ನವದೆಹಲಿ : ಅನಾರೋಗ್ಯದ ಕಾರಣದಿಂದ ದೆಹಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧಂಕರ್ ಅವರು ಚೇತರಿಸಿಕೊಂಡ ನಂತರ ದೆಹಲಿಯ ಏಮ್ಸ್ ನಿಂದ ಇಂದು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಪ್ರಧಾನ ಆಸ್ಪತ್ರೆ ತಿಳಿಸಿದೆ.
ಹೃದಯ ಸಂಬಂಧಿತ ಕಾಯಿಲೆಗಳಿಂದಾಗಿ ಅವರನ್ನು ಮಾರ್ಚ್ 9 ರಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಗೆ ದಾಖಲಿಸಲಾಗಿತ್ತು. ಏಮ್ಸ್ನಲ್ಲಿ ವೈದ್ಯಕೀಯ ತಂಡದಿಂದ ಅಗತ್ಯ ಆರೈಕೆ ಪಡೆದ ನಂತರ, ಅವರು ತೃಪ್ತಿಕರವಾಗಿ ಚೇತರಿಸಿಕೊಂಡರು ಮತ್ತು ಮಾರ್ಚ್ 12 ರಂದು ಅವರನ್ನು ಬಿಡುಗಡೆ ಮಾಡಲಾಯಿತು” ಎಂದು ಏಮ್ಸ್-ದೆಹಲಿ ತಿಳಿಸಿದೆ.