ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ವಿಧಾನಮಂಡಲದ ಜಂಟಿ ಅಧಿವೇಶನ ಭಾಷಣಕ್ಕಾಗಿ ವಿಧಾನಸೌಧದ ಮುಂದೆ ಸ್ವಾಗತ ಕೋರಿದ ಬಳಿಕ, ರಾಜ್ಯಪಾಲರು ಸದನಕ್ಕೆ ಬಂದರೂ, ಸಿದ್ಧರಾಮಯ್ಯ ಮಾತ್ರ ಆಗಮಿಸದೇ ಇರೋದಕ್ಕೆ ಕಾರಣವನ್ನು ಸಿಎಂ ಕಚೇರಿ ನೀಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಮುಖ್ಯಮಂತ್ರಿಗಳ ಕಚೇರಿಯು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಆಗಮಿಸಿದ್ದ ರಾಜ್ಯಪಾಲರು, ಮುಖ್ಯಮಂತ್ರಿಗಳಿಗಾಗಿ ಕಾದಿದ್ದರು ಎನ್ನುವ ತಪ್ಪು ಅಭಿಪ್ರಾಯ ವ್ಯಕ್ತವಾಗಿದೆ. ಸಿಎಂ ಬರಲು ತಡವಾದ ಕಾರಣ ರಾಜ್ಯಪಾಲರು ಸದನದಲ್ಲಿ ಕೆಲಹೊತ್ತು ಕಾದರು ಎಂಬ ತಪ್ಪು ವರದಿಯಾಗುತ್ತಿದೆ ಎಂದಿದೆ.
ಆದರೆ, ಮುಖ್ಯಮಂತ್ರಿಗಳು ರಾಜ್ಯಪಾಲರನ್ನು ಸ್ವಾಗತಿಸಿದ ಬಳಿಕ, ಕಾಲು ನೋವಿನ ಕಾರಣದಿಂದ ಮೆಟ್ಟಿಲು ಹತ್ತಿ ತಕ್ಷಣ ಬರಲಾಗದ ಕಾರಣ, ಸದನದ ಒಳಗೆ ಬರಲು ಕೆಲ ನಿಮಿಷ ತಡವಾಗಿದೆ ಅಷ್ಟೆ ಎಂಬುದಾಗಿ ಸ್ಪಷ್ಟ ಪಡಿಸಿದೆ.
BREAKING : ಪತ್ನಿಯ ಕಾಟಕ್ಕೆ ಮತ್ತೊಂದು ಬಲಿ : ಕಲಬುರ್ಗಿಯಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ ಶರಣು!