ಬೆಂಗಳೂರು : ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಇರುವ ಅರ್ಹತೆಗಳು, ನಿಯಮಗಳೇನು ಎಂಬುದರ ಕುರಿತಂತೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14)ರ 8ನೇ ಪ್ರಕರಣದೊಂದಿಗೆ ಓದಲಾದ 3ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೂಲಕ ಅಗತ್ಯಪಡಿಸಲಾದಂತೆ, ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996ರ ಕರಡನ್ನು, ಅಧಿಸೂಚನೆ ಸಂಖ್ಯೆ. ಡಿಪಿಎಆರ್ 100 ಎಸ್‌ಸಿಎ 95. ದಿನಾಂಕ: 23ನೇ ಮಾರ್ಚ್, 1966ರಲ್ಲಿ ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯ 2ಸಿ(1) ನೇ ಪ್ರಕರಣದ ಭಾಗ IV ರಲ್ಲಿ ದಿನಾಂಕ 23ನೇ ಮಾರ್ಚ್ 1996ರಂದು, ಸರ್ಕಾರಿ ರಾಜ್ಯಪತ್ರದಲ್ಲಿ ಕರಡನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗೆ ಇದರಿಂದ ಬಾಧಿತರಾಗಬಹುದಾದ ಎಲ್ಲ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14) ರ 8ನೇ ಪ್ರಕರಣದೊಂದಿಗೆ ಓದಲಾದ 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-
ನಿಯಮಗಳು
1. ಶೀರ್ಷಿಕೆ ಮತ್ತು ಪ್ರಾರಂಭ..
(1) ಈ ನಿಯಮಗಳನ್ನು ಕರ್ನಾಟಕ ಸಿವಿಲ್ ಸೇವೆಗಳ (ಅನುಕಂಪ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996 ಎಂದು ಕರೆಯತಕ್ಕದ್ದು.
(2) ಈ ನಿಯಮಗಳು, ಸರ್ಕಾರಿ ರಾಜ್ಯಪತ್ರದಲ್ಲಿ ಅದರ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
(3) ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ಮತ್ತು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ ಕರ್ನಾಟಕ ಅಧಿನಿಯಮ 14) ರ ಮೇರೆಗೆ ಯಾವುದೇ ಸೇವೆ ಅಥವಾ ಹುದ್ದೆಯ ಸಂಬಂಧದಲ್ಲಿ ವಿಶೇಷವಾಗಿ ರಚಿಸಲಾಗಿದೆಯೆಂದು ಭಾವಿಸಲಾದ ನೇಮಕಾತಿ ನಿಯಮಗಳಲ್ಲಿ, ಏನೇ ಒಳಗೊಂಡಿದ್ದಾಗ್ಯೂ. ಈ ನಿಯಮಗಳು, ಅನುಕಂಪ ಆಧಾರದ ಮೇಲೆ ಮೃತ ಸರ್ಕಾರಿ ನೌಕರನ ಅವಲಂಬಿತರ ನೇಮಕಾತಿಗೆ ಸಂಬಂಧಿಸಿದಂತೆ ಅನ್ವಯವಾಗತಕ್ಕದ್ದು.
2. ಪರಿಭಾಷೆಗಳು:-
(1) ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು:-
‘[(ಎ) “ಮೃತ ಸರ್ಕಾರಿ ನೌಕರರ ಅವಲಂಬಿತ “ಎಂದರೆ ಮೃತ ಸರ್ಕಾರಿ ನೌಕರನೊಂದಿಗೆ ವಾಸಿಸುತ್ತಿದ್ದ ಮತ್ತು ಅವರ ಮೇಲೆ ಅವಲಂಬಿತರಾಗಿದ್ದ ಮತ್ತು 4ನೇ ನಿಯಮದ (1)ನೇ ಉಪ-ನಿಯಮದ ವಿವರಣೆಯಲ್ಲಿ ನಿರ್ದಿಷ್ಟಪಡಿಸಿದ ಷರತ್ತುಗಳನ್ನು ಪೂರೈಸಿರುವ ಮೃತ ಸರ್ಕಾರಿ ನೌಕರನ ಕುಟುಂಬದ ಸದಸ್ಯ]’
1. ಅಧಿಸೂಚನೆ ಸಂಖ್ಯೆ. ಡಿಪಿಎಆರ್ 26 ಎಸ್‌ಸಿಎ 2018, ದಿನಾಂಕ:09.04.2021ರ ಮೂಲಕ ಪ್ರತ್ಯಾಯೋಜಿಸಲಾಗಿದೆ.
4
‘[‘(ಬಿ) ಈ ನಿಯಮಗಳ ಉದ್ದೇಶಕ್ಕಾಗಿ ‘ಕುಟುಂಬ’ ಎಂದರೆ,-
(i) ಮೃತ ಪುರುಷ ವಿವಾಹಿತ ಸರ್ಕಾರಿ ನೌಕರನ ಸಂದರ್ಭದಲ್ಲಿ, ಅವನ ಮೇಲೆ ಅವಲಂಬಿತರಾಗಿದ್ದ ಮತ್ತು ಅವನೊಂದಿಗೆ ವಾಸಿಸುತ್ತಿದ್ದ ಅವನ ವಿಧವೆ, ಮಗ ಮತ್ತು ಮಗಳು (3/2/23/2);
(ii) ಮೃತ ಮಹಿಳಾ ವಿವಾಹಿತ ಸರ್ಕಾರಿ ನೌಕರಳ ಸಂದರ್ಭದಲ್ಲಿ, ಆಕೆಯ ಮೇಲೆ ಅವಲಂಬಿತರಾಗಿದ್ದ ಮತ್ತು ಆಕೆಯೊಂದಿಗೆ ವಾಸಿಸುತ್ತಿದ್ದ (3/2/2/2) 2 ಆಕೆಯ ಮಗ, ಮಗಳು
(iii) ಮೃತ ಪುರುಷ ಅವಿವಾಹಿತ ಸರ್ಕಾರಿ ನೌಕರನ ಸಂದರ್ಭದಲ್ಲಿ, ಅವನ ಮೇಲೆ ಅವಲಂಬಿತರಾಗಿದ್ದ ಮತ್ತು ಅವನೊಂದಿಗೆ ವಾಸಿಸುತ್ತಿದ್ದ ಅವನ ಸಹೋದರ ಅಥವಾ ಸಹೋದರಿ;
(iv) ಮೃತ ಮಹಿಳಾ ಅವಿವಾಹಿತ ಸರ್ಕಾರಿ ನೌಕರಳ ಸಂದರ್ಭದಲ್ಲಿ ಅವಳ ಮೇಲೆ ಅವಲಂಬಿತರಾಗಿದ್ದ ಮತ್ತು ಅವಳೊಂದಿಗೆ ವಾಸಿಸುತ್ತಿದ್ದ ಅವಳ ಸಹೋದರ ಅಥವಾ ಸಹೋದರಿ; ಮತ್ತು
(v) ಪತಿ/ಪತ್ನಿ ಬದುಕಿಲ್ಲದ ಮತ್ತು ಅಪ್ರಾಪ್ತ ಮಕ್ಕಳಿರುವ ಮೃತ ವಿವಾಹಿತ ಸರ್ಕಾರಿ ನೌಕರನ/ಳ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳೊಂದಿಗೆ ಮತ್ತು ಸಂಬಂಧಪಟ್ಟ ಕಾನೂನಿನ ಉಪಬಂಧಗಳ ಅನುಸಾರ ಅಪ್ರಾಪ್ತ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಪ್ರಮಾಣಿತ ಪೋಷಕರು.’
(2) ಈ ನಿಯಮಗಳಲ್ಲಿ ಬಳಸಲಾದ ಆದರೆ ಪರಿಭಾಷಿಸದ ಪದಗಳು ಮತ್ತು ಅಭಿವ್ಯಕ್ತಿಗಳಿಗೆ, ಕರ್ನಾಟಕ ಸಿವಿಲ್ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರಲ್ಲಿ ಅವುಗಳಿಗೆ ನೀಡಲಾದಂಥ ಅರ್ಥವನ್ನೇ ಹೊಂದಿರತಕ್ಕದ್ದು
‘ [(i)ಮೃತ ಮಹಿಳಾ ವಿವಾಹಿತ ಸರ್ಕಾರಿ ನೌಕರಳ ಸಂದರ್ಭದಲ್ಲಿ ತಂದೆ ಮತ್ತು ತಾಯಿಯು ಆಯ್ಕೆ ಮಾಡಿದಂತಹ ಅಥವಾ ಅವರಲ್ಲಿ ಭಿನ್ನಾಭಿಪ್ರಾಯವಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಅವಲಂಬಿತವಾಗಿದ್ದ ಮತ್ತು ಆಕೆಯೊಂದಿಗೆ ವಾಸಿಸುತ್ತಿದ್ದ, ತಾಯಿಯು ಆಯ್ಕೆ ಮಾಡಿದಂಥ ಆಕೆಯ ಸಹೋದರ ಅಥವಾ ಸಹೋದರಿ]
ಟಿಪ್ಪಣಿ: ಒಂದು ವೇಳೆ ಪೋಷಕರು ಈ ಹಿಂದೆಯೇ ಮೃತರಾಗಿದ್ದ ಸಂದರ್ಭದಲ್ಲಿ ಪ್ರಾಶಸ್ತ್ರವನ್ನು ಸಹೋದರ/ಸಹೋದರಿಯ ವಯಸ್ಸಿನ ಕ್ರಮದಲ್ಲಿ ನೀಡತಕ್ಕದ್ದು.’
