ಶಿವಮೊಗ್ಗ: ಸಾಗರ ಉಪವಿಭಾಗಿಯ ಆಸ್ಪತ್ರೆಯಲ್ಲಿನ ಡಿ.ಎನ್.ಬಿ (ಪೀಡಿಯಾಟ್ರಿಕ್ಸ್) ತರಬೇತಿ ವೈದ್ಯ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಬಾಹ್ಯ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳಲು ಮಾ.20 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ಕಛೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಆಸಕ್ತ ಎಂಬಿಬಿಎಸ್ ಎಂಡಿ/ ಎಂಎಸ್ ಇನ್ ಪೀಡಿಯಾಟ್ರಿಕ್ಸ್ ವಿದ್ಯಾರ್ಹತೆಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳು ಮತ್ತು ಪ್ರಮಾಣ ಪತ್ರಗಳು, ಇತರೆ ಮೂಲ ದಾಖಲಾತಿಗಳು ಹಾಗೂ ಒಂದು ಸೆಟ್ ದೃಢೀಕೃತ ಜೆರಾಕ್ಸ್ ಪ್ರತಿಗಳೂಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಆಡಳಿತ ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಶೇ.57ರಷ್ಟು ಕಾರ್ಪೊರೇಟ್ ಪುರುಷರು ವಿಟಮಿನ್ ಬಿ12 ಕೊರತೆ ಎದುರಿಸುತ್ತಿದ್ದಾರೆ: ಸಮೀಕ್ಷೆ