ಶಿವಮೊಗ್ಗ: ಆ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳ ಸಂಚಾರ. ಸಾಗರ, ಸೊರಬ ಮಾರ್ಗವಾಗಿ ವಿಜಯಪುರ, ಹುಬ್ಬಳ್ಳಿಗೆ, ಶಿರಸಿ, ಸಿದ್ದಾಪುರ, ಆನವಟ್ಟಿ, ಶಿಕಾರಿಪುರಕ್ಕೆ ಸಂಚರಿಸುವ ವಾಹನಗಳೇ ಹೆಚ್ಚು. ಜೊತೆ ಜೊತೆಗೆ ರೈತಾಪಿ ವರ್ಗದವರು, ಕೂಲಿಕಾರರು ದಿನವೂ ಪ್ರಯಾಣ. ಹೀಗೆ ಬ್ಯುಸಿಯಾಗಿರೋ ರಸ್ತೆಯಲ್ಲೇ ಒಣಗಿ, ಭಾಗಿ, ಗಾಳಿ ಬಂದರೇ ಸಾಕು ಬಿದ್ದೋಗುವಂತಿರುವ ಒಣ ಮರಗಳನ್ನು ಮಾತ್ರ ಕಡಿತಲೆ ಮಾಡಿಲ್ಲ. ಅದು ಒಂದಲ್ಲ ಎರಡಲ್ಲ ಬರೋಬ್ಬರಿ 10ಕ್ಕೂ ಹೆಚ್ಚು. ಆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯದ ಸಂಪೂರ್ಣ ಸುದ್ದಿ ಮುಂದೆ ಓದಿ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಭದ್ರಾಪುರದ ನಂತ್ರ ರಾಮಕೃಷ್ಣ ಎಂಬುವರ ಮನೆಯಿಂದ ಹಿಡಿದು ಅಮಚಿ ಸಮೀಪದ ಸೇತುವೆಯವರೆಗೆ ಸುಮಾರು 22 ಅಕೇಶಿಯಾ ಮರಗಳ ಸಾಲು ಜೊತೆಗೆ ಒಂದೆರೆಡು ಹುನಾಲು ಮರಗಳಿದ್ದಾವೆ. ದಾರಿಯುದ್ಧಕ್ಕೂ ಸಾಲು ಗಟ್ಟಿರುವಂತ 24 ಮರಗಳಲ್ಲಿ ಬರೋಬ್ಬರಿ 10ಕ್ಕೂ ಹೆಚ್ಚು ಮರಗಳು ಒಣಗಿ ಹೋಗಿದ್ದಾವೆ. ದಾರಿ ಹೋಕರ ಮೇಲೆ ಈಗಲೋ ಆಗಲೋ ಬೀಳೋ ಸ್ಥಿತಿಯಲ್ಲಿದ್ದಾವೆ.
ರಸ್ತೆಗೆ ಭಾಗಿ ಬೀಳುವಂತಿದ್ದರೂ ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳು
ಈ ವಿಚಾರವಾಗಿ ನಿಸರಾಣಿ ವ್ಯಾಪ್ತಿಯ ಫಾರೆಸ್ಟರ್ ಮುತ್ತಣ್ಣ ಎಂಬುವರನ್ನು ಸಂಪರ್ಕಿಸಿದಂತ ನಿಮ್ಮ ಕನ್ನಡ ನ್ಯೂಸ್ ನೌ, ಕಳೆದ ಎರಡು ತಿಂಗಳ ಹಿಂದೆಯೇ ಒಣಗಿದಂತ ಅಕೇಶಿಯಾ ಮರಗಳ ಕಡಿತಲೆ ಮಾಡುವಂತೆ. ಆ ಮೂಲಕ ವಾಹನ ಸವಾರರ ಮೇಲೆ ಬಿದ್ದು ಮುಂದಾಗಲಿರುವಂತ ಅನಾಹುತದ ಬಗ್ಗೆ ಮನವರಿಕೆ ಮಾಡಲಾಗಿತ್ತು. ಆದರೇ ಈವರೆಗೆ ಆ ಕಾರ್ಯವನ್ನು ಮಾಡಿಲ್ಲ.
