ಬೆಂಗಳೂರು: ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ(ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆ)ಯಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಗಳು ಮತ್ತು ಇತರೆ ವೃಂದದಲ್ಲಿ 5 ವರ್ಷದಿಂದ ನಿಯೋಜನೆ ಮೇರೆಗೆ ಇರುವ ಅಧಿಕಾರಿಗಳು ಮಾತೃ ಇಲಾಖೆಗೆ ತೆರಳದೆ ಆಹಾರ ಸುರಕ್ಷತಾಧಿಕಾರಿಗಳ ಮೇಲೆ ಗದಾಪ್ರಹಾರ ನಡೆಸುತ್ತಿದ್ದಾರೆ.
ಆರೋಗ್ಯ ಇಲಾಖೆಯಿಂದ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಗೆ ನಿಯೋಜನೆ ಮೇರೆಗೆ ಬಂದಿರುವ ವೈದ್ಯರ ಅವಧಿ ಈಗಾಗಲೇ ಮುಗಿದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಹುದ್ದೆಯಿಂದ ಬಿಡುಗಡೆಗೊಂಡು ಮಾತೃ ಇಲಾಖೆಗೆ ತೆರಳುವಂತೆ ಇಲಾಖೆ ಆದೇಶಿಸಿ ಎರಡು ತಿಂಗಳಾಗಿದೆ. ಆದರೆ,ಮಾತೃ ಇಲಾಖೆಗೆ ತೆರಳದ ವೈದ್ಯರು, ಆಹಾರ ಸುರಕ್ಷತಾಧಿಕಾರಿಗಳ ಕುರಿತು ಅನಗತ್ಯ ತಪ್ಪು ಮಾಹಿತಿ ಮತ್ತು ದೂರುಗಳನ್ನು ನೀಡಿ ಸರ್ಕಾರಕ್ಕೆ ಮುಜುಗರ ತರುತ್ತಿದ್ದಾರೆ.
ನಕಲಿ ಅಂಕಪಟ್ಟಿ ಕೊಟ್ಟು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರನ್ನು ಈಗಾಗಲೇ ಅಮಾನತ್ತು ಮಾಡಲಾಗಿದೆ. ಆದರೂ ವೈದ್ಯರುಗಳು ಅಗಾಗ್ಗೆ ಅಂಕಪಟ್ಟಿ ಬಗ್ಗೆ ಸುಳ್ಳು ದೂರು ನೀಡಿ ಸರ್ಕಾರಕ್ಕೆ ಮುಜುಗರ ಪಡಿಸುತ್ತಿದ್ದಾರೆ.ಇಲಾಖೆಯಲ್ಲಿ ಪ್ರಸ್ತುತವಾಗಿ ಕಾರ್ಯನಿರ್ವಹಿಸುತ್ತಿರುವವರ ಅಂಕಪಟ್ಟಿ ಪರಿಶೀಲಿಸಲಾಗಿದೆ. ತನಿಖೆಯಲ್ಲಿ ನೈಜ ಅಂಕಪಟ್ಟಿ ಎಂದು ದೃಢಪಟ್ಟಿದೆ.ಆದರೂ, ಅಂಕಪಟ್ಟಿ ಬಗ್ಗೆ ವೈದ್ಯರು ಸೇರಿ ಇತರರು, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ಇಲಾಖೆ ಮೇಲೆ ಹಿಡಿತ ಸಾಧಿಸಲು ವೈದ್ಯರು ಪ್ರಯತ್ನ ಮಾಡುತ್ತಿದ್ದಾರೆ.
ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆಯಲ್ಲಿ ಶೇ.25ರಷ್ಟು ಹಿರಿಯ /ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ನಿಯೋಜಿಸಲು ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದೇ ಸಿ ಆ್ಯಂಡ್ ಆರ್ ನಿಯಮದಲ್ಲಿ ರೂಲ್3ನಲ್ಲಿ ಕ್ರಮ ಸಂಖ್ಯೆ 5ರಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಹಾರ ನಿರೀಕ್ಷಕರು, ಆಹಾರ ಸುರಕ್ಷತಾಧಿಕಾರಿಗಳನ್ನು ಮರುಪಡಾನಾಮಿಕರಿಸಿ ಹಿರಿಯ ಆಹಾರ ಸುರಕ್ಷತಾಧಿಕಾರಿಗಳು ಎಂದು 21 ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ಔಷಧ ಇಲಾಖೆಗೆ ವರ್ಗಾಯಿಸಲಾಗಿದೆ.
ಅದೇರೀತಿ, ಕ್ರಮ ಸಂಖ್ಯೆ 6ರಲ್ಲಿ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು, ಆಹಾರ ನಿರೀಕ್ಷಕರು, ಆಹಾರ ಸುರಕ್ಷತಾಧಿಕಾರಿಗಳನ್ನು 45 ಮಂದಿಯನ್ನು ವರ್ಗಹಿಸಲಾಗಿದೆ ಮತ್ತು ನಿಯಮ( 6)ಕಾರ್ಯಕಾರಿ ಆದೇಶದ ಮೇರೆಗೆ ಹಿರಿಯ /ಆಹಾರ ಸುರಕ್ಷತಾಧಿಕಾರಿಗಳಾಗಿ ವರ್ಗಾಯಿಸಲಾಗಿದೆ. ಈ ಆದೇಶವನ್ನು ಜಾರಿಯಾದ ದಿನಾಂಕದಿಂದ ಉಳಿಸಲಾಗಿದೆ. ಆದರೆ, ನಿಗದಿಗೊಳಿಸಿದ್ದ ವೇತನ ನೀಡದಿದ್ದಾಗ ಇವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯ ಇವರುಗಳಿಗೆ ಹಿರಿಯ/ಆಹಾರ ಸುರಕ್ಷಾತಾಧಿಕಾರಿಗಳ ವೇತನ ನೀಡಲು ಆದೇಶ ನೀಡಿತ್ತು. ಅದರಂತೆ, ವೇತನ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯ ಹಂತದಲ್ಲಿದೆ. ಎಲ್ಲ ಸರಿ ಇದ್ದರೂ ನಿಯಮಬಾಹಿರವಾಗಿ ಅನ್ಯ ಇಲಾಖೆಯಿಂದ ಈ ಇಲಾಖೆಗೆ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರು , ವೈದ್ಯರು ಮತ್ತು ದಂತ ವೈದ್ಯರು ಮತ್ತು ಇತರೆ ಬೇರೆ ಇಲಾಖೆಯಿಂದ 6ವರ್ಷ್ ಮೇಲ್ಪಟ್ಟ ಇರುವ ಸಿಬ್ಬಂದಿಗಳು, ಇವರ ವಿರುದ್ಧ ಬೇಕಂತಲಲೆ ಅನಗತ್ಯವಾಗಿ ದೂರು ನೀಡುವುದು, ಸಂಘದಿಂದ ಪತ್ರ ಬರೆಯುವುದೂ ಸೇರಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ವೇತನ, ಬಡ್ತಿ ಸಿಗದಂತೆ ವೈದ್ಯರು ನೋಡಿಕೊಳ್ಳತ್ತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ 101 ಸಿಬ್ಬಂದಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಆಹಾರ ಸುರಕ್ಷತಾಧಿಕಾರಿಗಳ ಹುದ್ದೆಗಳ ಭರ್ತಿ ಮಾಡುವವರೆಗೆ ತರಬೇತಿ ಪಡೆದಿರುವ ಇವರನ್ನೇ ಮುಂದುವರಿಸಿದರೆ ಪರಿಣಾಮಕಾರಿಯಾಗಿ ಆಹಾರ ಕಲಬೆರಕೆ ತಡೆಗೆ ಅನುಕೂಲವಾಗಲಿದೆ.