ಬೆಂಗಳೂರು : ಬಿಯಾಂಡ್ ಬೆಂಗಳೂರು ಕ್ಲಸ್ಟರ್‌ಗಳಿಗೆ ಭಾರಿ ಪ್ರೋತ್ಸಾಹ- ₹1000 ಕೋಟಿ ಅನುದಾನದಲ್ಲಿ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ (ಲೀಪ್) ಪ್ರಾರಂಭಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡರುವ ಸಚಿವರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿಯಂತಹ ಕ್ಲಸ್ಟರ್‌ಗಳಲ್ಲಿ ಸ್ಟಾರ್ಟ್‌ಅಪ್ ಇಕೋ ಸಿಸ್ಟಂ ಅಭಿವೃದ್ಧಿ, ಇನ್ಕ್ಯೂಬೇಟರ್‌ಗಳು, ಆಕ್ಸಿಲರೇಟರ್‌ಗಳು, ಉತ್ಕೃಷ್ಟತಾ ಕೇಂದ್ರಗಳು ಹಾಗೂ ಜಾಗತಿಕ ತಂತ್ರಜ್ಞಾನ ಕೇಂದ್ರಗಳ (ಜಿಟಿಸಿ) ಮೂಲಕ ಬೆಂಬಲ. ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ ನೀಡಲು ₹300 ಕೋಟಿ ಫಂಡ್ ಆಫ್ ಫಂಡ್ಸ್. ಡೀಪ್‌ಟೆಕ್ ಅಭಿವೃದ್ಧಿಗಾಗಿ ₹100 ಕೋಟಿ ಕಾರ್ಪಸ್ ಫಂಡ್ ನಿಂದಾಗಿ ಕರ್ನಾಟಕದಾದ್ಯಂತ 5 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.