ಕುರೇಕುಪ್ಪ ಪುರಸಭೆ ವತಿಯಿಂದ 2019-2020 ಮತ್ತು 2022-23 ನೇ ಸಾಲಿನ ಎಸ್ಎಫ್ಸಿ ಮುಕ್ತನಿಧಿ ಯೋಜನೆಯಡಿ ಪುರಸಭೆ ವ್ಯಾಪ್ತಿಯ ಬರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ ಕಾಯ್ದಿರಿಸಿದ ಶೇ.24.10 ಮತ್ತು ಶೇ.5 ರಲ್ಲಿ ವೈಯಕ್ತಿಕ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಕುರೆಕುಪ್ಪ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಸೌಲಭ್ಯದ ವಿವರ
ಪುರಸಭೆ ಕುರೇಕುಪ್ಪ ವ್ಯಾಪ್ತಿಯಲ್ಲಿ ಬರುವ ಪ.ಜಾತಿ ಮತ್ತು ಪ.ಪಂಗಡ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ಪಡೆಯಲು ಸೌಲಭ್ಯ.ಪುರಸಭೆ ಕುರೇಕುಪ್ಪ ವ್ಯಾಪ್ತಿಯಲ್ಲಿ ಬರುವ ಪ.ಜಾತಿ ಮತ್ತು ಪ.ಪಂಗಡ ಅರ್ಹ ಮಹಿಳಾ ಮತ್ತು ಪುರುಷ ಫಲಾನುಭವಿಗಳಿಗೆ ಲಘು ವಾಹನ ಹಾಗೂ ಭಾರಿ ವಾಹನ ತರಭೇತಿ ಮತ್ತು ಪರವಾನಿಗೆ ನೀಡುವುದು.
ಪುರಸಭೆ ಕುರೇಕುಪ್ಪ ವ್ಯಾಪ್ತಿಯಲ್ಲಿ ಬರುವ ಪ.ಪಂಗಡ ಹಾಗೂ ವಿಶೇಷ ಚೇತನ ಫಲಾನುಭವಿಗಳಿಗೆ ಕೃತಕ ಅಂಗ ಜೋಡಣೆಗಾಗಿ ಸಹಾಯ ಧನ ನೀಡುವುದು. ಹಾಗೂ ಸಾಧಕ ಸಕಲಕೆಗಳನ್ನು ಪಡೆಯಲು ಸಹಾಯ ಧನ. (ಎಂ.ಆರ್.ಕಿಟ್, ಊರುಗೋಲು, ಇಯರಿಂಗ್ ಹೆಡ್ಸ್, ವಿಲ್ ಛರ್ಸ್ ಇತ್ಯಾದಿ.)ಕುರೇಕುಪ್ಪ ಪುರಸಭೆ ವ್ಯಾಪ್ತಿಯ ವಿಶೇಷ ಚೇತನರಿಗೆ ಯಂತ್ರಚಾಲಿತ ಶ್ರೀಚಕ್ರ ವಾಹನ ಸೌಲಭ್ಯ.
ಆಸಕ್ತ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಮಾ.14 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಮಾ.13 ರವರೆಗೆ ಪುರಸಭೆ ಕಚೇರಿಯಲ್ಲಿ ಪಡೆಯಬಹುದು.ತಡವಾಗಿ ಬಂದ ಅಪೂರ್ಣ ದಾಖಲಾತಿ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಹಾಗೂ ಹಿಂಬರಹ ನೀಡದೇ ತಿರಸ್ಕರಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಕುರೆಕುಪ್ಪ ಪುರಸಭೆ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.