ಬೆಂಗಳೂರು : ನೋಂದಾಯಿತ ಕಾರ್ಮಿಕ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಮಂಡಳಿಯು ಸಹಾಯಧನವನ್ನು ನೀಡುತ್ತದೆ. ಫಲಾನುಭವಿಯು ಅಗತ್ಯ ದಾಖಲೆಗಳೊಂದಿಗೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಕಾರ್ಮಿಕ ಇಲಾಖೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹೆರಿಗೆ ಸೌಲಭ್ಯ
ನೋಂದಾಯಿತ ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಮಂಡಳಿಯು ಸಹಾಯಧನವನ್ನು ನೀಡುತ್ತದೆ
ಈ ಸೌಲಭ್ಯ ಪಡೆಯಲು ಹೊ೦ದಿರಬೇಕಾದ ಅರ್ಹತೆಗಳು
• ಮ೦ಡಳಿಯಲ್ಲಿ ನೋಂದಾಯಿತ ಕಾರ್ಮಿಕರಾಗಿರಬೇಕು
• ಮೊದಲ ಎರಡು ಹೆರಿಗೆಗೆ ಮಾತ್ರ ಸಹಾಯಧನ ಮಂಜೂರು ಮಾಡಲಾಗುವುದು
• ಈಗಾಗಲೇ ನೋಂದಾಯಿತ ಮಹಿಳಾ ಕಾರ್ಮಿಕಳಿಗೆ ಇಬ್ಬರು ಮಕ್ಕಳಿದ್ದಲ್ಲಿ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುವುದಿಲ್ಲ
• ಮಗುವಿನ ಜನನದ ದಿನಾಂಕದಿಂದ ಆರು ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು
ಕಾರ್ಮಿಕ ಸಹಾಯವಾಣಿ 155214