ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಹೇಯ ಕೃತ್ಯವೊಂದು ನಡೆದಿದ್ದು, ಕಾಮುಕನೊಬ್ಬ ನಾಯಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಗಾಯಗೊಳಿಸಿ ವಿಕೃತಿ ಮೆರೆದಿದ್ದಾನೆ.
ಹೌದು, ಬೆಂಗಳೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲಿನಿ ಗ್ರೌಂಡ್ ಸಮೀಪ ನಡೆದಿದೆ. ಕಾಮುಕನೊಬ್ಬ ನಾಯಿಯ ಮರ್ಮಾಂಗ ಕೊಯ್ದು ಸಂಭೋಗ ನಡೆಸಿದ ಆರೋಪ ಕೇಳಿ ಬಂದಿದೆ. ಸಾರ್ವಜನಿಕರು ಇದನ್ನು ಗಮನಿಸಿ ವ್ಯಕ್ತಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಯನಗರದ ಸುತ್ತಮುತ್ತ ವಿದ್ಯಾ ಎಂಬುವರು ನಾಯಿಗಳಿಗೆ ಪ್ರತಿದಿನ ಊಟ ಹಾಕುತ್ತಾರೆ. ಮಾರ್ಚ್ 13ರಂದು ರಾತ್ರಿ ನಾಯಿಗೆ ಊಟ ಹಾಕಲು ಹೋಗಿದ್ದ ವೇಳೆ ವ್ಯಕ್ತಿಯೊಬ್ಬ ನಾಯಿಯೊಂದಿಗೆ ಸಂಭೋಗ ಮಾಡುತ್ತಿರುವುದನ್ನು ಗಮನಿಸಿ ಕೂಡಲೇ ನಾಯಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಅದೇ ದಿನ ಶಾಲಿನಿ ಮೈದಾನದ ಬಳಿ ವಿದ್ಯಾ ಹೋಗಿದ್ದಾಗ ಅದೇ ವ್ಯಕ್ತಿ ಕಂಡಿದ್ದಾನೆ. ಆತನನ್ನು ಸ್ಥಳಿಯರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.