ಮುಂಬೈ : ಮಹಾರಾಷ್ಟ್ರದ ಅಕ್ಷಿ ಅಲಿಬಾಗ್‌ನ ರಾಯಗಢ ಜಿಲ್ಲೆಯ ಕರಾವಳಿಯಿಂದ 6-7 ನಾಟಿಕಲ್ ಮೈಲು ದೂರದಲ್ಲಿ ರಾಕೇಶ್ ಗ್ಯಾನ್ ಎಂಬವರ ಮೀನುಗಾರಿಕಾ ದೋಣಿಗೆ ಬೆಳಗಿನ ಜಾವ 3-4 ಗಂಟೆ ಸುಮಾರಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ.
ಸಮುದ್ರದ ಮಧ್ಯೆಯೇ ಮೀನುಗಾರಿಕೆ ಬೋಟ್ ಹೊತ್ತಿ ಉರಿದ ಪರಿಣಾಮ ಬೋಟ್ ನಲ್ಲಿದ್ದ 18 ಸಿಬ್ಬಂದಿಗಳು ಸಮುದ್ರಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಭಾರತೀಯ ನೌಕಾಪಡೆ ದೋಣಿಯಿಂದ ಎಲ್ಲಾ 18 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿವೆ ಎಂದು ರಾಯಗಢ ಎಸ್‌ಪಿ ತಿಳಿಸಿದ್ದಾರೆ.
#WATCH | Maharashtra: The fishing boat of one Rakesh Gan caught fire 6-7 nautical miles from the coast in Raigad district in In Akshi Alibaug, around 3-4 am. Indian Coast Guard and Indian Navy rescued all 18 crew members from the boat safely: Raigad SP
(Video: Raigad Police) pic.twitter.com/6f4MFm0aQn
— ANI (@ANI) February 28, 2025