ಅಮರಾವತಿ: ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷದ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಅವರು ಮಹಿಳೆಯರಿಗೆ ಬಂಪರ್ ಘೋಷಿಸಿದ್ದಾರೆ. 3ನೇ ಮಗುವಿಗೆ ಜನ್ಮ ನೀಡುವ ಮಹಿಳೆಯರಿಗೆ ವಿಶೇಷ ಉಡುಗೋರೆ ನೀಡುವುದಾಗಿ ಘೋಷಿಸಿದ್ದಾರೆ.
ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾಡಿರುವಂತ ಅವರು, ಮಹಿಳೆಯೊಬ್ಬರು 3ನೇ ಮಗುವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ರೇ ನನ್ನ ಸ್ವಂತ ವೇತನದಲ್ಲಿ 50,000 ನೀಡುವುದಾಗಿ ಘೋಷಿಸಿದ್ದಾರೆ. ಇನ್ನು ಗುಂಡು ಮಗುವಿಗೆ ಜನ್ಮ ನೀಡಿದ್ರೆ 1 ಹಸು ಉಡುಗೋರೆಯಾಗಿ ಕೊಡಲಾಗುತ್ತದೆ ಅಂತ ತಿಳಿಸಿದರು.
ತೆಲುಗು ದೇಶಂ ಪಕ್ಷದ ಸಂಸದ ಕಾಳಿಸೆಟ್ಟಿ ಅಪ್ಪಲನಾಯ್ಡು ಅವರು ನಿನ್ನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವಂತ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
“ಎಲ್ಲಾ ಮಹಿಳೆಯರು ಸಾಧ್ಯವಾದಷ್ಟು ಮಕ್ಕಳನ್ನು ಹೊಂದಬೇಕು ಎಂಬ ಬಲವಾದ ಸಂದೇಶವನ್ನು ಮುಖ್ಯಮಂತ್ರಿ ರವಾನಿಸಿದ್ದಾರೆ” ಎಂದು ಟಿಡಿಪಿ ನಾಯಕರೊಬ್ಬರು ಹೇಳಿದರು.
ಹೆರಿಗೆ ರಜೆ ಅರ್ಹತೆಯ ಬಗ್ಗೆ ಕಾನ್‌ಸ್ಟೆಬಲ್ ಒಬ್ಬರು ಹಿಂದಿನ ದಿನ ಗೃಹ ಸಚಿವರಿಗೆ ಎತ್ತಿದ್ದ ಸಂದೇಹವನ್ನು ಈ ಘೋಷಣೆ ಸ್ಪಷ್ಟಪಡಿಸಿದೆ.