ಬೆಂಗಳೂರು: ತುಮಕೂರಲ್ಲಿ ಬೋನಿಗೆ ಬಿದ್ದಿದ್ದಂತ ಚಿರತೆಯೊಂದು ಆ ಬಳಿಕ ತೋಟದಲ್ಲಿ ಸಂಭವಿಸಿದಂತ ಅಗ್ನಿ ಅನಾಹುತದಲ್ಲಿ ಸಾವನ್ನಪ್ಪಿತ್ತು. ಈ ಪ್ರಕರಣದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆಗೆ ಆದೇಶಿಸಿದ್ದಾರೆ.
ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ತುಮಕೂರು ಜಿಲ್ಲೆ ತಿಪಟೂರು ವಲಯದ ಚೌಡ್ಲಾಪುರ ಗಸ್ತು ಮಧ್ಯೆಹಳ್ಳ ಗ್ರಾಮದ ತೋಟದಲ್ಲಿ ಬೋನಿಗೆ ಬಿದ್ದ ಚಿರತೆ, ನಂತರ ತೋಟದಲ್ಲಿ ಸಂಭವಿಸಿದ ಅಗ್ನಿ ಅನಾಹುತದ ವೇಳೆ ಹೊಗೆಯಿಂದ ಉಸಿರುಕಟ್ಟಿ ಮೃತಪಟ್ಟದ್ದು, ಇದಕ್ಕೆ ಅರಣ್ಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂಬುದಾಗಿ ತಿಳಿಸಿದ್ದಾರೆ.
ಚಿರತೆಯ ಅಸಹಜ ಸಾವಿನ ಬಗ್ಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿಯಿಂದ ಸ್ಥಳ ತನಿಖೆ ನಡೆಸಿ, ಅರಣ್ಯ ಸಿಬ್ಬಂದಿಯ ನಿರ್ಲಕ್ಷ್ಯ ಇದ್ದಲ್ಲ. ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
BIG NEWS: ಬೆಂಗಳೂರಲ್ಲಿ KPME ನಿಯಮ ಉಲ್ಲಂಘಿಸಿದ 16 ಆಸ್ಪತ್ರೆಗಳಿಗೆ ದಂಡ, 2 ಸಂಸ್ಥೆ ವಿರುದ್ಧ FIR ದಾಖಲು
BIG UPDATE: ಮಂಗಳೂರು ಜೈಲಲ್ಲಿ ಖೈದಿಗಳಿಗೆ ಪುಡ್ ಪಾಯಿಸನ್ ಕೇಸ್: ಓರ್ವ ಕೈದಿಯ ಸ್ಥಿತಿ ಗಂಭೀರ