ಬೆಂಗಳೂರು: ಕೋರ್ಟ್ ಗೆ ಹಾಜರಾಗುವವರೆಗೂ ನನಗೆ ಊಟ ಕೊಟ್ಟಿಲ್ಲ. ನನಗೆ ಸರಿಯಾಗಿ ನಿದ್ರೆ ಮಾಡೋಕೆ ಬಿಟ್ಟಿಲ್ಲ. ಅಧಿಕಾರಿಗಳು ಉದ್ದೇಶಪೂರ್ವಗಾವಿ ಹೀಗೆ ಮಾಡಿದ್ದಾರೆ. ನನಗೆ ಹಿಂಸೆ ಕೊಟ್ಟಿದ್ದಲ್ಲೇ ಕಣ್ಣೀರು ಬರುವಂತೆ ಹೊಡೆದ್ರು. ನನ್ನ ತಂದೆ, ಕುಟುಂಬದವರನ್ನ ಕೂಡ ಬೆದರಿಸುತ್ತಿದ್ದರು. ಅಧಿಕಾರಿಗಳ ವಿರುದ್ಧ ದೂರಿನಲ್ಲಿ ನಟಿ ರನ್ಯಾ ರಾವ್ ಉಲ್ಲೇಖ ಮಾಡಿದ್ದಾರೆ.
ನಟಿ ರನ್ಯಾ ರಾವ್ ಚಿನ್ನ ಸಾಗಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡಿ ಆರ್ ಐ ಅಧಿಕಾರಿಗಳ ವಿರುದ್ಧವೇ ದೂರಿನ ಸುರಿಮಳೆ ಮಾಡಿದ್ದಾರೆ. ಅದರಲ್ಲಿ ನನ್ನ ಮುಖಕಕ್ಕೆ 10 ರಿಂದ 15 ಬಾರಿ ಹೊಡೆದಿದ್ದಾರೆ. 40 ಖಾಲಿ ಹಾಳೆಗಳಲ್ಲಿ ಸಹಿ ಮಾಡಿಸಿಕೊಂಡಿದ್ದಾರೆ. ನನ್ನ ತಂದೆಗೂ ಇದಕ್ಕೂ ಸಂಬಂಧವಿಲ್ಲ. ಆದರೂ ಬೆದರಿಕೆ ಹಾಕಿದ್ದಾರೆ. ನನ್ನ ಮೇಲೆ ಒತ್ತಡ ಹಾಕಿ, ಚಿತ್ರ ಹಿಂಸೆ ನೀಡಿದ್ದಾರೆ ಎಂದಿದ್ದಾರೆ.
ನನಗೆ ಹೊಡೆದ ಅಧಿಕಾರಿಗಳನ್ನು ನಾನು ಗುರುತಿಸುತ್ತೇನೆ. ನನ್ನ ಹತ್ತಿರ ಖಾಲಿ ಹಾಳೆಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಸಾಕ್ಷ್ಯ ಪತ್ರಗಳಲ್ಲಿ 50 ರಿಂದ 60 ಪುಟಗಳಲ್ಲಿ ಸಹಿ ಮಾಡಿದ್ದೇನೆ. ನನಗೆ ಸರಿಯಾಗಿ ನಿದ್ರೆ ಮಾಡೋಕೆ ಬಿಟ್ಟಿಲ್ಲ. ಚಿತ್ರ ಹಿಂಸೆ ಕೊಟ್ಟಿದ್ದಾರೆ ಎಂಬುದಾಗಿ ದೂರಿದ್ದಾರೆ.
ನಾನು ನಿರ್ದೋಷಿಯಾಗಿದ್ದೇನೆ. ನನ್ನ ಮೇಲೆ ಒತ್ತಡ ಹಾಕಿ, ಹಿಂಸೆ ಕೊಟ್ಟಿದ್ದಾರೆ. ಅವರ ಹಿಂಸೆಯಿಂದಾಗಿ ನಾನು ಖಾಲಿ ಹಾಳೆಗಳಿಗೆ ಸಹಿ ಹಾಕಿದ್ದೇನೆ. ನನ್ನನ್ನು ತಪಾಸಣೆ ಮಾಡಿಲ್ಲ. ನನ್ನಿಂದ ಏನೂ ವಶಪಡಿಸಿಕೊಂಡಿಲ್ಲ ಎಂಬುದಾಗಿಯೂ ಉಲ್ಲೇಖಿಸಿದ್ದಾರೆ.
ಬೆಂಗಳೂರು ಜನತೆಗೆ ಮತ್ತೊಂದು ಶಾಕ್: ಏಪ್ರಿಲ್ ನಿಂದ ಕಸಕ್ಕೆ ಶುಲ್ಕ, ನೀರಿನ ದರ 1 ಪೈಸೆ ಏರಿಕೆ
BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ತಗುಲಿ ಯುವತಿ ಸಾವು!