ಬೆಂಗಳೂರು: ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಟ್ರೇಡ್ ಲೈಸೆನ್ಸ್ ನೀಡುವುದಕ್ಕಾಗಿ 40,000 ಲಂಚಕ್ಕೆ ಬೇಡಿಕೆ ಇಟ್ಟು, ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿಯೇ ಆರೋಗ್ಯ ಮೇಲ್ವಿಚಾರಕಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರಿನ ಇಂದಿರಾನಗರದ ಎಂ.ಕೆ ಸುಬ್ರಹ್ಮಣ್ಯ ಮತ್ತು ಕೃಷ್ಣಪ್ಪ ಗೌಡ ಎಂಬುವರಿಗೆ ರಾಕ್ಸ್ ಟ್ರೇಡ್ ಲೈಸೆನ್ಸ್ ನೀಡುವುದಕ್ಕೆ ದೊಮ್ಮಲೂರು ಉಪ ವಿಭಾಗದ ಆರೋಗ್ಯ ಮೇಲ್ವಿಚಾರಕಿ ನಿರ್ಮಲಾ ಎಂಬುವರು 40,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು.
ಇಂದು 40,000 ಲಂಚ ಸ್ವೀಕರಿಸುತ್ತಿದ್ದಂತ ಸಂದರ್ಭದಲ್ಲಿಯೇ ದೊಮ್ಮಲೂರು ಉಪ ವಿಭಾಗ ಆರೋಗ್ಯ ಮೇಲ್ವಿಚಾರಕಿ ನಿರ್ಮಲಾ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅಂದಹಾಗೇ ಬೆಂಗಳೂರು ನಗರ ಪೊಲೀಸ್ ಠಾಣೆಯ ಎಸ್ಪಿ ಕೆ.ವಂಶಿಕೃಷ್ಣ ಸೂಚನೆಯ ಹಿನ್ನಲೆಯಲ್ಲಿ, ವಿಜಯ ಕೃಷ್ಣ, ಎನ್, ಪಿಐ -11 ಗೆ ಅಶೋಕ್ ಕುಮಾರ್, ಪಿಐ 15 ಮತ್ತು ಸಿಬ್ಬಂದಿಗಳು ದಾಳಿ ಮಾಡಿದ್ದಾರೆ. ಉಮಾದೇವಿ, ಡಿವೈಎಸ್ಪಿ-07, ಬಿಎಲ್ಆರ್ ಸಿಟಿ-2 ಮೇಲ್ವಿಚಾರಣೆಯಲ್ಲಿ ಭಾಗವಹಿಸಿದ್ದರು.
BREAKING: ವೀರಶೈವ, ಲಿಂಗಾಯತರ ನೈಜ ಸಂಖ್ಯೆ ತಿಳಿಯಲು ‘ಖಾಸಗಿ ಜಾತಿ ಜನಗಣತಿ’: ಸಚಿವ ಈಶ್ವರ್ ಖಂಡ್ರೆ ಘೋಷಣೆ