[(iii) ಪತಿ/ಪತ್ನಿಯು ಸಹ ಮೃತರಾಗಿರುವಂಥ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಹೊಂದಿರುವಂಥ ಮೃತ ವಿವಾಹಿತ ಸರ್ಕಾರಿ ನೌಕರರ ಸಂದರ್ಭದಲ್ಲಿ, ಅವರೊಂದಿಗೆ ವಾಸವಿರುವಂಥ ಮತ್ತು ಸಂಬಂಧಪಟ್ಟ ಕಾನೂನಿನ ಉಪಬಂಧಗಳ ಅನುಸಾರ ಅಪ್ರಾಪ್ತ ವಯಸ್ಸಿನ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುವಂಥ ಅಪ್ರಾಪ್ತ ವಯಸ್ಸಿನ ಮಕ್ಕಳ ಪ್ರಮಾಣೀಕರಿಸಿದ ಪಾಲಕರು.]
(3) [XXXXXX]
‘1 (4) ಅರ್ಜಿ ಸಲ್ಲಿಸುವ ಸಮಯದಲ್ಲಿ, ಮೃತ ಸರ್ಕಾರಿ ನೌಕರನನ್ನು ಕೊಲೆ ಮಾಡಿರುವಂತಹ ಅಥವಾ ಕ್ರಿಮಿನಲ್ ಪ್ರಕರಣ ತನಿಖೆಯಲ್ಲಿರುವ ಅಥವಾ ಅಂತಹ ಅಪರಾಧವನ್ನು ಮಾಡಲು ದುಷ್ಪರಣೆ ಮಾಡಿರುವ ಆರೋಪದ ಮೇಲೆ ವಿಚಾರಣೆಯು ನಡೆಯುತ್ತಿರುವ ವ್ಯಕ್ತಿಯು, ಈ ನಿಯಮಗಳ ಅಡಿಯಲ್ಲಿ ನೇಮಕಾತಿಗೆ ಅರ್ಹನಾಗಿರತಕ್ಕದ್ದಲ್ಲ.’
ನೇಮಕಾತಿಗಾಗಿ ಅರ್ಹತೆ:-
(1) ಈ ನಿಯಮಗಳ ಮೇರೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಯನ್ನು ಹಕ್ಕಾಗಿ ಕೈಮು ಮಾಡತಕ್ಕದ್ದಲ್ಲ ಮತ್ತು ಸಹಜವಾಗಿಯೇ ಬಂದಿದೆ ಎಂಬಂತೆ ನೀಡತಕ್ಕದ್ದಲ್ಲ.
(2) ಈ ನಿಯಮಗಳ ಮೇರೆಗೆ ನೇಮಕಾತಿಯನ್ನು, ಕೆಳಕಂಡ ಪ್ರಾಶಸ್ತ್ರ ಕ್ರಮದಲ್ಲಿ ಮೃತ ಸರ್ಕಾರಿ ನೌಕರನ/ಳ ಅವಲಂಬಿತರಿಗೆ ನಿರ್ಬಂಧಿಸತಕ್ಕದ್ದು ಎಂದರೆ:-
*[() ಮೃತ ಪುರುಷ ವಿವಾಹಿತ ಸರ್ಕಾರಿ ನೌಕರನ ಸಂದರ್ಭದಲ್ಲಿ-ಅವನ ಮೇಲೆ ಅವಲಂಬಿತರಾಗಿದ್ದ ಮತ್ತು ಅವನೊಂದಿಗೆ ವಾಸಿಸುತ್ತಿದ್ದ
(ಎ) ವಿಧವೆ, ಮತ್ತು
(ಬಿ) ವಿಧವೆಯು ಅರ್ಹಳಾಗಿರದಿದ್ದರೆ ಅಥವಾ ಯಾವುದೇ ಸಮಂಜಸ ಕಾರಣಕ್ಕಾಗಿ ಅವಳು ನೇಮಕಾತಿಯನ್ನು ಸ್ವೀಕರಿಸಲು ಇಚ್ಛಿಸದಿದ್ದರೆ, ಮೃತ ಸರ್ಕಾರಿ ನೌಕರನ ವಿಧವೆಯು ಆಯ್ಕೆ ಮಾಡಿದ ಮಗ ಅಥವಾ ಮಗಳು”.
