ತುಮಕೂರು: ಜಿಲ್ಲೆಯ ತಿಪಟೂರಲ್ಲಿ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಇಬ್ಬರ ಮೇಲೆ ಹಲ್ಲೆ ಮಾಡಿದಂತ ಆರೋಪ ಕೇಳಿ ಬಂದಿದೆ. ಈ ಸಂಬಂಧ ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಇಂದು ಜಮೀನು ವ್ಯಾತ್ಯ ಸಂಬಂಧ ತಿಪಟೂರು ಎಸಿ ಕೋರ್ಟ್ ಗೆ ಸರ್ಕಾರಿ ಉರ್ದು ಶಾಲೆಯ ಶಿಕ್ಷಕ ಮಂಜಪ್ಪ ಆಗಮಿಸಿದ್ದರು. ಇಂದು ಕೋರ್ಟ್ ಜಮೀನು ವ್ಯಾಜ್ಯದ ಸಂಬಂಧ ರಾಕೇಶ್, ಉದಯ್ ಎಂಬುವರ ಪರವಾಗಿ ತೀರ್ಪು ನೀಡಿತ್ತು ಎನ್ನಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಜಮೀನು ವ್ಯಾಜ್ಯ ಸಂಬಂಧ ಶಿಕ್ಷಕ ಮಂಜಪ್ಪ ಹಾಗೂ ರಾಕೇಶ್, ಉದಯ್ ನಡುವೆ ಗಲಾಟೆಯಾಗಿದೆ. ಈ ವೇಳೆಯಲ್ಲಿ ಶಿಕ್ಷಕ ಮಂಜಪ್ಪ ರಾಕೇಶ್, ಉದಯ್ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ತಮ್ಮ ವಿರುದ್ಧ ತೀರ್ಪು ಬಂದಿದ್ದಕ್ಕೆ ಸಿಟ್ಟುಗೊಂಡಂತ ಶಿಕ್ಷಕ ಮಂಜಪ್ಪ ಹಲ್ಲೆ ಮಾಡಿದ್ದಾರೆ. ಶಾಲಾ ಶಿಕ್ಷಕ ಮಂಜಪ್ಪ ಹಲ್ಲೆ ಮಾಡಿದಂತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸಂಬಂಧ ತಿಪಟೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIG NEWS: ತನ್ನ ಅಧ್ಯಯನ ನಿಲ್ಲಿಸುವಂತೆ ಹೆಂಡತಿಯನ್ನು ಒತ್ತಾಯಿಸುವುದು ‘ಮಾನಸಿಕ ಕ್ರೌರ್ಯ’ಕ್ಕೆ ಸಮಾನ: ಹೈಕೋರ್ಟ್
ಪತ್ನಿ ಪರ ಪುರುಷರ ಜೊತೆ ಅಶ್ಲೀಲವಾಗಿ ಚಾಟ್ ಮಾಡುವುದು ಪತಿಗೆ ನೀಡುವ ಮಾನಸಿಕ ಕೌರ್ಯ: ಹೈಕೋರ್ಟ್ ಮಹತ್ವದ ತೀರ್ಪು