ಬೆಂಗಳೂರು: ಬೆಂಗಳೂರಿನ ಆಸ್ತಿ ಮಾಲೀಕರೇ ಗಮನಿಸಿ ಬಿಬಿಎಂಪಿಯಿಂದ ಆಸ್ತಿ ನೋಂದಣಿಗೆ ಹೊಸ ನಿಯಮ ಜಾರಿಯಾಗಿದ್ದು, ಮುದ್ರಾಂಕ ಮತ್ತು ನೋಂದಣಿ ಇಲಾಖೆ ಎಲ್ಲಾ ಉಪ ನೋಂದಣಾಧಿಕಾರಿಗಳಿಗೆ ಇ-ಆಸ್ತಿ ಮತ್ತು ಇ-ಖಾತಾ ಸಾಫ್ಟ್‌ವೇರ್ ಬಳಸಿ ಆಸ್ತಿಗಳನ್ನು ನೋಂದಾಯಿಸುವಂತೆ ಸೂಚನೆ ನೀಡಲಾಗಿದೆ.
ಹೌದು, ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು, ನೋಂದಣಿ ಮಹಾ ನಿರೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಾದ ದಯಾನಂದ ಕೆ.ಎ. ಅವರು, ಆಸ್ತಿ ನೋಂದಣಿ ಸಮಯದಲ್ಲಿ ಉಪ ನೋಂದಣಾಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಬಾರದು. ಕರ್ನಾಟಕ ನಾಗರಿಕ ಸೇವಾ ನಿಯಮಗಳ (KCSR) ಅಡಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಎಚ್ಚರಿಸಿದ್ದಾರೆ.
ಈ ಸುತ್ತೋಲೆಯು ಮಹಾನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಎಲ್ಲಾ ಆಸ್ತಿಗಳಿಗೆ ಅನ್ವಯಿಸುತ್ತದೆ. ಇ ಖಾತಾ ಇಲ್ಲದೆ ಆಸ್ತಿ ನೋಂದಣಿ ಮಾಡುವಂತಿಲ್ಲ. ಬೆಂಗಳೂರಿನಲ್ಲಿ ಕೆಲವು ನಿವಾಸಿಗಳಿಗೆ ಇ-ಖಾತಾ ದುಬಾರಿಯಾಗಿದೆ. ಆದರೂ ಈ ಹೊಸ ನಿಯಮ ಜಾರಿಯಲ್ಲಿದೆ.
ಅಗತ್ಯವಿರುವ ದಾಖಲೆಗಳು:
(1) ಮಾಲೀಕರ ಆಧಾರ್ ಕಾರ್ಡ್
(2) ಆಸ್ತಿ ತೆರಿಗೆ ಐಡಿ(ಅಸ್ತಿ ತೆರಿಗೆ ವ್ಯವಸ್ಥೆಯಿಂದ ವಿದ್ಯುನ್ಮಾನವಾಗಿ ಮಾಹಿತಿಯನ್ನು ಪಡೆಯುತ್ತದೆ)
(3) ಮಾರಾಟ/ರಿಜಿಸ್ಟರ್ ಡೀಡ್ ಸಂಖ್ಯೆ (ಇದನ್ನು ಉಪ ರಿಜಿಸ್ಟ್ರಾರ್‌ನಿಂದ ವಿದ್ಯುನ್ಮಾನವಾಗಿ ಪಡೆಯುತ್ತದೆ)
(4) BESCOM 10-ಅಂಕಿಯ ID (ಖಾಲಿ ಪ್ಲಾಟ್‌ಗಳಿಗೆ ಐಚ್ಛಿಕ)
(5) ಆಸ್ತಿ ಫೋಟೋ