ಶಿವಮೊಗ್ಗ: ಓಂಟಿ ಮನೆಯೊಂದಕ್ಕೆ ರಾತ್ರಿ ಹೊತ್ತಲ್ಲಿ ನುಗ್ಗಿದ್ದಂತ ಕಳ್ಳನೊಬ್ಬ ವಯೋ ವೃದ್ಧೆಯ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದನು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು, ಕಳ್ಳತನವಾದ 24 ಗಂಟೆಯಲ್ಲೇ ಆರೋಪಿಯನ್ನು ಪತ್ತೆ ಹಚ್ಚಿ ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಸಾಗರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಮಹಾಬಲೇಶ್ವರ ಎಸ್ ಎನ್ ಅವರು, ದಿನಾಂಕ 28-02-2025ರಂದು ಕವಲಗೋಡುವಿನಲ್ಲಿದ್ದಂತ ಒಂಟಿ ಮನೆಗೆ ನುಗ್ಗಿದ್ದಂತ ಕಳ್ಳನೊಬ್ಬ ವೃದ್ಧೆಯೊಬ್ಬ ಧರಿಸಿದ್ದಂತ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದನು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.
ಈ ಪ್ರಕರಣ ಸಂಬಂಧ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರ ಸೂಚನೆಯ ಮೇರೆಗೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮಾರೆಡ್ಡಿ, ಕಾರಿಯಪ್ಪ ಎಜಿ ಅವರ ಮಾರ್ಗದರ್ಶನದಲ್ಲಿ, ಸಾಗರ ತಾಲ್ಲೂಕು ಡಿವೈಎಸ್ಪಿ ಗೋಪಾಲಕೃಷ್ಣ ತಿ ನಾಯಕ್ ಅವರ ನಿರ್ದೇಶದನದಂತೆ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಹೇಳಿದರು.
ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ಎಸ್ಎನ್, ಪಿಎಸ್ಐ ಸಿದ್ದರಾಮಪ್ಪ, ಸಿಬ್ಬಂದಿಗಳಾದಂತ ಸಿಹೆಚ್ ಸಿ ಷೇಖ್ ಫೈರೋಜ್ ಅಹಮ್ಮದ್, ಸಿಪಿಸಿ ರವಿಕುಮಾರ್, ಪಿಸಿ ನಂದೀಶ್, ಸಿಪಿಸಿ ಪ್ರವೀಣ್ ಕುಮಾರ್, ಪಿಸಿ ವಿಶ್ವನಾಥ. ಜೀಪ್ ಚಾಲಕ ಎಹೆಚ್ ಸಿ ಗಿರೀಶ್ ಬಾಬು ನೇೃತ್ವದ ವಿಶೇಷ ತಂಡವು ಸರಗಳ್ಳನನ್ನು ಪತ್ತೆಗೆ ಇಳಿಯಿತು ಎಂದರು.
ಆರೋಪಿ ಬಿಟ್ಟುಹೋಗಿದ್ದಂತ ಕೈಗಡಗದ ಸುಳಿವಿನ ಮೇರೆಗೆ ಪತ್ತೆ ಕಾರ್ಯಕ್ಕೆ ಇಳಿದಂತ ವಿಶೇಷ ತಂಡವು, ದಿನಾಂಕ 01-03-2025ರಂದು ಪ್ರಕರಣ ದಾಖಲಾದಂತ 24 ಗಂಟೆಯಲ್ಲೇ ಕೂಲಿ ಕೆಲಸ ಮಾಡುತ್ತಿದ್ದಂತ ಶೆಡ್ತಿಕೆರೆ ಗ್ರಾಮದ ರವಿ ಕುಮಾರ್.ಸಿ ಎಂಬಾತನನ್ನು ಬಂಧಿಸಿದೆ. ಬಂಧಿತ ಆರೋಪಿಯಿಂದ ಕಳವು ಮಾಡಿದ್ದಂತ 26 ಗ್ರಾಂ 400 ಮಿಲಿ ತೂಕದ ಸುಮಾರು 2,26,00 ಮೌಲ್ಯದ ಮಾಂಗಲ್ಯದ ಸರವನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ತಿಳಿಸಿದರು.
ಸಾಗರ ಗ್ರಾಮಾಂತರ ಠಾಣೆಯ ಪೊಲೀಸರ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಒಂಟಿ ಮನೆಯವರು ಮುಂದೆ ಹಾಗೂ ಹಿಂದಿನ ಭಾಗಿಲುಗಳನ್ನು ತಪ್ಪದೇ ಒಳಗೆ ಇದ್ದಾಗ ಹಾಕಿಕೊಳ್ಳಬೇಕು. ಆದಷ್ಟು ಒಂಟಿ ಮನೆಯವರು ಸಿಸಿಟಿವಿ ಅಳವಡಿಸಿಕೊಳ್ಳುವಂತ ಕೆಲಸ ಮಾಡಬೇಕು. ಆ ಮೂಲಕ ತಮ್ಮ ಪೋಷಕರ ಬಗ್ಗೆ ದೂರದಲ್ಲಿ ಎಲ್ಲೋ ಕೆಲಸ ಮಾಡುವಂತ ಮಕ್ಕಳು ಮೊಬೈಲ್ ನಲ್ಲೇ ಸಿಸಿಟಿವಿ ಕ್ಯಾಮರಾ ಅಕ್ಸೆಸ್ ಮಾಡುತ್ತಾ, ಗಮನ ವಹಿಸುವಂತ ಕೆಲಸ ಮಾಡಬೇಕು ಎಂದರು.
ಸಾಗರ ಗ್ರಾಮಾಂತರ ಠಾಣೆಯ ವ್ಯಾಪ್ತಿಯ ಓಂಟಿ ಮನೆಯ ಸಾರ್ವಜನಿಕರು, ಮನೆಯ ಬಳಿಯಲ್ಲಿ ಅಪರಿಚಿತರ ಬಗ್ಗೆ ಅನುಮಾನ ಬಂದರೇ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಊರಿಗೆ ಹೋಗುವ ಮೊದಲು ಆಯಾ ಠಾಣೆಯ ವ್ಯಾಪ್ತಿಯ ಪೊಲೀಸರಿಗೆ ಮಾಹಿತಿ ನೀಡಿ ತೆರಳುವಂತೆ ಸಲಹೆ ಮಾಡಿದರು.
ವರದಿ: ವಸಂತ ಬಿ ಈಶ್ವರಗೆರೆ
ಡಿಕೆ ಶಿವಕುಮಾರ್ ನಟ್ಟು ಬೋಲ್ಟ್ ವಿಚಾರ; ಆ ಕೆಲಸ ಮಾಡಲು ಬೇರೆ ಜನ ಇದ್ದಾರೆ ಎಂದು ಕುಟುಕಿದ HDK
ರಾಜ್ಯದಲ್ಲಿ ಬಿಸಿಗಾಳಿ ಹಿನ್ನಲೆ: ಈ ಮುನ್ನೆಚ್ಚರಿಕೆ ಕ್ರಮ ವಹಿಸಲು ಆರೋಗ್ಯ ಇಲಾಖೆ ಸಲಹೆ