ಬೆಂಗಳೂರು: ನಗರದಲ್ಲಿ ಕಾವೇರಿ ನೀರು ಸರಬರಾಜಿನ ದರವನ್ನು ಪ್ರತಿ ಲೀಟರ್ ಗೆ ಕೇವಲ 1 ಪೈಸೆ ಏರಿಕೆ ಮಾಡುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಸದನದಲ್ಲೇ ಘೋಷಿಸಿದ್ದರು. ಜಸ್ಟ್ 1 ಪೈಸೆ ಪ್ರತಿ ಲೀಟರ್ ಗೆ ನೀರಿನ ದರ ಹೆಚ್ಚಳ ಮಾಡಿದ್ರೂ, ಬೆಂಗಳೂರು ಜನರಿಗೆ ಶೇ.50 ರಿಂದ 90ರಷ್ಟು ದರದ ಹೊರೆ ಬೀಳೋದು ಫಿಕ್ಸ್ ಆದಂತೆ ಆಗಿದೆ. ಅದು ಹೇಗೆ ಅಂತ ಮುಂದೆ ಓದಿ.
ಕುಡಿಯುವ ನೀರಿನ ದರವನ್ನು ಪ್ರತಿ ಲೀಟರ್ ಗೆ 1 ಪೈಸೆ ಹೆಚ್ಚಳ ಮಾಡಿದರೆ ಜನ ಸಾಮಾನ್ಯರಿಗೆ ಭಾರೀ ಹೊರೆಯಾಗಲಿವೆ. ಆದರೆ, ಸ್ಲಾಬ್ ದರದ ಮೇಲೆ 1 ಪೈಸೆ ಏರಿಕೆ ಮಾಡಿದರೆ ಅಂಥಾ ಹೊರ ಆಗಲಾರದು. ಜಲಮಂಡಳಿಯು 2014ರಲ್ಲಿ ಕಾವೇರಿ ನೀರಿನ ದರ ಏರಿಕೆ ಮಾಡಿತ್ತು. ಪ್ರಸ್ತುತ ನಗರದಲ್ಲಿ ಮನೆಗಳಿಗೆ 50 ರೂ. ಕನಿಷ್ಠ ಬೆಲೆ ನಿಗದಿಪಡಿಸಲಾಗಿದೆ. ಇದಲ್ಲದೆ, 100 ರೂ. ಅಥವಾ ನೀರಿನ ಶುಲ್ಕದ ಶೇ.25 ಸ್ಯಾನಿಟರಿ ಶುಲ್ಕವಿದೆ. ಅದರ ಜತೆಗೆ, ಬಳಸುವ ನೀರಿನ ಪ್ರಮಾಣದ ಮೇಲೆ ನೀರಿನ ಶುಲ್ಕ ವಿಧಿಸಲಾಗುತ್ತಿದೆ. ಹೀಗಿದೆಲೆಕ್ಕಾಚಾರ: ಸದ್ಯದ ದರದ ಪ್ರಕಾರ ಗೃಹಬಳಕೆಯ ನೀರಿನ ಶುಲ್ಕವನ್ನು 4 ಸ್ಪ್ಯಾಬ್‌ಗಳಲ್ಲಿ ವಿಂಗಡಿಸಲಾಗಿದೆ.
ಆರಂಭಿಕ 80 ಲೀ. ಸ್ವಾಬ್‌ನಲ್ಲಿ ಪ್ರತಿ 1000 ಲೀ.ಗೆ 7 ರೂ. ಶುಲ್ಕ ವಿಧಿಸಲಾ ಗುತ್ತಿದೆ. 800ರಿಂದ 2500 ಲೀ. ವರಗೆ ಪ್ರತಿ1000 ಲೀ.ಗೆ 11 ರೂ. ದರವಿದೆ ಹಾಗೆಯೇ, 25001 ರಿಂದ 50000 ಲೀ.ವರೆಗಿನ ಬಳಕೆಗೆ ಪ್ರತಿ 1000 . ಲೀ.ಗೆ 25 ರೂ. ಮತ್ತು 5KM1ರಿಂದ ಮೇಲ್ಪಟ್ಟ ಬಳಕೆಗೆ ಪ್ರತಿ 1000 ಲೀ.ಗೆ 45 ರೂ. ದರವಿದೆ. ಒಂದು ವೇಳೆ ನೀರಿನ ಶುಲ್ಕವನ್ನು ಲೀಟರ್‌ಗೆ 1 ಪೈಸೆ ಹೆಚ್ಚಿಸಿದ್ದೇ ಆದಲ್ಲಿ ಮೊದಲ ಸ್ಟ್ರಾಬ್‌ನಲ್ಲಿ ನೀರಿನ ದರ ಪ್ರತಿ 1000 ಲೀ.ಗೆ 1ರ ಬದಲು 17 ರೂ., 2ನೇ ಸ್ಟ್ರಾಬ್‌ನಲ್ಲಿ 11ರ ಬದಲು 21 ರೂ., 3ನೇ ಸ್ಟ್ರಾಬ್‌ನಲ್ಲಿ 25ರ ಬದಲು 35 ರೂ., ಕಡೆಯ ಸ್ವಾಬ್‌ನಲ್ಲಿ 45ರ ಬದಲು 55 ರೂ. ಆಗಲಿದೆ.
ಇದನ್ನು ಸರಳವಾಗಿ ಹೇಳುವುದಾದರೆ, 8000 ಲೀ. ಸ್ಲಾಬ್ ಒಳಗಿನ ನೀರಿನ ಬಳಕೆಗೆ ಪ್ರತಿ ಲೀಟರ್ ಗೆ 0.7 ಪೈಸೆ ಇದ್ದರೆ, 50000 ಲೀ. ಮೇಲ್ಪಟ್ಟ ಫ್ಲ್ಯಾಬ್‌ನಲ್ಲಿ ಪ್ರತಿ ಲೀಟರ್ ಗೆ 4.5 ಪೈಸೆ ಇದೆ. ಒಂದು ವೇಳೆ, ಪ್ರತಿ ಲೀಟರ್ ನೀರಿನ ದರ 1 ಪೈಸೆಯಷ್ಟು ಹೆಚ್ಚಿಸಿದರೆ ಕನಿಷ್ಠ ಸ್ವಾಬ್‌ನಲ್ಲಿ ಪ್ರತಿ ಲೀಟರ್ ನೀರಿನ ದರ 1.7 ಪೈಸೆಗೆ ಹೆಚ್ಚಳವಾಗಲಿದೆ. ಅಂತೆಯೇ, 500 ಲೀ. ಮೇಲ್ಪಟ್ಟ ಗರಿಷ್ಠ ಸ್ಟ್ರಾಬ್‌ನಲ್ಲಿ ನೀರಿನ ದರ ಪ್ರತಿ ಲೀಟರ್‌ಗೆ 5.5 ಮೈಸೆಗೆ ಏರಿಕೆಯಾಗಲಿದೆ.
ಉದಾಹರಣೆಗೆ, ಪ್ರತಿ ತಿಂಗಳು 25 ಸಾವಿರ ಲೀ, ಬಳಸುವ ಮನೆ ನೀರಿಗೆ ಪ್ರಸಕ್ತ 243 ರೂ. ಶುಲ್ಕ ಪಾವತಿಸುತ್ತಿದ್ದರೆ, ಪರಿಷ್ಕೃತ ದರ 493 ರೂ. ಆಗಲಿದೆ, ಅದೇ 50000 ಲೀ. ಬಳಸುವ ಮನೆಗೆ ಹಾಲಿ 812 ರೂ. ನೀರಿನ ಶುಲ್ಕವಿದ್ದರೆ, ಮುಷ್ಕ ತ ದರ 1312 ರೂ.ಗೆ ಏರಿಕೆ ಯಾಗಲಿದೆ. ಅಂದರೆ, ನೀರಿನ ಶುಲ್ಕ ಸುಮಾರು ಶೇ.50ರಿಂದ ಶೇ.90ರಷ್ಟು ಹೆಚ್ಚಾಗಲಿದೆ.
ಆದರೆ, ಸ್ವಾಟ್ ದರದ ಮೇಲೆ 1 ಪೈಸೆ ಹೆಚ್ಚಿಸಿದರೆ ಒಟ್ಟಾರೆ ಶುಲ್ಕ ಏರಿಕೆ ಮೇಲೆ ದೊಡ್ಡ ಪರಿಣಾಮವೇನೂ ಬೀರದು. ಹೆಚ್ಚೆಂದರೆ, ಕನಿಷ್ಠ 2ರಿಂದ 5 ರೂ.ಗಳವರೆಗೆ ಹೆಚ್ಚಾಗಬಹುದು. ಹೀಗಾಗಿ ಜಲಮಂಡಳಿಯು ಯಾವ ರೀತಿಯಲ್ಲಿ ದರವನ್ನು ಏರಿಕೆ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ ಏತನ್ಮಧ್ಯೆ, ವಾಣಿಜ್ಯ ಉಪಯೋಗಕ್ಕೆ ಬಳಸುವ ನೀರಿನ ದರ ಇನ್ನೂ ಹೆಚ್ಚಿದ್ದು, ಅದರ ಪರಿಷ್ಕರಣೆ ಲೀಟರ್ ಲೆಕ್ಕದಲ್ಲೇ ಆದಲ್ಲಿ ಉದ್ಯಮ ವಲಯಕ್ಕೆ ಬಹುದೊಡ್ಡ ಹೊರೆಯಾಗುವ ಸಾಧ್ಯತೆ ಇದೆ.
Heat Wave: ಮಧ್ಯಾಹ್ನ 12 ರಿಂದ 3ರವರೆಗೆ ಮನೆ, ಕಚೇರಿಯಿಂದ ಹೊರಬರಬೇಡಿ: ಸಚಿವ ದಿನೇಶ್ ಗುಂಡೂರಾವ್ ಸಲಹೆ
BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!