ಚಿತ್ರದುರ್ಗ: ಆ ವರ ನಿಗದಿತ ಸಮಯಕ್ಕೆ ಬಾರದೇ ರಾತ್ರಿ 9.30ಕ್ಕೆ ಚೌಟರಿಗೆ ಆಗಮಿಸಿದ್ದರು. ಹೀಗಾಗಿ ರಾತ್ರಿ ನಡೆಯಬೇಕಿದ್ದಂತ ಆರತಕ್ಷತೆಯೇ ನಡೆದಿರಲಿಲ್ಲ. ಈ ಬಳಿಕ ವರನ ಕೊಠಡಿಗೆ ನೀರಿಟ್ಟಿಲ್ಲ. ನೀರು ಕೊಟ್ಟಿಲ್ಲ, ರಾತ್ರಿ ಊಟವೂ ವರನ ಕಡೆಯ ಸಂಬಂಧಿಕರಿಗೆ ಸಿಕ್ಕಿಲ್ಲ ಅಂತ ಜಗಳ ಉಂಟಾಗಿದೆ. ಈ ಜಗಳ ತಾರಕಕ್ಕೇರಿ ಇಂದು ನಡೆಯಬೇಕಿದ್ದಂತ ಮದುವೆಯೇ ಮುರಿದು ಬಿದ್ದಿರುವಂತ ಘಟನೆ ಹಿರಿಯೂರು ಪಟ್ಟಣದಲ್ಲಿ ನಡೆದಿದೆ.
ನೀರು, ಊಟದ ವಿಚಾರಕ್ಕೆ ಜಗಳ, ಮದುವೆ ಕ್ಯಾನ್ಸಲ್
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಲಿಜ ಸಮುದಾಯ ಭವನದಲ್ಲಿ ಜಗಳೂರು ಮೂಲದ ವರ ಹಾಗೂ ಶಿರಾ ಮೂಲದ ವಧುವಿನ ಮದುವೆ ನಿಗದಿಯಾಗಿತ್ತು. ನಿನ್ನೆ ರಾತ್ರಿ ವರ ಆರತಕ್ಷತೆಯ ಸಮಯಕ್ಕೆ ಬಾರದೇ ರಾತ್ರಿ 9.30ಕ್ಕೆ ಆಗಮಿಸಿದ್ದರಿಂದ ರಿಸೆಪ್ಷನ್ ಕೂಡ ನಡೆಯದೇ ರದ್ದುಗೊಂಡಿತ್ತು. ಆ ನಂತ್ರ ಊಟಕ್ಕೆ ತೆರಳಿದಂತ ವರನ ಕಡೆಯ ಕೆಲವರಿಗೆ ಊಟ ಮುಗಿದಿದ್ದರಿಂದ ಖಾಲಿಯಾಗಿದ್ದಕ್ಕೆ ಗಲಾಟೆ ಕೂಡ ಮಾಡಲಾಗಿತ್ತಂತೆ.
ಈ ಗಲಾಟೆ ತಾರಕಕ್ಕೇರಿದ್ದರಿಂದ ವರನ ರೂಮಿನಲ್ಲಿ ನೀರು ಇಟ್ಟಿಲ್ಲ ಎಂಬುದಕ್ಕೂ ಕಿರಿಕ್ ತೆಗೆದಂತ ಸಂಬಂಧಿಕರು, ವಧುವಿನ ಕಡೆಯವರ ವಿರುದ್ಧ ಕೂಗಾಡಿ ಗಲಾಟೆ ಮಾಡಿದ್ದಾರೆ. ಈ ಗಲಾಟೆ ತಾರಕಕ್ಕೇರಿದಾಗ ವರ ನನಗೆ ಈ ಮದುವೆಯೇ ಬೇಡ ಅಂತ ಹಠ ಮಾಡಿದ್ದಾರೆ.
ವಧು-ವರ ಇಬ್ಬರೂ ಇಂಜಿನಿಯರ್
ಅಂದಹಾಗೇ ಇಂದು ಬೆಳಿಗ್ಗೆ 10.30 ರಿಂದ 11.30ರ ಒಳಗಾಗಿ ಜಗಳೂರು ಮೂಲದ ವರ ಹಾಗೂ ಶಿರಾ ಮೂಲದ ವಧುವಿಗೆ ಹಿರಿಯೂರು ನಗರದ ಬಲಿಜ ಸಮುದಾಯ ಭವನದಲ್ಲಿ ಮುಹೂರ್ತ ನಡೆಯಬೇಕಿತ್ತು. ಅಂದುಕೊಂಡಂತೆ ನಡೆದಿದ್ದರೇ ಮುಗಿದೂ ಹೋಗುತ್ತಿತ್ತು. ಆದರೇ ಊಟ ಖಾಲಿಯಾಗಿದ್ದು, ನೀರು ಕೊಡದಿದ್ದದ್ದಕ್ಕೇ ಜಗಳ ತೆಗೆದು ರದ್ದುಗೊಂಡಿದೆ. ಹೀಗೆ ರದ್ದುಗೊಂಡಿರುವ ಮದುವೆಯಾಗ ಬೇಕಿದ್ದಂತ ವಧು- ವರ ಇಬ್ಬರೂ ಇಂಜಿನಿಯರ್ ಎಂಬುದಾಗಿ ತಿಳಿದು ಬಂದಿದೆ.
