ಬೆಂಗಳೂರು: ನಾನು ರಕ್ತದಲ್ಲಿ ಬೇಕಾದ್ರೂ ಬರೆದುಕೊಡ್ತೀನಿ. ಡಿಸೆಂಬರ್ ಅಂತ್ಯದೊಳಗೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗೋದು ಗ್ಯಾರಂಟಿ ಎಂಬುದಾಗಿ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಡಿ.ಕೆ ಶಿವಕುಮಾರ್ ಡಿಸೆಂಬರ್ ಅಂತ್ಯಗೊಳಗೆ ಮುಖ್ಯಮಂತ್ರಿಯಾಗುತ್ತಾರೆ. ಅಲ್ಲದೇ ಮುಂದಿನ 5 ವರ್ಷಗಳ ಕಾಲ ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿರಲಿದ್ದೆ ಎಂಬುದಾಗಿ ಹೇಳಿದರು.
ನಮಗೆ ಬೇರೆ ಪಕ್ಷದ ಶಾಸಕರ ಅಗತ್ಯವಿಲ್ಲ. ಏಕೆಂದರೇ ನಮ್ಮ ಪಕ್ಷದಲ್ಲೇ ಬೇಕಾದಷ್ಟು ಶಾಸಕರಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೊದಲು ಸಚಿವ ಕೆ.ಎನ್ ರಾಜಣ್ಣ ಅವರ ಬಾಯಿ ಮುಚ್ಚಿಸಬೇಕು ಎಂಬುದಾಗಿ ಆಗ್ರಹಿಸಿದರು.
ಕಾಂಗ್ರೆಸ್ ಹೈಕಮಾಂಡ್ ಗೆ ರಾಜ್ಯದ ರಾಜಕೀಯ ವಿದ್ಯಮಾನಗಳ ಸಂಪೂರ್ಣ ಮಾಹಿತಿ ಗೊತ್ತಿದೆ. ಡಿಕೆ ಶಿವಕುಮಾರ್ ಕಾರ್ಯ ವೈಖರಿ ಹೇಗೆ ಎಂಬುದಾಗಿಯೂ ತಿಳಿದಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಹಣವನ್ನು ವ್ಯಹಿಸಿದ್ದಾರೆ. ಡಿಸೆಂಬರ್ ಅಂತ್ಯದೊಳಗೆ ಡಿ.ಕೆ ಶಿವಕುಮಾರ್ 140 ಶಾಸಕರ ಬೆಂಬಲದೊಂದಿಗೆ ಸಿಎಂ ಆಗ್ತಾರೆ ಎಂಬುದಾಗಿ ಭವಿಷ್ಯ ನುಡಿದರು.
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಫೈರ್ ಫ್ಲೈ ಏರೋಸ್ಪೇಸ್ ನ ಬ್ಲೂ ಘೋಸ್ಟ್ ಪ್ರೋಬ್ | Blue Ghost probe
BREAKING : ಬಿಜೆಪಿಗಿಂತಲೂ ಕಾಂಗ್ರೆಸ್ ನಲ್ಲಿ ಹೆಚ್ಚು ಕಮಿಷನ್ : ಗುತ್ತಿಗೆದಾರರ ಸಂಘ ಗಂಭೀರ ಆರೋಪ!