ತಿರುಪತಿ: ತಿರುಪತಿ ತಿಮ್ಮಪ್ಪನ ಸನ್ನಿಧಿಯ ಲಡ್ಡು ಪ್ರಸಾದಕ್ಕೆ ಕರ್ನಾಟಕದಿಂದ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದೆ. ಈಗ ತಿರುಪತಿಯ ಲಡ್ಡು ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪಕ್ಕೆ ಮತ್ತಷ್ಟು ಬೇಡಿಕೆಯನ್ನು ಟಿಟಿಡಿ ಇರಿಸಿದೆ. ಯುಗಾದಿಗೆ ತುರ್ತಾಗಿ 2000 ಟನ್ ತುಪ್ಪ ಕಳುಹಿಸುವಂತೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ತಯಾರಿಕೆಗೆ ಕರ್ನಾಟಕದ ನಂದಿನಿ ತುಪ್ಪವನ್ನು ಬಳಕೆ ಮಾಡಲಾಗುತ್ತಿದೆ. ಕೆಎಂಎಫ್ ನಿಂದ ತಿರುಮಲಕ್ಕೆ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದೆ.
ಯುಗಾದಿ ಸಮೀಪಿಸುತ್ತಿದ್ದು, ತಿಮ್ಮಪ್ಪನ ದೇಗುಲಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡುವ ಸಾಧ್ಯತೆ ಇರುವುದರಿಂದ ತುರ್ತಾಗಿ 2000 ಟನ್ ತುಪ್ಪ ಕಳುಹಿಸುವಂತೆ ಟಿಟಿಡಿ ಕೆಎಂಎಫ್ ಗೆ ಮನವಿ ಮಾಡಿದೆ ಎನ್ನಲಾಗಿದೆ. ಅಲ್ಲದೇ ಈ ತಿಂಗಳಿನಲ್ಲೇ ಸಪ್ಲೈ ಮಾಡುವಂತೆ ತಿಳಿಸಿದೆ ಎಂಬುದಾಗಿ ಹೇಳಲಾಗುತ್ತಿದೆ.
ಅಂದಹಾಗೇ ಟಿಟಿಡಿಗೆ ಲಡ್ಡು ಪ್ರಸಾದ ತಯಾರಿಕೆಗೆ ಈಗಾಗಲೇ ಕೆ ಎಂ ಎಫ್ ನಿಂದ ಬರೋಬ್ಬರಿ 600 ಟನ್ ತುಪ್ಪವನ್ನು ಕಳುಹಿಸಿಕೊಡಲಾಗಿದೆ. ಇದರ ನಡುವೆ ಈ ವರ್ಷ 5000 ಟನ್ ತುಪ್ಪ ರವಾನಿಸುವಂತೆ ಟಿಟಿಡಿ ಕೆಎಂಎಫ್ ಗೆ ಬೇಡಿಕೆ ಇಟ್ಟಿರುವುದಾಗಿ ತಿಳಿದು ಬಂದಿದೆ.
BIG NEWS: ‘ನಟಿ ರನ್ಯಾ ರಾವ್’ ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ‘ED ಎಂಟ್ರಿ’: ಬೆಂಗಳೂರು, ಮುಂಬೈನ ಹಲವೆಡೆ ದಾಳಿ
ISRO ಸ್ಪೇಸ್ ಡಾಕಿಂಗ್ ಯಶಸ್ವಿ: ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ | Isro
ಪಾರ್ಕಿಂಗ್ ವಿಚಾರವಾಗಿ ನೆರೆಹೊರೆಯವರೊಂದಿಗೆ ಜಗಳ: ಡಯಾಲಿಸಿಸ್ ವಿಜ್ಞಾನಿ ಸಾವು | Scientist dies