ಲವ್ ಕಂ ಅರೇಂಜ್ ಮ್ಯಾರೇಜ್
ಜಗಳೂರು ಮೂಲದ ಯುವಕ ಹಾಗೂ ಶಿರಾ ಮೂಲದ ಯುವತಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಒಂದೇ ಸಮುದಾಯಕ್ಕೆ ಸೇರಿದ್ದವರಾಗಿದ್ದರಿಂದ ಮನೆಯವರನ್ನು ಒಪ್ಪಿಸಿ ಮದುವೆಗೆ ನಿಗದಿ ಮಾಡಿದ್ದರು. ನಿನ್ನೆ ರಾತ್ರಿ ರಿಸೆಪ್ಷನ್, ಇಂದು ಮುಹೂರ್ತ ನಿಗದಿಯಾಗಿತ್ತು. ಆದರೇ ಲವ್ ಕಂ ಅರೇಂಜ್ ಮದುವೆಗೆ ಮುಂದಾಗಿದ್ದಂತ ಇಬ್ಬರ ಮದುವೆ ಈಗ ಗಲಾಟೆಯ ಕಾರಣಕ್ಕೆ ಮುರಿದು ಬಿದ್ದಿದೆ.
ವಧು-ವರ ಇಬ್ಬರೂ ಮದುವೆ ಬೇಡವೆಂದು ಹಠ, ವಿವಾಹ ಕ್ಯಾನ್ಸಲ್
ವರ ನಿನ್ನೆ ರಾತ್ರಿ ಊಟ ನಮ್ಮವರ ಕಡೆಗೆ ಕೊಟ್ಟಿಲ್ಲ, ನನ್ನ ರೂಮಲ್ಲಿ ನೀರು ಇಟ್ಟಿಲ್ಲ ಎನ್ನುವ ಕಾರಣಕ್ಕೆ ಆ ಯುವತಿಯೊಂದಿಗೆ ಮದುವೆ ಬೇಡ ಅಂತ ಹಠ ಹಿಡಿದಿದ್ದಾನೆ. ಆದರೇ ಯುವತಿಯ ಕುಟುಂಬಸ್ಥರು ಮನವೊಲಿಸಿದ್ದರಿಂದ ವಧು ಇಂದು ಹಸೆಮಣೆ ಏರೋದಕ್ಕೆ ಮುಂದಾಗಿದ್ದಾಳೆ. ಆದರೇ ವರನ ಕಡೆಯವರು ಅಗ್ರಿಮೆಂಟ್ ಮಾಡಿಕೊಳ್ಳೋ ವಿಷಯವನ್ನು ಪ್ರಸ್ತಾಪಿಸಿದಾಗ, ವಧು ತಿರುಗಿ ಬಿದ್ದಿದ್ದಾಳೆ. ಈಗಲೇ ಇಷ್ಟು ಕಿರಿಕ್, ಇನ್ನೂ ಮದುವೆಯಾಗಿ ಹೋದ್ರೆ ಇನ್ನೆಷ್ಟು ಅಂತ ನನಗೂ ಈ ಮದುವೆ ಬೇಡ ಅಂತ ಮುರಿದುಕೊಂಡಿದ್ದಾಳೆ. ಕೊನೆಗೆ ಇಂದು ನಡೆಯಬೇಕಿದ್ದಂತ ಮದುವೆ ರದ್ದಾಗಿದೆ.
SHOCKING : ರಾಜ್ಯದಲ್ಲಿ ಅಮಾನವೀಯ ಘಟನೆ : ಕಲ್ಬುರ್ಗಿಯಲ್ಲಿ ‘ಮಂಗಳಮುಖಿಯನ್ನು’ ಬೆತ್ತಲೆಗೊಳಿಸಿ, ತಲೆ ಬೋಳಿಸಿ ಹಲ್ಲೆ!
ಹೋಳಿ ಪಾರ್ಟಿಯಲ್ಲಿ ಕುಡಿದ ಮತ್ತಿನಲ್ಲಿ ಸಹನಟನಿಂದ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ: ದೂರು ದಾಖಲು