ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಮ್ಮ ದೇವೆ ಜಾತ್ರೆಯು ಮಾರ್ಚ್ 05 ರಿಂದ 10 ರವರೆಗೆ ನಡೆಯಲಿದ್ದು, ವರದಾ ನದಿಯಲ್ಲಿ ಧಾರ್ಮಿಕ ಸ್ನಾನ ಮಾಡುವುದು, ದೇವರಿಗೆ ಮುಡಿಕೊಡುವುದು, ಪಡ್ಲಿಗಿ ತುಂಬಿಸುವುದು ಮತ್ತು “ಬೆತ್ತಲೆ ಸೇವೆ” ಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆರವರು ಆದೇಶ ಹೊರಡಿಸಿದ್ದಾರೆ.
ಈ ನಿಷೇಧಾಜ್ಞೆಯು ಶ್ರೀರೇಣುಕಮ್ಮ ದೇವಿಯ ರಥೋತ್ಸವ ಹಾಗೂ ಇತರೆ ಪೂಜಾ ಕಾರ್ಯಗಳು ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
BREAKING: ಮಾ.5ರಂದು ‘ರಾಜ್ಯ ಸಚಿವ ಸಂಪುಟ ಸಭೆ’ ನಿಗದಿ | Karnataka Cabinet Meeting