ಬೆಂಗಳೂರು: ದೇಶಾದ್ಯಂತ ಮಲ ಹೋರುವ ಪದ್ದತಿಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ಇದನ್ನು ಮೀರಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು ಪ್ರೋತ್ಸಾಹಿಸಿದ್ದಲ್ಲಿ ನಿಮಗೆ 2-7 ವರ್ಷ ಜೈಲು ಶಿಕ್ಷೆ ಅಥವಾ 2-5 ಲಕ್ಷ ದಂಡ ವಿಧಿಸಬಹುದು.
ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅಂದರೆ ಮಲ ಹೋರುವ ಪದ್ದತಿ ಶಿಕ್ಷಾರ್ಹ ಅಪರಾಧವಾಗಿದೆ. ಶೌಚಾಲಯ ಗುಂಡಿಯ ಮಲ ತ್ಯಾಜ್ಯವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್ ವಾಹನವನ್ನು ಬಳಸಬೇಕು ಅಂತ ತಿಳಿಸಿದೆ.
ಇನ್ನೂ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು ನೀವು ಪ್ರೋತ್ಸಾಹಿಸಿ, ಮಲ ಹೋರಿಸಿದ್ದೇ ಆದಲ್ಲಿ ನಿಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ 2 ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇದಲ್ಲದೇ 2 ರಿಂದ 5 ಲಕ್ಷ ದಂಡವನ್ನು ಹಾಕಬಹುದು. ಜೊತೆಗೆ ಶಿಕ್ಷೆ ಅಥವಾ ದಂಡ ಎರಡನ್ನು ನ್ಯಾಯಾಲಯ ವಿಧಿಸಬಹುದಾಗಿದೆ ಎಂಬುದಾಗಿ ಎಚ್ಚರಿಸಿದೆ.
ಒಟ್ಟಾರೆಯಾಗಿ ಮ್ಯಾನುಯಲ್ ಸ್ಕ್ಯಾವೆಂಜರ್ ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳ ಪ್ರಕಾರ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಶಿಕ್ಷಾರ್ಹ ಅಪರಾಧ. ಶೌಚಾಲಯ ಗುಂಡಿಯ ಮಲತ್ಯಾಜ್ಯವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್ ವಾಹನವನ್ನು ಬಳಸಿರಿ ಅಂತ ಮನವಿ ಮಾಡಿದೆ.
ಮ್ಯಾನುಯಲ್ ಸ್ಕ್ಯಾವೆಂಜರ್ ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಕಾಯ್ದೆ ಹಾಗೂ ನಿಯಮಗಳ ಪ್ರಕಾರ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಶಿಕ್ಷಾರ್ಹ ಅಪರಾಧ.
ಶೌಚಾಲಯ ಗುಂಡಿಯ ಮಲತ್ಯಾಜ್ಯವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್ ವಾಹನವನ್ನು ಬಳಸಿರಿ!#FecalSludgeManagement #RDWSD pic.twitter.com/CDklPee6Dz
— Rural Drinking Water & Sanitation Department, GoK (@rdwsd_gok) February 28, 2025
ಬೆಂಗಳೂರು ಜನತೆ ಗಮನಕ್ಕೆ: ಮಾ.2ರ ಭಾನುವಾರದಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BIG UPDATE: ಉತ್ತರಾಖಂಡ ಹಿಮಪಾತ: 16 ಕಾರ್ಮಿಕರ ರಕ್ಷಣೆ, 41 ಮಂದಿ ಸಿಲುಕಿದ್ದಾರೆ- ಸಿಎಂ ಧಾಮಿ ಮಾಹಿತಿ