ನವದೆಹಲಿ : ಪ್ರೀತಿಸಿ ಮದುವೆಯಾದ 22 ದಿನಗಳಲ್ಲೇ ನವ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದುವೆಗೆ ಪೋಷಕರು ಒಪ್ಪದ ಕಾರಣ ಅವರು ಓಡಿ ಹೋಗಿ ಮದುವೆಯಾಗಿದ್ದಾರೆ. ಆದರೆ ಮದುವೆಯಾಗಿ 22 ದಿನಗಳಲ್ಲೇ ಒಂದೇ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫರೂಕಾಬಾದ್‌ನ ಯುವಕನೊಬ್ಬ ಫೆಬ್ರವರಿ 17 ರಂದು ತನ್ನ ಗೆಳತಿಯನ್ನು ವಿವಾಹವಾದನು. ಈ ಸಂಬಂಧಕ್ಕೆ ಎರಡೂ ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದವು. ಇದರೊಂದಿಗೆ ಇಬ್ಬರೂ ಓಡಿಹೋಗಿ ವಿವಾಹವಾದರು. ನಂತರ ಇಬ್ಬರೂ ಗಾಜಿಯಾಬಾದ್‌ನ ಕವಿನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ಹೊಸ ಜೀವನವನ್ನು ಪ್ರಾರಂಭಿಸಿದರು.
ಆದರೆ ಇಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಅವರು ಬರೆದಿಟ್ಟಿದ್ದ ಆತ್ಮಹತ್ಯೆ ಪತ್ರ ನೋಡಿ ಪೊಲೀಸರೂ ಆಘಾತಕ್ಕೊಳಗಾದರು. ಯಾರಾದರೂ ತಮ್ಮನ್ನು ಹಿಡಿದರೆ, ತಮ್ಮ ಕುಟುಂಬ ಸದಸ್ಯರು ತಮ್ಮನ್ನು ಬೇರ್ಪಡಿಸುತ್ತಾರೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ದಂಪತಿಗಳು ತಮ್ಮ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.