ಬೆಳಗಾವಿ: ಪತಿ ಕುಡಿದು ಬಂದು ಕಿರುಕುಳ ನೀಡುತ್ತಿದ್ದರಿಂದ ಬೇಸತ್ತಂತ ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಹೃದಯ ವಿದ್ರಾವಕ ಘಟನೆ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಚಿಂಚಲಿ ಪಟ್ಟಣದಲ್ಲಿ ಅಶೋಕ ಡಾಲೆ ಎಂಬಾತ ಕುಡಿದು ಬಂದು ಪತ್ನಿ ಶಾರದಾಗೆ ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತಂತ ಶಾರದಾ ತನ್ನ ಮೂವರು ಮಕ್ಕಳಾದಂತ ಅಮೃತ, ಆದರ್ಶ ಹಾಗೂ ಅನುಷ್ಕಾ ಜೊತೆಗೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಶಾರದಾ ಕೃಷ್ಣಾ ನದಿಗೆ ಹಾರಿದ್ದನ್ನು ಗಮನಿಸಿದಂತ ಸ್ಥಳೀಯರು ರಕ್ಷಿಸೋದಕ್ಕೆ ಪ್ರಯತ್ನಿಸಿದ್ದಾರೆ. ಆದರೇ ಅದು ಸಾಧ್ಯವಾಗದೇ ನೀರಲ್ಲಿ ಮುಳುಗಿ ತಾಯಿ ಶಾರದಾ, ಮಕ್ಕಳಾದಂತ ಅಮೃತ ಹಾಗೂ ಆದರ್ಶ ಸಾವನ್ನಪ್ಪಿದ್ದಾರೆ. ಇನ್ನೂ ರಕ್ಷಿಸಲಾದಂತ ಅನುಷ್ಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಈ ಘಟನೆಯ ಬಳಿಕ ಕುಡಚಿ ಠಾಣೆಯ ಪೊಲೀಸರು ಪತಿ ಅಶೋಕ ಡಾಲೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ALERT : ಇಂದು ಭೂಮಿಯ ಬಳಿ ಹಾದು ಹೋಗಲಿದೆ 460 ಅಡಿ ಉದ್ದದ ಕ್ಷುದ್ರಗ್ರಹ : `NASA’ ಎಚ್ಚರಿಕೆ.!
BIG NEWS : ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಸರ್ಕಾರದಿಂದ `ಜಮೀನು ದಾರಿ’ಗೆ ಹೊಸ ಯೋಜನೆ ಜಾರಿ | WATCH VIDEO