ಶಿವಮೊಗ್ಗ: ಇಂದಿನ ಪ್ರಸ್ತುತ ಸನ್ನಿವೇಶಗಳಲ್ಲಿ ಭಾರತದ ಕೃಷಿ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ದೇಶದ ಬೆನ್ನೆಲುಬು ಆಗಿರುವ ಕೃಷಿಯನ್ನು ಆಧುನಿಕ ವ್ಯವಸ್ಥೆಗೆ ತಕ್ಕಂತೆ ಅಭಿವೃದ್ಧಿಪಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ವೆಂದು ಶ್ರೀಯುತ ಎಚ್ ಟಿ ಬಾಗಲಕೋಟೆ ಕುಲಸಚಿವರು ಹಾವೇರಿ ವಿಶ್ವವಿದ್ಯಾನಿಲಯ ಹಾವೇರಿ ಇವರು ಅಭಿಪ್ರಾಯಪಟ್ಟರು.
ಸಾಗರದ ಶ್ರೀಮತಿ ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಅರ್ಥಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲ್ಪಟ್ಟಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣ ದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡುತ್ತಿದ್ದರು. ಇಂದು ಕೃಷಿಯನ್ನು ಅಭಿವೃದ್ಧಿಪಡಿಸಬೇಕಾದರೆ ಇಸ್ರಾಯಿಲ್ ಮತ್ತು ಅಭಿವೃದ್ಧಿ ರಾಷ್ಟ್ರಗಳಲ್ಲಿ ಅನುಸರಿಸಲಾಗುತ್ತಿರುವ ವಿವಿಧ ತಂತ್ರಜ್ಞಾನ ಗಳನ್ನು ಮತ್ತು ಅಲ್ಲಿನ ವಶಿಷ್ಠ ತಳಿಗಳನ್ನು ನಮ್ಮಲ್ಲಿ ಬಳಸಿಕೊಳ್ಳುವ ಮೂಲಕ ದೇಶದ ಕೃಷಿಯಲ್ಲಿ ಉತ್ಪನ್ನವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬಹುದು ಎಂದರು.
ದೇಶದಲ್ಲಿ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ರೈತ ಪರ ಮತ್ತು ಕೃಷಿ ಪರ ನೀತಿಗಳ ಅವಲೋಕನವನ್ನು ಮಾಡಿ ಅನೇಕ ವಿಚಾರಗಳ ಬಗ್ಗೆ ವಿಷಯವನ್ನು ಮಂಡಿಸಿದರು. ದೇಶದಲ್ಲಿ ನಗದು ಹಣವನ್ನು ವರ್ಗಾಯಿಸುವ ಮೂಲಕ ರೈತರ ಅಭಿವೃದ್ಧಿ ಕಷ್ಟ ಸಾಧ್ಯ ರೈತರನ್ನು ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕು ಎಂದು ಹೇಳಿದರು.
ಈಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಬೇಲೂರು ಗೋಪಾಲಕೃಷ್ಣ ರವರು ತಮ್ ಉದ್ಘಾಟಕಾ ನುಡಿಯಲ್ಲಿ ದೇಶದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಹಾಗೂ ವಿಶೇಷವಾಗಿ ಆತ್ಮಹತ್ಯೆಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಈ ವಿಚಾರ ಸಂಕಿರಣದಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಅನೇಕ ಅರ್ಥಶಾಸ್ತ್ರಜ್ಞರು ಭಾಗವಹಿಸಿದ್ದರು. ವಿಶೇಷವಾಗಿ ದಾವಣಗೆರೆ ವಿಶ್ವವಿದ್ಯಾಲಯದ ಡಾಕ್ಟರ್ ಕೆ ಬಿ ರಂಗಪ್ಪ, ತಮಿಳುನಾಡು ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನ ಡಾಕ್ಟರ್ ದಿಲೀಪ್ ಆನಂದ್ ಅವರು ಕಾರ್ಯಕ್ರಮದಲ್ಲಿ ಭಾಷಣವನ್ನು ಮಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರದ ಪ್ರೊ. ರಾಜೇಶ್ವರಿ ಎಚ್ ಅವರು ವಹಿಸಿದ್ದರು. ವಿಚಾರ ಸಂಕಿರಣದಲ್ಲಿ ಐ ಕ್ಯೂ ಎ ಸಿ ಸಂಯೋಜಕರಾದ ಡಾ. ಶಿವಾನಂದ್ ಭಟ್, ಕುವೆಂಪು ವಿವಿ ಅರ್ಥಶಾಸ್ತ್ರ ಸಂಘದ ಅಧ್ಯಕ್ಷರಾದ ಎ ಟಿ ಪದಮೇಗೌಡ, ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯರಾದ ವಿರೇಂದ್ರ ಜೈನ್, ರಂಜನ್ ಶೆಟ್ಟಿ ಹಾಗೂ ಅನೇಕರು ಉಪಸ್ಥಿತರಿದ್ದರು.
ಕುಮಾರಿ ಸಪ್ತಕ ಪ್ರಾರ್ಥಿಸಿದರೇ, ಡಾ. ಟಿ ಚಂದ್ರಶೇಖರ್ ಸ್ವಾಗತಿಸಿದರು. ಡಾ. ನಾಸಿರ್ ಖಾನ್ ಇವರು ಪ್ರಾಸ್ತಾವಿಕ ಮಾತನಾಡಿದರು. ಉದ್ಘಾಟನೆ ಕಾರ್ಯಕ್ರಮವು ಡಾ. ಅಶ್ವಿನಿ ಹೆಚ್ ಬಿದರಳ್ಳಿರವರ ವಂದನೆಯೊಂದಿಗೆ ಮುಕ್ತಾಯಗೊಂಡಿತು. ಡಾಕ್ಟರ್ ದೀಪ ಬಿ ಅವರು ನಿರೂಪಿಸಿದರು.