ಕಣ್ಣಿದ್ದೂ ಕುರುಡಾಗಿರುವ ಸೊರಬ ವಲಯ ಅರಣ್ಯಾಧಿಕಾರಿ ಜಾವದ್ ಬಾಷಾ ಅಂಗಡಿ
ಫಾರೆಸ್ಟರ್ ಮುತ್ತಣ್ಣ ಅವರು ಈ ವಿಚಾರವಾಗಿ ಸೊರಬ ವಲಯ ಅರಣ್ಯಾಧಿಕಾರಿ ಜಾವದ್ ಬಾಷಾ ಅಂಗಡಿ ಅವರ ಗಮನಕ್ಕೆ ತರುವುದಾಗಿ ಹೇಳಿದರು. ಅವರಲ್ಲದೇ ನಿಮ್ಮ ಕನ್ನಡ ನ್ಯೂಸ್ ನೌ ಸೊರಬ ಆರ್ ಎಫ್ ಓ ಜಾವದ್ ಬಾಷಾ ಅಂಗಡಿ ಅವರಿಗೆ ಕರೆ ಮಡಿ ಗಮನಕ್ಕೆ ತರಲಾಗಿತ್ತು. ದಾರಿ ಹೋಕರ ಮೇಲೆ ಬಿದ್ದು ಸಾವಾಗುವ, ಅನಾಹುತ ಉಂಟಾಗುವ ಮುನ್ನವೇ ಒಣ ಮರಗಳನ್ನು ಕಡಿತಲೆ ಮಾಡುವಂತೆ ಮನವರಿಕೆ ಮಾಡಿಕೊಟ್ಟಿತ್ತು. ಅವರು ಕೂಡ ಈವರೆಗೆ ಆ ಕೆಲಸ ಮಾಡಿಲ್ಲ. ಯಾವುದೇ ಸಂದರ್ಭದಲ್ಲಾದರೂ ವಾಹನ ಸವಾರರ ಮೇಲೆ ಬಿದ್ದು ಬಲಿ ತೆಗೆದುಕೊಳ್ಳೋದಕ್ಕೆ ಒಣ ಮರಗಳು ಕಾದು ಕುಳಿತಿದ್ದಾವೆ.
ದೂಗೂರು ಪಿಡಿಓ ದಿನಾಂಕ 22-04-2024ರಲ್ಲೇ ಅರಣ್ಯಾಧಿಕಾರಿಗಳಿಗೆ ಪತ್ರ
ಇನ್ನೂ ಸೊರಬ ತಾಲ್ಲೂಕಿನ ಉಳವಿ ವ್ಯಾಪ್ತಿಯ ರಾಧಾಕೃಷ್ಣ ಮನೆಯಿಂದ ಅಮಚಿ ಗ್ರಾಮದ ಗಡಿಯವರೆಗೆ ಹಾದು ಹೋಗುವಂತ ದಾರಿಯಲ್ಲಿನ ಒಣ ಮರಗಳನ್ನು ಕಡಿಯುವಂತೆ ದಿನಾಂಕ 22-04-2024ರಲ್ಲೇ ದೂಗೂರು ಪಿಡಿಓ ಪತ್ರವನ್ನು ಅರಣ್ಯಾಧಿಕಾರಿಗಳಿಗೆ ಬರೆಯಲಾಗಿದೆ. ಮುಂದಿನ ತಿಂಗಳು ಬಂದ್ರೇ ಆ ಪತ್ರ ಬರೆದು ಬರೋಬ್ಬರಿ ಒಂದು ವರ್ಷವೇ ಕಳೆಯುತ್ತದೆ. ಆದರೂ ಅರಣ್ಯಾಧಿಕಾರಿಗಳು ಮಾತ್ರ ಆ ಕೆಲಸ ಮಾಡದೇ ಇರೋದು ವಿಪರ್ಯಾಸವೇ ಸರಿ.
