ಶಿವಮೊಗ್ಗ: ಸಾಗರದ ನಗರದ ಬಿಹೆಚ್ ರಸ್ತೆಯ ಹೈವೇ ಅಗಲೀಕರಣ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬುದಾಗಿ ಹಿರಿಯ ಪತ್ರಕರ್ತ ಮಹೇಶ್ ಹೆಗಡೆ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಈ ವರದಿಯ ಫಲಶೃತಿ ಎನ್ನುವಂತೆ ನಾಳೆ ಹೈವೇ ಮುಖ್ಯ ಇಂಜಿನಿಯರ್ ಅವರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಮುಖ ರಸ್ತೆಯಾಗಿರುವಂತ ಬಿಹೆಚ್ ರಸ್ತೆಯಲ್ಲಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯು ಕಳಪೆಯಾಗಿದ್ದು, ಕಾಮಗಾರಿ ನಡೆಸುವ ಹಾಗೂ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಕೂಡಲೇ ಗಮನಸಿಬೇಕು ಅಂತ ಸಾರ್ವಜನಿಕರು ಆಗ್ರಹಿಸಿದ್ದರು. ಇದಷ್ಟೇ ಅಲ್ಲದೇ ಕಾಮಗಾರಿ ನಡೆಯುತ್ತಿದ್ದಂತ ಸ್ಥಳಕ್ಕೆ ಆಗಮಿಸಿ, ಹೈವೇ ರಸ್ತೆ ಅಗಲೀಕರಣ ಕಾಮಗಾರಿಯನ್ನು ವೀಕ್ಷಣೆಗೆ ಒತ್ತಾಯಿಸಲಾಗಿತ್ತು.
ಈ ಹಿನ್ನಲೆಯಲ್ಲಿ ನಾಳೆ ಹೈವೇ ಮುಖ್ಯ ಇಂಜಿನಿಯರ್ ಗೋಪಿನಾಥ್ ಎಂಬುವರು ಬೆಂಗಳೂರಿನಿಂದ ಸಾಗರಕ್ಕೆ ಆಗಮಿಸುತ್ತಿದ್ದಾರೆ. ಸಾಗರದ ಬಿಹೆಚ್ ರಸ್ತೆಯಲ್ಲಿ ನಡೆಯುತ್ತಿರುವಂತ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪರಿಶೀಲನೆ ಮಾಡಲಿದ್ದಾರೆ.
ನಾಳೆ ಬೆಳಿಗ್ಗೆ 9 ಗಂಟೆಗೆ ಶಿವವಮೊಗ್ಗ ರಸ್ತೆಯಿಂದ ಪರಿಶೀಲನೆಯನ್ನು ಹೈವೇ ಮುಖ್ಯ ಇಂಜಿನಿಯರ್ ಗೋಪಿನಾಥ್ ನಡೆಸಲಿದ್ದು, ಸಾಗರದ ಸಾರ್ವಜನಿಕರು ಈ ಕಳಪೆ ಕಾಮಗಾರಿಯ ಬಗ್ಗೆ ದೂರು ಕೂಡ ನೀಡಬಹುದಾಗಿದೆ.
ರಾಜ್ಯಗಳಿಗೆ ನೀಡುವ ತೆರಿಗೆ ಪಾಲು ಇಳಿಕೆ: ಕೇಂದ್ರದ ವಿರುದ್ಧ ಹೋರಾಟ ಸಿದ್ಧವೆಂದ ಸಿಎಂ ಸಿದ್ದರಾಮಯ್ಯ
ನಾಳೆ ಸಾಗರ ತಾಲ್ಲೂಕು ಮಟ್ಟದ ’12ನೇ ಕನ್ನಡ ಸಾಹಿತ್ಯ ಸಮ್ಮೇಳನ’: ‘ಗಾಂಧಿ ಮೈದಾನ’ದಲ್ಲಿ ‘ಕನ್ನಡ ಡಿಂಡಿಮ’