ಬೆಂಗಳೂರು: ರೈಲ್ವೆ ಪ್ರಯಾಣಿಕರಿಗೆ ಬಹುಮುಖ್ಯ ಮಾಹಿತಿ ಎನ್ನುವಂತೆ ಕೆಲ ರೈಲುಗಳ ಸಂಚಾರ ರದ್ದತಿ ವಿಸ್ತರಣೆ ಮಾಡಲಾಗಿದೆ. ಇನ್ನೂ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ರೈಲು ಸೇವೆಗಳ ರದ್ದತಿ ವಿಸ್ತರಣೆ
- ವಿವಿಧ ಕಾರ್ಯಾಚರಣೆಯ ಕಾರಣಗಳಿಂದಾಗಿ, ಈಗಾಗಲೇ ತಾತ್ಕಾಲಿಕವಾಗಿ ರದ್ದುಗೊಂಡಿರುವ ಕೆಲವು ರೈಲು ಸೇವೆಗಳ ರದ್ದತಿಯನ್ನು ದಕ್ಷಿಣ ಮಧ್ಯ ರೈಲ್ವೆಯು ವಿಸ್ತರಿಸಿದೆ. ವಿವರಗಳು ಈ ಕೆಳಗಿನಂತಿವೆ.
- ರೈಲು ಸಂಖ್ಯೆ 57405 ತಿರುಪತಿ-ಕದಿರಿದೇವರಪಲ್ಲಿ ಡೈಲಿ ಪ್ಯಾಸೆಂಜರ್ ರೈಲು ಮಾರ್ಚ್ 7, 2025 ರವರೆಗೆ ಮತ್ತೆ ತಾತ್ಕಾಲಿಕವಾಗಿ ರದ್ದುಗೊಳ್ಳಲಿದೆ. ಈ ರೈಲನ್ನು ಮೊದಲು ಫೆಬ್ರವರಿ 28, 2025 ರವರೆಗೆ ರದ್ದುಪಡಿಸಲಾಗಿದೆ ಎಂದು ಸೂಚಿಸಲಾಗಿತ್ತು.
- ರೈಲು ಸಂಖ್ಯೆ 57406 ಕದಿರಿದೆವರಪಲ್ಲಿ-ತಿರುಪತಿ ಡೈಲಿ ಪ್ಯಾಸೆಂಜರ್ ರೈಲು ಮಾರ್ಚ್ 8, 2025 ರವರೆಗೆ ರದ್ದುಗೊಳ್ಳಲಿದೆ. ಈ ರೈಲು ಮೊದಲು ಮಾರ್ಚ್ 1, 2025 ರವರೆಗೆ ರದ್ದುಪಡಿಸಲಾಗಿದೆ ಎಂದು ಸೂಚಿಸಲಾಗಿತ್ತು.
- ರೈಲು ಸಂಖ್ಯೆ 57401 ತಿರುಪತಿ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ರೈಲು ಮಾರ್ಚ್ 7, 2025 ರವರೆಗೆ ರದ್ದಾಗಿರುತ್ತದೆ. ಈ ರೈಲು ಮೊದಲು ಫೆಬ್ರವರಿ 28, 2025 ರವರೆಗೆ ರದ್ದುಪಡಿಸಲಾಗಿದೆ ಎಂದು ಸೂಚಿಸಲಾಗಿತ್ತು.
- ರೈಲು ಸಂಖ್ಯೆ 57402 ಎಸ್ಎಸ್ಎಸ್ ಹುಬ್ಬಳ್ಳಿ-ತಿರುಪತಿ ಡೈಲಿ ಪ್ಯಾಸೆಂಜರ್ ರೈಲು ಮಾರ್ಚ್ 8, 2025 ರವರೆಗೆ ರದ್ದಾಗಿರುತ್ತದೆ. ಈ ರೈಲು ಈ ಮೊದಲು ಮಾರ್ಚ್ 1, 2025 ರವರೆಗೆ ರದ್ದುಪಡಿಸಲಾಗಿದೆ ಎಂದು ಸೂಚಿಸಲಾಗಿತ್ತು.
