ಗುಜರಾತ್ ಎಟಿಎಸ್ ಮತ್ತು ಪಲ್ವಾಲ್ ಎಸ್‌ಟಿಎಫ್ ಕಳೆದ ಭಾನುವಾರ ಜಂಟಿ ಕಾರ್ಯಾಚರಣೆಯಲ್ಲಿ ಫರಿದಾಬಾದ್‌ನಿಂದ ಒಬ್ಬ ಭಯೋತ್ಪಾದಕನನ್ನು ಬಂಧಿಸಿದ್ದವು. ಮೂಲಗಳ ಪ್ರಕಾರ, ಶಂಕಿತ ಭಯೋತ್ಪಾದಕನು ರಾಮ ಮಂದಿರವೇ ತನ್ನ ಗುರಿಯಾಗಿತ್ತು ಎಂದು ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ.
ಅಬ್ದುಲ್ ರೆಹಮಾನ್ ನಿಂದ ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅಬ್ದುಲ್ ರೆಹಮಾನ್ ಯುಪಿಯ ಫೈಜಾಬಾದ್ ನಿವಾಸಿ. ಆತನ ಭಯೋತ್ಪಾದಕ ಸಂಪರ್ಕಗಳ ಬಗ್ಗೆ ನಿರಂತರವಾಗಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ, ಅಬ್ದುಲ್ ರೆಹಮಾನ್ ಅವರು ಫೈಜಾಬಾದ್‌ನಿಂದ ಫರಿದಾಬಾದ್‌ಗೆ ರೈಲಿನಲ್ಲಿ ಬಂದಿದ್ದ ಮತ್ತು ಫರಿದಾಬಾದ್‌ನಲ್ಲಿಯೇ ಯಾರೋ ಅಪರಿಚಿತ ವ್ಯಕ್ತಿ ಗ್ರಾಮದ ಬಳಿ 2 ಹ್ಯಾಂಡ್ ಗ್ರೆನೇಡ್‌ಗಳನ್ನು ನೀಡಿದ್ದಾಗಿ ಬಹಿರಂಗಪಡಿಸಿದ್ದಾನೆ .ಸ್ವತಃ ನಿರ್ವಾಹಕರೇ ಅವನ್ನು ಫರಿದಾಬಾದ್‌ನಲ್ಲಿಯೇ ಇರಲು ಕೇಳಿಕೊಂಡಿದ್ದರು. ನ್ಯಾಯಾಲಯವು ಆರೋಪಿಗೆ 10 ದಿನಗಳ ಕಾಲ ಹರಿಯಾಣ ಎಸ್‌ಟಿಎಫ್‌ಗೆ ವಶಕ್ಕೆ ನೀಡಿದೆ.
ಹ್ಯಾಂಡ್ ಗ್ರೆನೇಡ್ ಬಳಸಿ ಅಯೋಧ್ಯೆ ರಾಮ ದೇವಾಲಯದ ಮೇಲೆ ದಾಳಿ ಮಾಡುವ ಮೂಲಕ ಭಾರಿ ವಿನಾಶವನ್ನು ಸೃಷ್ಟಿಸುವುದು ಭಯೋತ್ಪಾದಕ ಅಬ್ದುಲ್ ರಹಮಾನ್ ಅವರ ಯೋಜನೆಯಾಗಿತ್ತು. ಪಿತೂರಿಯ ಭಾಗವಾಗಿ, ಅಬ್ದುಲ್ ಹಲವಾರು ಬಾರಿ ರಾಮ ದೇವಾಲಯದ ಬೇಹುಗಾರಿಕೆ ನಡೆಸಿದ್ದರು ಮತ್ತು ಎಲ್ಲಾ ಮಾಹಿತಿಯನ್ನು ಪಾಕಿಸ್ತಾನದ ಐಎಸ್‌ಐನೊಂದಿಗೆ ಹಂಚಿಕೊಂಡಿದ್ದ ಎಂದು ಹೇಳಲಾಗಿದೆ.