ಬೆಂಗಳೂರು : ರಾಜ್ಯದ ಗ್ರಾಮೀಣ ಆಸ್ತಿ ಮಾಲೀಕರೇ ಗಮನಿಸಿ, 2024-25ನೇ ಸಾಲಿನ ಸಕಾಲದಲ್ಲಿ ತೆರಿಗೆ ಪಾವತಿಸಿ, ದಂಡನೆಯಿಂದ ತಪ್ಪಿಸಿಕೊಳ್ಳಿ. ಇದುವರೆಗೂ ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸಿಲ್ಲವೇ, ಮಾರ್ಚ್ 31, 2025 ರೊಳಗೆ ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗಿದೆ.
2024 -25ನೇ ಸಾಲಿನ ಗ್ರಾಮ ಪಂಚಾಯತಿ ತೆರಿಗೆಯನ್ನು 31ನೇ ಮಾರ್ಚ್ 2025 ರೊಳಗೆ ಪಾವತಿಸಿ, ದಂಡದಿಂದ ತಪ್ಪಿಸಿಕೊಳ್ಳಿ. ಮಾರ್ಚ್31ರ ನಂತರದ ಪಾವತಿಗೆ ಶೇ.5ರಷ್ಟು ದಂಡ ಶುಲ್ಕ ತೆರಬೇಕಾಗುತ್ತದೆ.
ತೆರಿಗೆ ಪಾವತಿಸಲು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಥವಾ https://bsk.karnataka.gov.in/ ಅಥವಾ ಯುಪಿಐ ಮುಖಾಂತರ ಪಾವತಿಸುವಂತೆ ಸೂಚನೆ ನೀಡಲಾಗಿದೆ.