ನಿಸಾರಾಣಿ ಉಪ ವಲಯ ಅರಣ್ಯಾಧಿಕಾರಿ ವರದಿ
ದೂಗೂರು ಪಿಡಿಓ ಪತ್ರದ ಕಾರಣದಿಂದಾಗಿ ನಿಸರಾಣಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ದಿನಾಂಕ 23-04-2024ರಂದು ಸ್ಥಳಕ್ಕೆ ಭೇಟಿ ನೀಡುತ್ತಾರೆ. ರಾಧಾಕೃಷ್ಣ ಮನೆಯಿಂದ ಅಮಚಿ ಗ್ರಾಮದ ಗಡಿಯವರೆಗೆ ಇರುವಂತ ಮರಗಳನ್ನು ಪರಿಶೀಲನೆ ಮಾಡುತ್ತಾರೆ. ಸ್ಥಳ ಪರಶೀಲನೆ ಮಾಡಿ 22 ಅಕೇಶಿಯಾ ಮರ ಹಾಗೂ 2 ಹುನಾಲು ಮರಗಳಿವೆ ಅಂತ ವರದಿ ನೀಡುತ್ತಾರೆ. ಜೊತೆ ಜೊತೆಗೆ ಒಣಗಿರುವಂತ ಮರಗಳನ್ನು ಕೂಡಲೇ ಕಡಿತಲೆ ಮಾಡುವಂತೆ ವರದಿ ನೀಡಿದ್ರೂ, ನೋ ಆಕ್ಷನ್.
11 ತಿಂಗಳ ಬಳಿಕ ‘ಸೊರಬ ಸಹಾಯ ಅರಣ್ಯ ಸಂರಕ್ಷಣಾಧಿಕಾರಿ’ಗಳಿಗೆ ಹರಾಜಿಗೆ ಅನುಮತಿ ಕೋರಿ ‘RFO ಪತ್ರ’
ದಿನಾಂಕ 22-04-2024ರಂದು ದೂಗೂರು ಗ್ರಾಮ ಪಂಚಾಯ್ತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಪತ್ರದಿಂದಾಗಿ ದಿನಾಂಕ 23-04-2024ರಂದು ನಿಸರಾಣಿ ಉಪ ವಲಯ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನಾ ವರದಿ ನೀಡಿದ್ರೂ ಒಣ ಮರಗಳನ್ನು ಕಡಿಲೆ ಮಾಡಲಾಗಿಲ್ಲ.
ಬರೋಬ್ಬರಿ 11 ತಿಂಗಳ ಬಳಿಕ ಈಗ, ಸೊರಬ ಸಹಾಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ 22 ಅಕೇಶಿಯಾ ಹಾಗೂ 2 ಹುನಾಲು ಮರಗಳನ್ನು ಕಡಿತಲೆ ಮಾಡಲು ಹರಾಜಿಗೆ ಅನುಮತಿ ನೀಡುವಂತೆ ಸೊರಬ ವಲಯ ಅರಣ್ಯಾಧಿಕಾರಿ ಜಾವದ್ ಬಾಷಾ ಅಂಗಡಿ ಪತ್ರ ಬರೆದಿದ್ದಾರೆ. ಅದು ನಿಮ್ಮ ಕನ್ನಡ ನ್ಯೂಸ್ ನೌ ವಾಹನ ಸವಾರರ ಮೇಲೆ ಬಿದ್ದು ಬಲಿಯಾಗೋ ಮೊದಲು ಎಚ್ಚೆತ್ತುಕೊಳ್ಳುವಂತೆ ಪದೇ ಪದೇ ಮನವರಿಕೆ ಮಾಡಿಕೊಟ್ಟಾಗ.
