ಬೆಂಗಳೂರು : ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ರಾಜ್ಯ ಸರ್ಕಾರ ರೂಪಿಸಿದ ನಗದು ರಹಿತ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನ ಪ್ರಕ್ರಿಯೆ ಕುರಿತಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ಉತ್ತರ ನೀಡಿದ್ದಾರೆ.
ತರೀಕೆರೆ ಶಾಸಕ ಶ್ರೀನಿವಾಸ ಜಿ.ಹೆಚ್. ಅವರ ಪ್ರಶ್ನೆಗೆ ಸಿಎಂ ಲಿಖಿತ ಉತ್ತರ ನೀಡಿದ್ದಾರೆ. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ನಿರ್ವಹಿಸಲು ಹಾಗೂ ಅನುಷ್ಠಾನಗೊಳಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಲ್ಲಿ ಒಂದು ಪ್ರತ್ಯೇಕ ಕೋಶವನ್ನು ಅವಶ್ಯಕವಿರುವ ಹುದ್ದೆಗಳೊಂದಿಗೆ ಸೃಜಿಸಿ ಆದೇಶಿಸಲಾಗಿದೆ. ಅವಶ್ಯ ಮೂಲ ಸೌಲಭ್ಯಗಳ ಪೂರೈಕೆ ಮತ್ತು ತಂತ್ರಾಂಶ ಅಭಿವೃದ್ದಿಪಡಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)”ಯನ್ನು ನಿರ್ವಹಿಸಲು ಹಾಗೂ ಅನುಷ್ಠಾನಗೊಳಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್‌ಟ್‌ನಲ್ಲಿ (SAST) ಒಂದು ಪ್ರತ್ಯೇಕ ಕೋಶವನ್ನು (KASS CELL) ಅವಶ್ಯಕವಿರುವ ಹುದ್ದೆಗಳೊಂದಿಗೆ ಸೃಜಿಸಿ ಆದೇಶಿಸಲಾಗಿದೆ ಮತ್ತು ಅವಶ್ಯವಿರುವ ಮೂಲ ಸೌಲಭ್ಯಗಳ ಪೂರೈಕೆ ಹಾಗೂ ತಂತ್ರಾಂಶ ಅಭಿವೃದ್ಧಿಪಡಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್‌ಟ್‌ಗೆ (SAST) ಅನುದಾನ ಬಿಡುಗಡೆ ಮಾಡಲಾಗಿದೆ.
‘ಕರ್ನಾಟಕ ಸಂಜೀವಿನಿ ಯೋಜನೆ’ಯನ್ನು ಜಾರಿಗೊಳಿಸುವ ಕಾರ್ಯನೀತಿ (POLICY FRAMEWORK) ಸಂಬಂಧಿಸಿದಂತೆ ಸೂಚನೆಗಳನ್ನು ನೀಡಲಾಗಿದೆ. ಸರ್ಕಾರಿ ನೌಕರರು ತಮ್ಮ ಅವಲಂಬಿತ ಕುಟುಂಬದ ಸದಸ್ಯರೊಂದಿಗೆ ನೋಂದಾಯಿಸಿಕೊಳ್ಳಲು ಯೋಜನೆಯಡಿ ನಮೂನೆಗಳನ್ನು ನಿಗದಿಪಡಿಸಿ ಆದೇಶಿಸಿದ್ದು, ಶೀಘ್ರವಾಗಿ ನೋಂದಾಯಿಸಿಕೊಳ್ಳುವಂತೆ ಸೂಚನೆಗಳನ್ನು ನೀಡಲಾಗಿದೆ. ಸಿಬ್ಬಂದಿಗಳ ಅಗತ್ಯ ಮಾಹಿತಿಯನ್ನು ಹೆಚ್‌ಆರ್‌ಎಂಎಸ್ ದತ್ತಾಂಶದಲ್ಲಿ ಅಳವಡಿಸುವ ಕಾರ್ಯವು ಸಹ ಜಾರಿಯಲ್ಲಿದೆ. DDO User Manual đ Mobile User Manual ಗಳನ್ನು ಎಲ್ಲಾ ಡಿಡಿಒ ಗಳಿಗೆ ಹೆಚ್‌ಆರ್‌ಎಂಎಸ್ ತಂತ್ರಾಂಶದಲ್ಲಿ ಲಭ್ಯಪಡಿಸಲಾಗಿದೆ.
ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರಿ ನೌಕರರಿಗೆ ಅನುಗುಣವಾಗುವಂತ ತಂತ್ರಾಂಶ ಅಭಿವೃದ್ಧಿ ಕಾರ್ಯವು SAST ಹಂತದಲ್ಲಿ ಪರಿಶೀಲನೆಯಲ್ಲಿದೆ.
ಈ ಯೋಜನೆಯನ್ನು ಶೀಘ್ರದಲ್ಲಿಯೆ ಜಾರಿಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ.
(ಅ) ಸದರಿ ಯೋಜನೆಗೆ ಯಾವ-ಯಾವ ಅಧಿಸೂಚಿಸಲಾಗಿದೆ: (ಜಿಲ್ಲಾವಾರು ಪಟ್ಟಿ ನೀಡುವುದು)
ಆಸ್ಪತ್ರೆಗಳನ್ನು ದಿನಾಂಕ: 09.03.2023ರ ಸರ್ಕಾರದ ಆದೇಶ
ಸಂಖ್ಯೆ: ಸಿಆಸುಇ 16 ಎಎಂಆರ್ 2020 (ಭಾ-5) ರಲ್ಲಿ ಈಗಾಗಲೇ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ (SAST) ನ ವಿವಿಧ ಯೋಜನೆಗಳಡಿಯಲ್ಲಿ ಮತ್ತು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963 ನೊಂದಾಯಿತವಾಗಿರುವ (ಜ್ಯೋತಿ ಸಂಜೀವಿನಿ ಯೋಜನೆ ಸೇರಿದಂತೆ) ಖಾಸಗಿ ಆಸ್ಪತ್ರೆಗಳನ್ನು KASS ಯೋಜನೆಯಡಿ ಭಾವಿತ ನೋಂದಾವಣೆಗೆ (Deemed Empanelment) να ಅನುಮತಿಸಲಾಗಿದೆ. KASS ಯೋಜನೆಯಡಿ ಖಾಸಗಿ ಆಸ್ಪತ್ರೆಗಳ ಜೊತೆ ನೂತನವಾಗಿ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದ ಕಾರ್ಯದ ಪ್ರಗತಿಯಲ್ಲಿರುತ್ತದೆ.
“ಇ) ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯವನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗುವುದು?
ಯಾವನದಸ್ಯರಿಗೆ ಪ್ರಸ್ತುತ ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ ಹಾಜರಾತಿ ನಿಯಮಗಳು 1963ರಡಿ ವೈದ್ಯಕೀಯ ವೆಚ್ಚ ಮರುಪಾವತಿ ಮತ್ತು ಜ್ಯೋತಿಸಂಜೀವಿನಿ ಯೋಜನೆಯಡಿಯಲ್ಲಿ ನಗದುರಹಿತ ವೈದ್ಯಕೀಯ ಚಿಕಿತ್ಸೆ ಜಾರಿಯಲ್ಲಿರುತ್ತದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಸಂಖ್ಯೆ: (ಅ) ಮತ್ತು (ಅ) ರಲ್ಲಿ ತಿಳಿಸಿದಂತೆ ಪ್ರಕ್ರಿಯೆ ಜಾರಿಯಲ್ಲಿದ್ದು, ಜಾರಿಗೊಳಿಸುವಲ್ಲಿ ವಹಿಸಲಾಗುತ್ತಿದೆ.