ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೊಸ ನಿಯಮ ಜಾರಿಗೊಳಿಸಲಾಗುತ್ತಿದೆ. ಇನ್ಮುಂದೆ ಒಂದು ಪ್ರಶ್ನೆಗೆ ನಾಲ್ಕು ಆಯ್ಕೆಗಳ ಬದಲಾಗಿ ಐದು ಆಯ್ಕೆ ನೀಡಲಿದೆ ಎಂಬುದಾಗಿ ಕೆಇಎ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಕೆಇಎ, ಇನ್ಮುಂದೆ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆಗೆ ಉತ್ತರವಾಗಿ ಐದು ಆಯ್ಕೆಯನ್ನು ಕೊಡಲಿದೆ. ಇನ್ಮುಂದೆ ನಡೆಯುವಂತ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ಹೊಸ ನಿಯಮ ಅನ್ವಯ ಆಗಲಿದೆ ಎಂದಿದೆ.
ಇನ್ನೂ ಯುಜಿ ಸಿಇಟಿ-2025ರ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪರೀಕ್ಷಾರ್ಥಿಗಳು ಗೊಂದಲಕ್ಕೆ ಒಳಗಾಗಬಾರದು. ಸಿಇಟಿ ಪರೀಕ್ಷೆಯಲ್ಲಿ ಎಂದಿನಂತೆ ಒಂದು ಪ್ರಶ್ನೆಯ ಉತ್ತರಕ್ಕೆ ನಾಲ್ಕು ಆಯ್ಕೆಗಳನ್ನು ನೀಡಲಾಗುತ್ತದೆ ಎಂಬುದಾಗಿ ಹೇಳಿದೆ.
ಕೆಇಎ ನಡೆಸುವಂತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರವೇ ನಾಲ್ಕು ಉತ್ತರಗಳ ಬದಲಾಗಿ ಐದು ಉತ್ತರಗಳ ಆಯ್ಕೆಯನ್ನು ಇನ್ಮುಂದೆ ನೀಡಲಾಗುತ್ತದೆ ಎಂಬುದಾಗಿ ಮಾಹಿತಿ ನೀಡಿದೆ.
ಮಾ.8ರಿಂದ ಜೂನ್ 30ರವರೆಗೆ ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ: ಸಚಿವ ಪ್ರಿಯಾಂಕ್ ಖರ್ಗೆ
GOOD NEWS : ಇನ್ಮುಂದೆ ಹರಟೆ ಹೊಡೆಯಲು ಶಾಸಕರಿಗೂ ‘ಕ್ಲಬ್’ ವ್ಯವಸ್ಥೆ : ಸ್ಪೀಕರ್ ಯುಟಿ ಖಾದರ್ ಹೇಳಿಕೆ