ಸೊರಬ-ಸಾಗರ ಡಿಎಫ್ಓ ಸಾಹೇಬ್ರೆ ವಾಹನ ಸವಾರರ ಬಲಿ ಪಡೆದಾಗ ಮರ ಕಡಿತಲೆಯೇ.?
ದಿನಾಂಕ 23-04-2024ರಂದು ನಿಸರಾಣಿ ಉಪ ವಲಯ ಅರಣ್ಯಾಧಿಕಾರಿಗಳು ಸ್ಥಳ ಪಂಚನಾಮೆ ಮಾಡಿದ ಮರಗಳ ಅಳತೆ ಪಟ್ಟಿಯ ಪರಿಶೀಲನಾ ವರದಿ, ದಿನಾಂಕ 30-07-2024ರಂದು ಸ್ಥಳ ಪರಿಶೀಲನಾ ವರದಿಯನ್ನು ನೀಡಿ, ಅವರ ಜವಾಬ್ದಾರಿ ಕಳೆದುಕೊಂಡಿದ್ದಾರೆ. ಸೊರಬ ವಲಯ ಅರಣ್ಯಾಧಿಕಾರಿ ಜಾವದ್ ಬಾಷ ಅಂಗಡಿ ಅವರು ಸಹಾಯಕ ವಲಯ ಅರಣ್ಯಾಧಿಕಾರಿಗಳಿಗೆ ಮರಗಳ ಹರಾಜಿಗೆ ಅನುಮತಿಗೂ ಪತ್ರ ಬರೆದಾಗಿದೆ. ಇನ್ನೂ ಯಾವಾಗ ಸ್ವಾಮಿ ದಾರಿಯಲ್ಲಿ ವಾಹನ ಸವಾರರ ಬಲಿಗಾಗಿ ಕಾದು ಕುಳಿತ ಸುಮಾರು 10ಕ್ಕೂ ಹೆಚ್ಚು ಒಣ ಮರಗಳನ್ನು ಕಡಿತಲೆ ಮಾಡೋದು.?
ಸೊರಬ-ಸಾಗರ ಡಿಎಫ್ಓ ಸಾಹೇಬ್ರು ಮೋಹನ್ ಕುಮಾರ್ ಅವರ ಗಮನಕ್ಕೆ ಬಂದಿದ್ಯೋ ಇಲ್ಲವೋ ಗೊತ್ತಿಲ್ಲ. ಇನ್ನೂ ಬರೋದು ಈ ರಸ್ತೆಯಲ್ಲಿ ಓಡಾಡೋ ವಾಹನ ಸವಾರರ ಮೇಲೆ ಒಣಮರ ಗಾಳಿಗೆ ಮುರಿದು ಬಿದ್ದು ಅನಾಹುತ, ಸಾವು ಆದಾಗಲೇ ಇರಬೇಕೇನೋ ಎಂಬ ಅನುಮಾನ ಕಾಡುತ್ತಿದೆ.
ಡಿಎಫ್ಓ ಮೋಹನ್ ಕುಮಾರ್ ಸಾಹೇಬ್ರೇ ಅದಕ್ಕೂ ಮುನ್ನಾ ಒಣಮರಗಳ ಕಡಿತಲೆ ಮಾಡಿ. ಮುಂಗಾರು ಪೂರ್ವದಲ್ಲಿ ಜೋರು ಗಾಳಿ ಸಿಹಿ ಮಳೆ ಆರಂಭವಾದ್ರೇ ಬಿರುಗಾ ವಾಹನ ಸಾವರರ ಸಾವು, ನೋವು ಆಗೋ ಮುನ್ನ ಎಚ್ಚೆತ್ತುಕೊಳ್ಳಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ಆ ಕೆಲಸ ಮುಂಗಾರು ಪೂರ್ವ ಮಳೆ ಆರಂಭಕ್ಕೂ ‘ಸೊರಬ ಅರಣ್ಯಾಧಿಕಾರಿ’ಗಳು ಮುನ್ನಾ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು