Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭ - Thalapathy Vijay Swearing-in Ceremony as Tamil Nadu CM

ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ: ಇಂದು ಸಿಎಂ ವಿಜಯ್‌ ವಿಶ್ವಾಸಮತ ಯಾಚನೆ; ಎಡಿಎಂಕೆ ಬಂಡಾಯ ಶಾಸಕರ ಬೆಂಬಲ!

ALERT : ಅತಿಯಾಗಿ `ಕೋಲ್ಡ್‌ ಡ್ರಿಂಕ್ಸ್‌’ ಕುಡಿಯುವವರೇ ಎಚ್ಚರ : ನಿಮ್ಮ ಜೀರ್ಣಕ್ರಿಯೆಗೆ ಕಾದಿದೆ ಸಂಕಷ್ಟ | Cold drinks

ALERT : ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ 5 ಕೆಟ್ಟ ಅಭ್ಯಾಸಗಳಿವು: ಇಂದೇ ಬಿಟ್ಟುಬಿಡಿ | 5 Bad Habits

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಸೈಬರ್ ತರಬೇತಿ: ಗೃಹ ಸಚಿವ ಡಾ.ಜಿ ಪರಮೇಶ್ವರ್
KARNATAKA

ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಸೈಬರ್ ತರಬೇತಿ: ಗೃಹ ಸಚಿವ ಡಾ.ಜಿ ಪರಮೇಶ್ವರ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು : ರಾಜ್ಯದ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ಅರಿವು ಮತ್ತು ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಸಿಐಡಿ ಹಾಗೂ ಸೈಬರ್ ಕ್ರೈಮ್ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ “CIDECODE” ಸೈಬರ್ ಅಪರಾಧ ಶೃಂಗಸಭೆ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೈಬರ್ ಅಪರಾಧಗಳಿಗೆ ಯಾವುದೇ ರೀತಿಯ ಇತಿಮಿತಿಗಳಿಲ್ಲ. ಪ್ರಪಂಚದಲ್ಲಿ ಆಗುತ್ತಿರುವ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಸಿಸಿಐಟಿಆರ್ ಸ್ಥಾಪಿಸಲಾಗಿದೆ. ಈವರೆಗೆ 46 ಸಾವಿರಕ್ಕು ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

2023ರಲ್ಲಿ 22 ಸಾವಿರ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಬ್ಯಾಂಕ್ ಅಕೌಂಟ್, ಡೇಟಾ ಹ್ಯಾಕ್, ಸರ್ಕಾರಿ ಖಾತೆಗಳು ಹ್ಯಾಕ್‌ ಆಗುವುದು ಸೇರಿದಂತೆ ನಾನಾ ರೀತಿಯ ಸೈಬರ್ ಅಪರಾಧಗಳು ಆಗುತ್ತಿವೆ. ಇದನ್ನು ತಡೆಗಟ್ಟದೆ ಹೋದರೆ ಮುಂದಿನ ದಿನಗಳಲ್ಲಿ ತೊಂದರೆಗಳಾಗುತ್ತವೆ. ಸಾಮಾನ್ಯ ಅಪರಾಧಗಳಿಗಿಂತ ಸೈಬರ್ ಕ್ರೈಂ ಹೆಚ್ಚಾಗುತ್ತಿವೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ದಸಖಲಾಗುತ್ತಿರುವ ಸಾಮಾನ್ಯ ಅಪರಾಧಗಳಲ್ಲಿ ಶೇ. 30ರಷ್ಟು ಸೈಬರ್ ಅಪರಾಧಗಳು ದಾಖಲಾಗುತ್ತಿವೆ. ವೈಟ್‌ಫೀಲ್ಡ್ ವಿಭಾಗದ ವ್ಯಾಪ್ತಿಯಲ್ಲಿ ಶೇ.40ರಷ್ಟು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಇದು ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಆರಂಭಿಕ ಹಂತದಲ್ಲೆ ಹೆಚ್ಚು ಫೋಕಸ್ ಮಾಡಿ ತಡೆಗಟ್ಟಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ತಂತ್ರಜ್ಞಾನ ಮತ್ತು ತರಬೇತಿಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಜಾಗತಿಕವಾಗಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟಲು ತಾಂತ್ರಿಕ ಬಲವರ್ಧನೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಿಐಡಿ ಡಿಕೋಡ್ ಶೃಂಗಸಭೆಯು ಸಹಕಾರಿಯಾಗಲಿದೆ. ಹ್ಯಾಕಥಾನ್ ಮತ್ತು ಸೈಬರ್ ಲಾ ಐಡಿಯಾಥಾನ್‌ನಂತಹ ಕಾರ್ಯಕ್ರಮಗಳು ಸುರಕ್ಷಿತ ಡಿಜಿಟಲ್ ಕರ್ನಾಟಕ ಮತ್ತು ಸುರಕ್ಷಿತ ಭಾರತವನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ತನಿಖಾ ವಿಭಾಗವು (ಸಿಐಡಿ) ಆಯೋಜಿಸಿದ್ದ ಹ್ಯಾಕಥಾನ್ ಮತ್ತು ಸೈಬರ್ ಲಾ ಐಡಿಯಾಥಾನ್‌ಗಳಲ್ಲಿ ಭಾಗವಹಿಸಿ, ಡೀಪ್ ಫೇಕ್ ಪತ್ತೆ, ಬ್ಲಾಕ್ ಚೈನ್ ತಂತ್ರಜ್ಞಾನ ಬಳಕೆ ಸೇರಿದಂತೆ ಇನ್ನಿತರ ಸೈಬರ್ ಅಪರಾಧಗಳಿಗೆ ಸಮಸ್ಯೆಗಳನ್ನು ಬಗೆಹರಿಸಲು ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ಬಹುಮಾನ ನೀಡಿ ಅಭಿನಂದಿಸಿದರು.

BREAKING NEWS: ನನ್ನ ತಪಾಸಣೆ ಮಾಡಿಲ್ಲ, ನನ್ನಿಂದ ಏನೂ ವಶಕ್ಕೆ ಪಡೆದಿಲ್ಲ, ನಾನು ನಿರ್ದೋಷಿ: ನಟಿ ರನ್ಯಾ ರಾವ್

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!

Share. Facebook Twitter LinkedIn WhatsApp Email

Related Posts

ALERT : ಅತಿಯಾಗಿ `ಕೋಲ್ಡ್‌ ಡ್ರಿಂಕ್ಸ್‌’ ಕುಡಿಯುವವರೇ ಎಚ್ಚರ : ನಿಮ್ಮ ಜೀರ್ಣಕ್ರಿಯೆಗೆ ಕಾದಿದೆ ಸಂಕಷ್ಟ | Cold drinks

1 Min Read

ALERT : ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ 5 ಕೆಟ್ಟ ಅಭ್ಯಾಸಗಳಿವು: ಇಂದೇ ಬಿಟ್ಟುಬಿಡಿ | 5 Bad Habits

2 Mins Read

ALERT : ಸಾರ್ವಜನಿಕರೇ ಎಚ್ಚರ : ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ತಾಪಮಾನ ಭಾರೀ ಏರಿಕೆ | Temperature rise

1 Min Read
Recent News
ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭ - Thalapathy Vijay Swearing-in Ceremony as Tamil Nadu CM

ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ: ಇಂದು ಸಿಎಂ ವಿಜಯ್‌ ವಿಶ್ವಾಸಮತ ಯಾಚನೆ; ಎಡಿಎಂಕೆ ಬಂಡಾಯ ಶಾಸಕರ ಬೆಂಬಲ!

ALERT : ಅತಿಯಾಗಿ `ಕೋಲ್ಡ್‌ ಡ್ರಿಂಕ್ಸ್‌’ ಕುಡಿಯುವವರೇ ಎಚ್ಚರ : ನಿಮ್ಮ ಜೀರ್ಣಕ್ರಿಯೆಗೆ ಕಾದಿದೆ ಸಂಕಷ್ಟ | Cold drinks

ALERT : ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ 5 ಕೆಟ್ಟ ಅಭ್ಯಾಸಗಳಿವು: ಇಂದೇ ಬಿಟ್ಟುಬಿಡಿ | 5 Bad Habits

ನೀಟ್ ಪೇಪರ್ ಲೀಕ್ ಜಾಲ ಪತ್ತೆ: ನಾಸಿಕ್‌ನಿಂದ ಹರಿಯಾಣದ ಮೂಲಕ ರಾಜಸ್ಥಾನ ತಲುಪಿದ್ದ ಪ್ರಶ್ನೆಪತ್ರಿಕೆ : ಎಸ್‌ಒಜಿ ಐಜಿ ಮಾಹಿತಿ!

State News
KARNATAKA

ALERT : ಅತಿಯಾಗಿ `ಕೋಲ್ಡ್‌ ಡ್ರಿಂಕ್ಸ್‌’ ಕುಡಿಯುವವರೇ ಎಚ್ಚರ : ನಿಮ್ಮ ಜೀರ್ಣಕ್ರಿಯೆಗೆ ಕಾದಿದೆ ಸಂಕಷ್ಟ | Cold drinks

By kannadanewsnow57 KARNATAKA 1 Min Read

ಬೆಂಗಳೂರು: ಬೇಸಿಗೆಯ ಬಿಸಿಲಿನಿಂದ ಪಾರಾಗಲು ಅಥವಾ ಬಾಯಾರಿಕೆ ತಣಿಸಲು ನಾವೆಲ್ಲರೂ ಕೋಲ್ಡ್‌ ಡ್ರಿಂಕ್ಸ್‌ಗಳ (ತಂಪು ಪಾನೀಯ) ಮೊರೆ ಹೋಗುವುದು ಸಾಮಾನ್ಯ.…

ALERT : ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ 5 ಕೆಟ್ಟ ಅಭ್ಯಾಸಗಳಿವು: ಇಂದೇ ಬಿಟ್ಟುಬಿಡಿ | 5 Bad Habits

ALERT : ಸಾರ್ವಜನಿಕರೇ ಎಚ್ಚರ : ಮುಂದಿನ 5 ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ತಾಪಮಾನ ಭಾರೀ ಏರಿಕೆ | Temperature rise

ರಾಜ್ಯದ ಜನತೆಯ ಗಮನಕ್ಕೆ: `ಲೋಕಾಯುಕ್ತಕ್ಕೆ ದೂರು’ ಸಲ್ಲಿಸುವುದು ಹೇಗೆ? ಇಲ್ಲಿವೆ ಅಗತ್ಯ ನಮೂನೆಗಳು | Lokayukta

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.