ಟಿಪ್ಪಣಿ: ಪತಿ/ಪತ್ನಿ ಈ ಹಿಂದೆಯೇ ಮೃತರಾಗಿದ್ದ ಸಂದರ್ಭದಲ್ಲಿ ಆಗ ಮಕ್ಕಳ ವಯಸ್ಸಿನ ಕ್ರಮದಲ್ಲಿ ಪ್ರಾಶಸ್ತ್ರವನ್ನು ಕೊಡತಕ್ಕದ್ದು.
*(iಎ) ಮೃತ ಪುರುಷ ಅವಿವಾಹಿತ ಸರ್ಕಾರಿ ನೌಕರನ ಸಂದರ್ಭದಲ್ಲಿ ತಂದೆ ಮತ್ತು ತಾಯಿಯು ಆಯ್ಕೆ ಮಾಡಿರುವ ಅಥವಾ ಅವರಲ್ಲಿ ಭಿನ್ನಾಭಿಪ್ರಾಯವಿದ್ದ ಸಂದರ್ಭದಲ್ಲಿ ಅವನ ಮೇಲೆ ಅವಲಂಬಿತವಾಗಿದ್ದ ಮತ್ತು ಅವನೊಂದಿಗೆ ವಾಸಿಸುತ್ತಿದ್ದ ತಾಯಿಯು ಆಯ್ಕೆ ಮಾಡಿರುವ ಅವನ ಸಹೋದರ ಅಥವಾ ಸಹೋದರಿ”.
ಟಿಪ್ಪಣಿ:
ತಂದೆ-ತಾಯಿಗಳು, ಹಿಂದೆಯೇ ಮೃತರಾಗಿದ್ದ ಸಂದರ್ಭದಲ್ಲಿ ಆಗ, ಸಹೋದರ/ಸಹೋದರಿಯ ವಯಸ್ಸಿನ ಕ್ರಮದಲ್ಲಿ ಪ್ರಾಶಸ್ತ್ರವನ್ನು ಕೊಡತಕ್ಕದ್ದು.
*(ii) ಮೃತ ಮಹಿಳಾ ವಿವಾಹಿತ ಸರ್ಕಾರಿ ನೌಕರಳ ಸಂದರ್ಭದಲ್ಲಿ;
ಅವಳ ಮೇಲೆ ಅವಲಂಬಿತರಾಗಿದ್ದ ಮತ್ತು ಅವಳೊಂದಿಗೆ ವಾಸಿಸುತ್ತಿದ್ದ
(ಎ) ಮೃತ ಸರ್ಕಾರಿ ನೌಕರಳ ವಿಧುರನು ಆಯ್ಕೆ ಮಾಡಿರುವ ಮಗ ಅಥವಾ ಮಗಳು, ಮತ್ತು
(ಬಿ) ಮಗ ಅಥವಾ ಮಗಳು ಅರ್ಹರಾಗಿರದಿದ್ದರೆ ಅಥವಾ ಯಾವುದೇ ಸಮಂಜಸ ಕಾರಣಕ್ಕಾಗಿ ಅವರು, ನೇಮಕಾತಿಯನ್ನು ಸ್ವೀಕರಿಸಲು ಇಚ್ಚಿಸದಿದ್ದರೆ; ವಿಧುರ”.
ಟಿಪ್ಪಣಿ: ಪತಿ/ಪತ್ನಿ ಈ ಹಿಂದೆಯೇ ಮೃತರಾಗಿದ್ದ ಸಂದರ್ಭದಲ್ಲಿ ಆಗ ಮಕ್ಕಳ ವಯಸ್ಸಿನ ಕ್ರಮದಲ್ಲಿ ಪ್ರಾಶಸ್ತ್ರವನ್ನು ಕೊಡತಕ್ಕದ್ದು.’