ಮಿರಜ್-ಕ್ಯಾಸಲ್ ರಾಕ್ ರೈಲುಗಳ ಭಾಗಶಃ ರದ್ದತಿ ವಿಸ್ತರಣೆ
- ಹುಬ್ಬಳ್ಳಿ ರೈಲ್ವೆ ವಿಭಾಗದ ಕ್ಯಾಸಲ್ ರಾಕ್-ಲೋಂಡಾ ಭಾಗದಲ್ಲಿ ನಡೆಯುತ್ತಿರುವ ರೈಲ್ವೆ ವಿದ್ಯುದೀಕರಣ ಮತ್ತು ಎಂಜಿನಿಯರಿಂಗ್ ಕಾಮಗಾರಿಗಳಿಂದಾಗಿ, ಈ ಕೆಳಗಿನ ರೈಲು ಸೇವೆಗಳ ಭಾಗಶಃ ರದ್ದತಿಯನ್ನು ವಿಸ್ತರಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ:
- ರೈಲು ಸಂಖ್ಯೆ 17333 ಮಿರಜ್-ಕ್ಯಾಸಲ್ ರಾಕ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಮಾರ್ಚ್ 31, 2025 ರವರೆಗೆ ಲೋಂಡಾ-ಕ್ಯಾಸಲ್ ರಾಕ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುತ್ತದೆ. ಈ ರೈಲು ಲೋಂಡಾ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.
- ರೈಲು ಸಂಖ್ಯೆ 17334 ಕ್ಯಾಸಲ್ ರಾಕ್-ಮಿರಜ್ ಡೈಲಿ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲು ಮಾರ್ಚ್ 31, 2025 ರವರೆಗೆ ಕ್ಯಾಸಲ್ ರಾಕ್-ಲೋಂಡಾ ನಡುವೆ ಭಾಗಶಃ ರದ್ದಾಗಿರುತ್ತದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಲೋಂಡಾ ನಿಲ್ದಾಣದಿಂದ ಹೊರಡಲಿದೆ.
ಮೊದಲು, ಈ ರೈಲುಗಳನ್ನು ಫೆಬ್ರವರಿ 28, 2025 ರವರೆಗೆ ಭಾಗಶಃ ರದ್ದತಿಗಾಗಿ ಸೂಚಿಸಲಾಗಿತ್ತು, ಅದನ್ನು ಈಗ ಮಾರ್ಚ್ 31, 2025 ರವರೆಗೆ ವಿಸ್ತರಿಸಲಾಗಿದೆ.
III. 11 ದಿನಗಳ ಕಾಲ ಬೆಳಗಾವಿ-ಮಿರಜ್ ಕಾಯ್ದಿರಿಸದ ವಿಶೇಷ ರೈಲು ಭಾಗಶಃ ರದ್ದು
ಕುಡಚಿ-ಉಗಾರ ಖುರ್ದ್ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ನಿಮಿತ್ತ, ಈ ಕೆಳಗಿನ ರೈಲುಗಳನ್ನು 11 ದಿನಗಳ ಕಾಲ ಕುಡಚಿ-ಮಿರಜ್ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ:
- ರೈಲು ಸಂಖ್ಯೆ 07303 ಬೆಳಗಾವಿ-ಮಿರಜ್ ಡೈಲಿ ಕಾಯ್ದಿರಿಸದ ವಿಶೇಷ ರೈಲು, ಫೆಬ್ರವರಿ 27 ರಿಂದ ಮಾರ್ಚ್ 9, 2025 ರವರೆಗೆ, ಕುಡಚಿ-ಮಿರಜ್ ನಡುವೆ ಭಾಗಶಃ ರದ್ದಾಗಿರುತ್ತದೆ ಮತ್ತು ಈ ರೈಲು ಕುಡಚಿಯಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
- ರೈಲು ಸಂಖ್ಯೆ 07304 ಮಿರಜ್-ಬೆಳಗಾವಿ ಡೈಲಿ ಕಾಯ್ದಿರಿಸದ ವಿಶೇಷ ರೈಲು, ಫೆಬ್ರವರಿ 27 ರಿಂದ ಮಾರ್ಚ್ 9, 2025 ರವರೆಗೆ ಮಿರಜ್-ಕುಡಚಿ ನಡುವೆ ಭಾಗಶಃ ರದ್ದಾಗಿರುತ್ತದೆ ಮತ್ತು ಈ ರೈಲು ಮಿರಜ್ ಬದಲಿಗೆ ಕುಡಚಿಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ ಎಂಬುದಾಗಿ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
BREAKING: ಕ್ರಿಪ್ಟೋಕರೆನ್ಸಿ ಹಗರಣ: ಕರ್ನಾಟಕ ಸೇರಿ ಹಲವು ರಾಜ್ಯಗಳ 60 ಸ್ಥಳಗಳಲ್ಲಿ ‘CBI ಶೋಧ’
BREAKING : ಬಾಲಿವುಡ್ ನಟ ‘ಗೋವಿಂದ’ 37 ವರ್ಷಗಳ ದಾಂಪತ್ಯದಲ್ಲಿ ಬಿರುಕು ; ವಿಚ್ಛೇದನಕ್ಕೆ ಮುಂದಾದ ದಂಪತಿ