ಬೆಂಗಳೂರು :ಸರ್ಕಾರದ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳಾದ “ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ” (Pಒಎಎಃಙ) ಯೋಜನೆಯು ಅವಧಿ ವಿಮಾ (Term Insurance) ಯೋಜನೆಯಾಗಿದ್ದು ಮತ್ತು “ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ” (PMSBY) ಅಪಘಾತ ವಿಮಾ ಯೋಜನೆಯಾಗಿದ್ದು, ಸರ್ಕಾರದ ಇಲಾಖೆ / ಕಚೇರಿ / ನಿಗಮ / ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು, ಗುತ್ತಿಗೆ / ಹೊರಗುತ್ತಿಗೆ, ದಿನಗೂಲಿ ನೌಕರರಿಗೂ, ಅದರಲ್ಲೂ ಮುಖ್ಯವಾಗಿ ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಸಂಘಟಿತ ವಲಯ ಕಾರ್ಮಿಕರು, ಸ್ವಸಹಾಯ ಸಂಘ ಮತ್ತು ಸಹಕಾರ ಸಂಘಗಳ ಸದಸ್ಯರು, ಬಸ್ ಚಾಲಕರು, ನಿರ್ವಾಹಕರು, ಮೆಕಾನಿಕ್ಸ್, ಲೈನ್ ಮ್ಯಾನ್, ಎಲೆಕ್ಟ್ರೀಷಿಯನ್‍ಗಳು, ಸ್ವಚ್ಚತಾ ಕರ್ಮಿಗಳು, ಪೌರ ಕಾರ್ಮಿಕರು, ಮಧ್ಯಾಹ್ನದ ಬಿಸಿಯೂಟದ ಕೆಲಸ ನಿರ್ವಹಿಸುವ ಸಿಬ್ಬಂದಿ ಮತ್ತು ನಾಗರೀಕರಿಗೆ ತಮ್ಮ ಜೀವನದ ಅನಿಶ್ಚಿತತೆಗಳನ್ನು ಮತ್ತು ಆರ್ಥಿಕ ತೊಂದರೆಗಳನ್ನು ಎದುರಿಸಲು ಆರ್ಥಿಕ ಭದ್ರತೆಯನ್ನು ನೀಡುತ್ತದೆ.
ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ ಆರ್ಥಿಕ ಭದ್ರತೆಯನ್ನು ಪಡೆಯಲು 18ರಿಂದ 50 ವರ್ಷ ವಯೋಮಿತಿಯಲ್ಲಿದ್ದು, ವಾರ್ಷಿಕ ರೂ 436/- ಪ್ರಿಮೀಯಂ ಮೊತ್ತ ಪಾವತಿಸಿದ್ದಲ್ಲಿ ರೂ 2.00 ಲಕ್ಷಗಳ ಪಾಲಿಸಿಯನ್ನು ಪಡೆಯಬಹುದಾಗಿದೆ. ಪಾಲಿಸಿದಾರರು ಸ್ವಾಭಾವಿಕವಾಗಿ ಮರಣ ಹೊಂದಿದಲ್ಲಿ ಸಂಪೂರ್ಣ ಪಾಲಿಸಿಯ ಮೊತ್ತವನ್ನು ಅವರ ಅವಲಂಭಿತರಿಗೆ ಪಾವತಿಸಲಾಗುವುದು.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಆರ್ಥಿಕ ಭದ್ರತೆಯನ್ನು ಪಡೆಯಲು 18ರಿಂದ 70 ವರ್ಷಗಳ ವಯೋಮಿತಿಯಲ್ಲಿದ್ದು, ವಾರ್ಷಿ ರೂ 20/- ಪ್ರೀಮಿಯಂ ಮೊತ್ತ ಪಾವತಿಸಿದಲ್ಲಿ ರೂ. 2.00ಲಕ್ಷ ಪಾಲಿಸಿಯನ್ನು ಪಡೆಯಬಹುದಾಗಿದೆ. ಪಾಲಿಸಿದಾರರು ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತ ಒಟ್ಟು ಅಂಗವೈಕಲ್ಯಕ್ಕೆ ರೂ. 2.00 ಲಕ್ಷ ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ರೂ ಲಕ್ಷಗಳನ್ನು ಪಡೆಯಬಹುದು.
ಈ ಯೋಜನೆಗಳಡಿ ನೋಂದಣಿಯನ್ನು ಬ್ಯಾಂಕ್ ಮತ್ತು ಅಂಚೆ ಕಚೇರಿಗಳಲ್ಲಿ ಮಾಡಲಾಗುವುದು. ಪ್ರತಿ ವರ್ಷ ಯೋಜನೆಯ ನೋಂದಣಿಯನ್ನು ವಾರ್ಷಿಕವಾಗಿ ನವೀಕರಿಸಬೇಕಾಗುತ್ತದೆ. ಪ್ರತಿ ವರ್ಷ ಮೇ, 31 ರಂದು ಆಟೋ ಡೆಬಿಟ್ ಆಗುತ್ತದೆ.
ಪರಿಹಾರಕ್ಕಾಗಿ 45 ದಿನದ ಒಳಗಾಗಿ ಅರ್ಜಿಯೊಂದಿಗೆ ಸಂಬಂಧಪಟ್ಟ ದಾಖಲೆಗಳನ್ನು ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಗೆ ಸಲ್ಲಿಸುವುದು ಹಾಗೂ ಅರ್ಜಿ ಸಲ್ಲಿಸಿದ ದಿನಾಂಕದಿಂದ 60 ದಿನದೊಳಗಾಗಿ ವಿಮಾ ಮೊಬಲಗು ದೊರೆಯುತ್ತದೆ. ಈ ಯೋಜನೆಗಳ ನೋಂದಣಿಯನ್ನು ಬ್ಯಾಂಕ್ ಮತ್ತು ಅಂಚೆ ಕಛೇರಿಗಳಲ್ಲಿ, ಜನಸುರಕ್ಷಾ ಪೆÇೀರ್ಟಲ್ ಹಾಗೂ ಬ್ಯಾಂಕ್‍ಗಳ ಮೊಬೈಲ್ ಅಪ್ಲಿಕೇಶನ್‍ಗಳಲ್ಲೂ ಸಹ ಪಡೆಯಬಹುದಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.