಸ್ತಾಪಿಸಿದರು. ಆರ್ ಎಸ್ ಎಸ್, ಭಾರತ-ಚೀನಾ ಸಂಬಂಧ, ಅಮೇರಿಕಾ-ಉಕ್ರೇನ್ ಯುದ್ಧ, ಧ್ಯಾನ, ಉಪವಾಸ, ಶಿಕ್ಷಣ, ಬಾಲ್ಯ, ಟ್ರಂಪ್ ಜೊತೆಗಿನ ಸ್ನೇಹ, ಸೇರಿದಂತೆ ಮೊದಲಾದ ವಿಷಯಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಗುಜರಾತ್ ಗಲಭೆ ವಿಷಯದಲ್ಲಿ ನನ್ನನ್ನು ಹೇಗೆ ಬಲಿಪಶು ಮಾಡುವ ಯತ್ನ ನಡೆಯಿತು ಎಂಬ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿಯವರು ಬಿಚ್ಚಿಟ್ಟರು.
2000ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹತ್ತಿದ ನಂತ್ರ ಗುಜರಾತ್ ಗಲಭೆ ನಡೆದಿತ್ತು. ಈ ಗಲಭೆಗೆ ನಾನು ಕಾರಣ ಎಂದು ಬಿಂಬಿಸುವ ಯತ್ನ ನಡೆಯಿತು. ರಾಜಕೀಯ ವಿರೋಧಿಗಳಿಂದ ನನ್ನ ವಿರುದ್ಧ ಸುಳ್ಳು ಕಥೆ ಸೃಷ್ಟಿಸಲಾಗಿತ್ತು. ನನಗೆ ಶಿಕ್ಷೆಯಾಗುವುದನ್ನು ನನ್ನ ವಿರೋಧಿಗಳ ಬಣ ಎದುರು ನೋಡುತ್ತಿತ್ತು. ಆದರೇ ಕೋರ್ಟ್ ನನ್ನ ನಿರ್ದೋಷಿ ಎಂಬುದಾಗಿ ಘೋಷಿಸಿತು ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರ ಹುದ್ದೆಯಿಂದ ‘ಡಿಕೆಶಿ’ ಇಳಿಯೋಕೆ ಡೇಟ್ ಫಿಕ್ಸ್: ‘ಅಕ್ಟೋಬರ್’ವರೆಗೂ ಮಾತ್ರ ಮುಂದುವರಿಕೆ?
BIG NEWS: `ಇ ಖಾತಾ’ ಇಲ್ಲದೆ ಆಸ್ತಿ ನೋಂದಣಿ ಇಲ್ಲ: ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ.!