ಚಿತ್ರದುರ್ಗ: ಜಿಲ್ಲೆಯ ಪ್ರಸಿದ್ಧ ಜಾತ್ರೆಯಲ್ಲಿ ನಾಯಕನಹಟ್ಟಿ ರಥೋತ್ಸವೂ ಒಂದಾಗಿದೆ. ಈ ರಥೋತ್ಸವದ ವೇಳೆಯಲ್ಲಿ ಸ್ವೀಟ್ ಕಾರ್ನ್ ಗಾಡಿಯೊಂದಕ್ಕೆ ದಿಢೀರ್ ಬೆಂಕಿ ಹೊತ್ತಿಕೊಂಡು ಧಗಧಗಿಸಿ ಉರಿದಿದೆ. ಕೂಡಲೇ ಸ್ಥಳದಲ್ಲಿದ್ದವರು ನಂದಿಸಿದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪ್ರಸಿದ್ಧ ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿಯವರ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಇಂದು ನಡೆದಂತ ರಥೋತ್ಸವದ ಸಂದರ್ಭದಲ್ಲೇ ಸ್ವೀಟ್ ಕಾರ್ನ್ ಗಾಡಿಯೊಂದಕ್ಕೆ ಬೆಂಕಿ ಬಿದ್ದಿದೆ. ಇದರಿಂದಾಗಿ ಜಾತ್ರೆಗೆ ಆಗಮಿಸಿದ್ದಂತ ಭಕ್ತರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ.
ಸ್ವೀಟ್ ಕಾರ್ನ್ ಗಾಡಿಗೆ ಹೊತ್ತಿಕೊಂಡಿದ್ದಂತ ಬೆಂಕಿಯನ್ನು ಸ್ಥಳದಲ್ಲಿದ್ದಂತ ಕಾರ್ಯಕರ್ತರು ನಂದಿಸಿದ್ದಾರೆ. ಈ ಹೀಗಾಗಿ ಕಾರ್ಯಕರ್ತರ ಸಮಯಪ್ರಜ್ಞೆಯಿಂದ ದುರಂತವೊಂದು ತಪ್ಪಿದಂತೆ ಆಗಿದು. ನಾಯಕನಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
‘ಫಸಲ್ ಬಿಮಾ ಯೋಜನೆ’ ಇನ್ನಷ್ಟು ರೈತಸ್ನೇಹಿಯಾಗಿಸಿ: ಕೇಂದ್ರ ಕೃಷಿ ಸಚಿವರಿಗೆ ಸಂಸದ ಬೊಮ್ಮಾಯಿ ಪತ್ರ
SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಕಲ್ಬುರ್ಗಿಯಲ್ಲಿ ‘ಮಂಗಳಮುಖಿಯನ್ನು’ ಬೆತ್ತಲೆಗೊಳಿಸಿ, ತಲೆ ಬೋಳಿಸಿ ಹಲ್ಲೆ!