ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ನಾಗವಳ್ಳಿ ಸೇರಿದಂತೆ ಇತರೆ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ರೈತರು, ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ರೈತರ ಬೆಳೆ ಒಣಗುತ್ತಿದೆ. ಕುಡಿಯೋದಕ್ಕೆ ನೀರಿಗೆ ಸಮಸ್ಯೆ ಉಂಟಾಗಿದೆ. ಈ ಕೂಡಲೇ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಎಂಡಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಸಂಬಂಧ ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವಂತ ಅವರು, ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ನಾಗವಳ್ಳಿ, ನೆಲಹರಿ, ಗುಡ್ಡೆ ಹಿತ್ತು, ಬಾಳಿಗಾ ಗ್ರಾಮಗಳಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ರೈತ ಕುಟುಂಬಗಳು ವಾಸವಿದ್ದು, ಬಹುತೇಕ ಕುಟುಂಬಗಳು ಕೃಷಿ ಮತ್ತು ತೋಟಗಾರಿಕೆಗೆ ಅವಲಂಬಿತರಾಗಿದ್ದಾರೆ ಎಂದಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಸರಿಯಾದ ರೀತಿಲ್ಲಿ ವಿದ್ಯುತ್ ಕಲ್ಪಿಸದೇ ಇರುವುದರಿಂದ ಬಹುತೇಕ ಬೆಳೆಗಳು ನಾಶದ ಅಂಚಿನಲ್ಲಿದೆ. ಜೊತೆಗೆ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಓದಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾಗರ ತಾಲ್ಲೂಕು, ಭಾರಂಗಿ ಹೋಬಳಿ, ನಾಗವಳಿ, ಭಾಗಕ್ಕೆ ಭಟ್ಕಳ ಭಾಗದಿಂದ ಬರುವ ವಿದ್ಯುತ್ ಸಂಪರ್ಕವನ್ನು ಮಾರ್ಚ್ ತಿಂಗಳಿನಲ್ಲಿ ವಿದ್ಯಾರ್ಥಿಗಳ ಪರೀಕ್ಷೆಯ ಹಿತದೃಷ್ಟಿಯಿಂದ ಸಂಜೆ 6-00 ರಿಂದ ರಾತ್ರಿ 10-00 ಗಂಟೆವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡುವಂತೆ ನಾಗವಳಿ ಹಾಗೂ ಸುತ್ತಮುತ್ತಲಿನ ಹಿತರಕ್ಷಣಾ ವೇದಿಕೆ ಅಧ್ಯಕ್ಷರು/ಸದಸ್ಯರು ಮನವಿ ಸಲ್ಲಿಸಿದ್ದರು ಎಂಬುದಾಗಿ ಹೇಳಿದ್ದಾರೆ.
ಸದರಿ ಮನವಿಯನ್ನು ಪರಿಗಣಿಸಿ, ಸಾಗರ ತಾಲ್ಲೂಕು, ಭಾರಂಗಿ ಹೋಬಳಿ, ನಾಗವಳ್ಳಿ, ಭಾಗಕ್ಕೆ ಭಟ್ಕಳ ಭಾಗದಿಂದ ಬರುವ ವಿದ್ಯುತ್ ಸಂಪರ್ಕವನ್ನು ಮಾರ್ಚ್ ತಿಂಗಳಿನಲ್ಲಿ ವಿದ್ಯಾರ್ಥಿಗಳ ಪರೀಕ್ಷೆಯ ಹಿತದೃಷ್ಟಿಯಿಂದ ಸಂಜೆ 6-00 ರಿಂದ ರಾತ್ರಿ 10-00 ಗಂಟೆವರೆಗೆ ಸಿಂಗಲ್ ಫೇಸ್ ವಿದ್ಯುತ್ ನೀಡುವಂತೆ ಹೆಸ್ಕಾಂ ಎಂಡಿಯವರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಕೋರಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
‘ಸಮರ್ಪಕ ವಿದ್ಯುತ್’ ಪೂರೈಸುವಂತೆ ಹೆಸ್ಕಾಂ ಅಧಿಕಾರಿ ಭೇಟಿಯಾಗಿ ‘ಅಶೋಕ್ ಬೇಳೂರು’ ಮನವಿ
ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಪುರುಷರಿಗಿಂತ ಮಹಿಳಾ ಹೂಡಿಕೆದಾರರು ಮೇಲುಗೈ ಸಾಧಿಸಿದ್ದಾರೆ: ವರದಿ | Mutual fund