ಉತ್ತರಾಖಾಂಡ್: ಇಲ್ಲಿನ ಬದರಿನಾಥ್ ಬಳಿಯಲ್ಲಿ ಭಾರೀ ಹಿಮಪಾತ ಉಂಟಾಗಿ ಹಲವರು ಹಿಮದಡಿ ಸಿಲುಕಿರುವಂತ ಶಂಕೆ ವ್ಯಕ್ತವಾಗಿತ್ತು. ರಕ್ಷಣಾ ಕಾರ್ಯಾಚರಣೆ ನಡೆಸಿ, ಕೆಲವನ್ನು ರಕ್ಷಿಸಲಾಗಿತ್ತು. ಇಂದು ಹಿಮದಡಿ ಸಿಲುಕಿ ಮತ್ತೋರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿರುವುದಾಗಿ ಡಿಎಂ ಚಮೋಲಿ ಸಂದೀಪ್ ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಎಎನ್ಐ ಜೊತೆಗೆ ಮಾತನಾಡಿರುವಂತ ಅವರು, ಇಂದು ಸಂಜೆ 5: 30 ಕ್ಕೆ ಕಾರ್ಯಾಚರಣೆ ಪೂರ್ಣಗೊಂಡಿದೆ, ಮತ್ತು ಅಲ್ಲಿ ಸಿಕ್ಕಿಬಿದ್ದ 54 ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕಾರ್ಮಿಕರಲ್ಲಿ 46 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. 8 ಸಾವುನೋವುಗಳು ಸಂಭವಿಸಿವೆ. ಜಿಲ್ಲಾಡಳಿತವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಸಂಪೂರ್ಣ ಬೆಂಬಲವನ್ನು ಪಡೆಯಿತು. ಇದರಿಂದಾಗಿ ಈ ಕಾರ್ಯಾಚರಣೆ ಯಶಸ್ವಿಯಾಗಿದೆ … ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.
#WATCH | Mana (Chamoli) avalanche incident | In Joshimath, DM Chamoli Sandeep Tiwari says, "The operation was completed at 5:30 pm today, and out of the 54 Border Roads Organisation workers who were trapped there, 46 have been rescued safely, and there have been 8 casualties. The… pic.twitter.com/8RBNZQdqvC
— ANI (@ANI) March 2, 2025
‘ಸಾಗರ ಗ್ರಾಮಾಂತರ ಠಾಣೆ’ ಪೊಲೀಸರ ಮಿಂಚಿನ ಕಾರ್ಯಾಚರಣೆ: 24 ಗಂಟೆಯಲ್ಲೇ ‘ಸರಗಳ್ಳ ಅರೆಸ್ಟ್’
ರಾಜ್ಯದಲ್ಲಿ ಬಿಸಿಗಾಳಿ ಹಿನ್ನಲೆ: ಈ ಮುನ್ನೆಚ್ಚರಿಕೆ ಕ್ರಮ ವಹಿಸಲು ಆರೋಗ್ಯ ಇಲಾಖೆ ಸಲಹೆ