ಮದ್ದೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಡೆಯುತ್ತಿರುವ ಮಹಾ ಕುಂಭ ಮೇಳ ಮುಗಿಸಿ ಮದ್ದೂರಿಗೆ ವಾಪಾಸ್ ಬರುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿರುವ ಘಟನೆ ಬುಧವಾರ ಮುಂಜಾನೆ ಅಯೋಧ್ಯೆ ಬಳಿ ನಡೆದಿದೆ.
ಪಟ್ಟಣದ ರಾಮಾಣಿ ಶಾಮೀಲ್ ಮಾಲೀಕರಾದ ಜಯಂತಿ ಲಾಲ್ ಪಾಟೇಲ್ ಅವರ ಪತ್ನಿ ಮಂಜುಳಾ ಬೇನ್ (59) ಮೃತ ಮಹಿಳೆ.
ಬಸ್ ನಲ್ಲಿ ಹೋಗಿ ಮಹಾ ಕುಂಭ ಮೇಳ ಮುಗಿಸಿ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ, ವಾಪಾಸ್ ಬರುವ ಸಂದರ್ಭದಲ್ಲಿ ಅಯೋಧ್ಯೆ ಬಳಿ ಬಸ್ಸು ನಿಲ್ಲಿಸಿದೆ. ಈ ವೇಳೆ ಮಂಜುಳಾ ಬೇನ್ ಅವರು ಶೌಚಗೃಹಕ್ಕೆ ಹೋಗಲು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅಯೋಧ್ಯೆ ಬಳಿ ಅಪರಿಚಿತ ವಾಹನ ಡಿಕ್ಕಿಹೊಡೆದು ಈ ಘಟನೆ ನಡೆದಿದೆ.
ಪಟ್ಟಣದ ಕೊಲ್ಲಿ ವೃತ್ತದ ಬಳಿಯಿರುವ ಅವರ ನಿವಾಸದಲ್ಲಿ ಕೆಲಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕಿಟ್ಟು ನಂತರ ಮೃತರ ಅಂತ್ಯಕ್ರಿಯೆ ಪಟ್ಟಣದ ಮರ್ವಾಡಿಗಳ ರುದ್ರಭೂಮಿ ಗುರುವಾರ ಬೆಳಗ್ಗೆ 9.30ಕ್ಕೆ ನಡೆಯಲಿದೆ.
ಬೆಂಗಳೂರಿನ AI ಕಂಪನಿಯಿಂಜ 40 ಲಕ್ಷ ಸಂಬಳ ಪ್ಯಾಕೇಜ್ ಘೋಷಣೆ: ರೆಸ್ಯೂಮ್ ಅಗತ್ಯವಿಲ್ಲ
BIG NEWS : ಫೆ.28ರಿಂದ 3 ದಿನ `ಹಂಪಿ ಉತ್ಸವ’ : CM ಸಿದ್ದರಾಮಯ್ಯ ಚಾಲನೆ.!