ಬೆಂಗಳೂರು : ಬೆಂಗಳೂರಿನಲ್ಲಿ ಹಾಲಿನ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬೈಕ್ ನಲ್ಲಿ ಬಂದು ಮುಂಜಾನೆ ಹಾಲು ಕಳ್ಳತನ ಮಾಡಿ ಖದೀಮರು ಪರಾರಿಯಾಗಿರುವ ಘಟನೆ ನಡೆದಿದೆ.
ಹೌದು, ಬೆಂಗಳೂರಿನ ರಸ್ತೆಯೊಂದರಲ್ಲಿ ಅಂಗಡಿ ಮುಂದೆ ಹಾಲಿನ ಪ್ಯಾಕೆಟ್ ಕದ್ದು ಕಳ್ಳರು ಪಾರಾರಿಯಾಗಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಹಾಲು ಕಳ್ಳರ ಹಾವಳಿ ಹೆಚ್ಚಾಗಿದ್ದು, ಹಾಲಿನ ಪ್ಯಾಕೇಟ್ ಗಳನ್ನು ಖದೀಮರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಮುಂಜಾನೆ 4 ಗಂಟೆ ಸುಮಾರಿಗೆ ಹಾಲು ಅನ್ ಲೋಡ್ ಆದ ಬಳಿಕ ಬೈಕ್ ನಲ್ಲಿ ಬರುವ ಖದೀಮರು ಹಾಲಿನ ಪ್ಯಾಕೆಟ್ ಗಳನ್ನು ಕದ್ದು ಪರಾರಿಯಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೀದಿಯಲ್ಲಿ ಇಟ್ಟಿದ್ದ ಟ್ರೇಗಳಿಂದ ಹಾಲಿನ ಪ್ಯಾಕೆಟ್ ಗಳನ್ನು ಕದ್ದು ಯುವಕರು ಪರಾರಿಯಾಗಿದ್ದಾರೆ. ಒಂದೇ ಸ್ಕೂಟರ್ ನಲ್ಲಿ ಹೆಲ್ಮೆಟ್ ಇಲ್ಲದೇ ಬಂದ ಯುವಕರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಾರೆ. ಸದ್ಯ ಹಾಲು ಕಳ್ಳತನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
In Karnataka, Four Boys Came on a Scooter and Stole Milk-Bags kept outside a Shop. pic.twitter.com/LT91AKAD8h
— Ghar Ke Kalesh (@gharkekalesh) February 25, 2025