ಬಂಟ್ವಾಳ : ರಾಜ್ಯದಲ್ಲಿ ದಿನಿಂದ ದಿನಕ್ಕೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು , ಈ ನಡುವೆ ಬಿಸಿಲಿನ ಝಳಕ್ಕೆ ಕಲ್ಲು ಒಡೆಯಲು ತಂಡಿಟ್ಟಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲಮೂಡ್ನೂರು ಗ್ರಾಮದಲ್ಲಿ ಬಿಸಿಲಿನ ಝಳಕ್ಕೆ ಜಿಲಿಟೆನ್ ಕಡ್ಡಿ ಸ್ಪೋಟಗೊಂಡ ಪರಿಣಾಮ 15 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಕ್ವಾರಿಯಲ್ಲಿ ಕಲ್ಲು ಒಡೆಯಲೆಂದು ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತ್ತು. ಬಿಸಿಲಿನಿಂದ ಜಿಲೆಟಿನ್ ಕಡ್ಡಿಗಳು ಏಕಾಏಕಿ ಸ್ಫೋಟಗೊಂಡಿವೆ. ಸ್ಪೋಟದಿಂದಾಗಿ ಸುಮಾರು 4 ಕಿ.ಮೀ ವ್ಯಾಪ್ತಿಯಲ್ಲಿದ್ದ ಮನೆಗಳು ಹಾನಿಯಾಗಿದ್ದು, ಗೋಡೆಗಳಲ್ಲಿ ಬಿರುಕು ಬಿಟ್ಟಿವೆ. ಕಿಟಕಿ, ಛಾವಣಿಗಳು ಹಾನಿಯಾಗಿವೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಎಸ್ ಪಿ ಯತೀಶ್ ಕುಮಾರ್ ಸೂಚನೆ ಮೇರೆಗೆ ಕ್ವಾರಿ ಮ್ಯಾನೇಜರ್ ನನ್ನು ವಿಟ್ಲ ಪೊಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.