ಬೆಳಗಾವಿ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸುವ ಘಟನೆ ಎನ್ನುವಂತೆ ಪ್ರೇಯಸಿಯನ್ನು ಬರ್ಬರವಾಗಿ ಕೊಲೆಗೈದು, ತಾನೂ ಚಾಕುವಿನಿಂದ ಕತ್ತುಕೊಯ್ದುಕೊಂಡು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ.
ಬೆಳಗಾವಿಯ ಶಹಾಪುರದ ನವಿಗಲ್ಲಿ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಐಶ್ವರ್ಯ ರಮೇಶ್ ಲೋಹಾರ (18) ಎಂಬಾಕೆಯನ್ನು ಕತ್ತು ಕೊಯ್ದು ಪ್ರಿಯಕರ ಕೊಲೆ ಮಾಡಿದ್ದಾನೆ. ಆ ಬಳಿಕ ಪ್ರಿಯಕರ ಪ್ರಶಾಂತ್ ಯಲ್ಲಪ್ಪ ಕುಂಡೇಕರ (29) ಚಾಕುವಿನಿಂದ ತನ್ನ ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಇಂದು ಸಂಜೆ 5 ಗಂಟೆಗೆ ತನ್ನ ಚಿಕ್ಕಮ್ಮನ ಮನೆಗೆ ಐಶ್ವರ್ಯ ಹಾಗೂ ಪ್ರಶಾಂತ್ ಇಬ್ಬರು ಬಂದಿದ್ದರು. ಮೊದಲು ವಿಷ ಸೇವಿಸಿ ಆತ್ಮಹತ್ಯೆಗೆ ಐಶ್ವರ್ಯ ಪ್ರಯತ್ನಿಸಿದ್ದರು. ನಂತ್ರ ಚಾಕುವಿನಿಂದ ಪ್ರೇಯಸಿಯ ಕತ್ತು ಸೀಳಿದ್ದಾನೆ. ಆ ಬಳಿಕ ಪ್ರಶಾಂತ್ ಕೂಡ ಅದೇ ಚಾಕುವಿನಿಂದ ತನ್ನ ಕತ್ತುಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಬೆಳಗಾವಿಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರಾಯಚೂರಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