ಬೆಂಗಳೂರು: ಬೆಳಗಾವಿಯಲ್ಲಿನ ಮರಾಠಿಗರ ಪುಂಡಾಟ ಖಂಡಿಸಿ ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದಾವೆ. ಇದೇ ಸಂದರ್ಭದಲ್ಲಿ ನಿಗದಿಯಾಗಿರುವಂತ 7, 8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲ್ಲ ಅಂತ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾರ್ಚ್.22ರಂದು 7, 8 ಹಾಗೂ 9ನೇ ತರಗತಿ ಪರೀಕ್ಷೆ ನಿಗದಿಯಾಗಿವೆ. ಅದೇ ದಿನ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದಾವೆ. ಆದರೂ ಯಾವುದೇ ಪರೀಕ್ಷೆ ಮುಂದೂಡಿಕೆ ಮಾಡೋದಿಲ್ಲ. ಪರೀಕ್ಷೆಯ ಪಾಡಿಗೆ ನಡೆಯಲಿದೆ. ಮಕ್ಕಳ ಪರೀಕ್ಷೆಗೆ ತೊಂದರೆಯಾಗದಂತೆ ಬಂದ್ ಮಾಡೋರು ಸಹಕಾರ ನೀಡುವಂತೆ ಕೋರಿದರು.
ಕರ್ನಾಟಕ ಬಂದ್ ಗೆ ಕರೆ ನೀಡಿರೋರು ಮಕ್ಕಳನ್ನು ಪರೀಕ್ಷೆಗೆ ಹೋಗಬೇಡಿ ಅಂತ ಯಾರೂ ಹೇಳಿಲ್ಲ. ಯಾವುದೇ ಮಕ್ಕಳು ಗೊಂದಲಕ್ಕೆ ಒಳಗಾಗ ಬಾರದು. ನಿಗದಿಯಂತೆ 7, 8, 9ನೇ ತರಗತಿ ಪರೀಕ್ಷೆಗಳು ನಡೆಯಲಿದ್ದಾವೆ. ಮುಂದೂಡಿಕೆ ಮಾಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು.
ಟ್ರಂಪ್ ಜೊತೆ ಮಾತಿನ ಚಕಮಕಿ:’ಜೆಲೆನ್ಸ್ಕಿ’ಗೆ ಯುರೋಪಿಯನ್ ಮಿತ್ರರಾಷ್ಟ್ರಗಳು, ಕೆನಡಾ ಬೆಂಬಲ | Trump-Zelensky