ಬೆಂಗಳೂರು : ನಾವೀನ್ಯತೆಯನ್ನು ಪೋಷಿಸುವಲ್ಲಿ, ಜ್ಞಾನದ ಹಂಚಿಕೆಯನ್ನು ಸಾಧ್ಯವಾಗಿಸುವಲ್ಲಿ ಮತ್ತು ಕಾರ್ಯತಂತ್ರೀಯ ಸಹಯೋಗಗಳನ್ನು ಪ್ರೋತ್ಸಾಹಿಸುವತ್ತ ಗಮನವನ್ನು ಇರಿಸುವಲ್ಲಿ ಬೆಂಗಳೂರಿನಲ್ಲಿ ಫೆಬ್ರವರಿ 27ರಿಂದ ಮೂರು ದಿನಗಳ ಕಾಲ ನಡೆಯಲಿರುವ ಗೆಫೆಕ್ಸ್ (GAFX) 2025 ಶೃಂಗಸಭೆ ಬೆಳಕು ಚೆಲ್ಲಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಶ್ವದ ನಂ#1 ಎವಿಜಿಸಿ ಕೇಂದ್ರವಾಗಿ ಹಾಗೂ ಮಾಧ್ಯಮ ಮತ್ತು ಮನರಂಜನೆಯ ಕ್ಷೇತ್ರದಲ್ಲಿ ಭಾರತದ ಜಾಗತಿಕ ನಾಯಕತ್ವದ ಹಿಂದಿನ ಚಾಲಕಶಕ್ತಿಯಾಗಿ ಬೆಂಗಳೂರಿನ ಸ್ಥಾನವನ್ನು ಭದ್ರವಾಗಿಸುತ್ತ ಮಹತ್ವದ ಹೆಜ್ಜೆಯಾಗಿದೆ. 20,000ಕ್ಕೂ ಹೆಚ್ಚು ಮಂದಿಯ ನಿರೀಕ್ಷಿತ ಹಾಜರಿಯೊಂದಿಗೆ ಹಿಂದಿನ ಶೃಂಗಸಭೆಯ ಎರಡರಷ್ಟು ಈ ವರ್ಷದ ಶೃಂಗದಲ್ಲಿ ಎವಿಜಿಸಿ-ಎಕ್ಸ್‌ಆರ್ (AVGC-XR) ಪರಿಸರ ವ್ಯವಸ್ಥೆಯಲ್ಲಿನ ಸೃಷ್ಟಿಕರ್ತರು, ಸ್ಟುಡಿಯೋಗಳು ಮತ್ತು ಉತ್ಸಾಹಿಗಳು ಪಾಲ್ಗೊಳ್ಳಲಿದ್ದು ಇದು ಅತ್ಯಂತ ಪ್ರಭಾವಶಾಲಿಯಾದ ಮೇಳವಾಗಲಿದೆ ಎಂದೂ ಪ್ರಿಯಾಂಕ್ ಖರ್ಗೆ ಹೇಳಿದರು.
ಗೆಫೆಕ್ಸ್ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಇಲಾಖೆ ಆಯೋಜಿಸಿರುವ ಭಾರತದ ಪ್ರಧಾನ ಎವಿಜಿಸಿ-ಎಕ್ಸ್‌ಆರ್ (AVGC-XR) ಸಮ್ಮೇಳನವು (Animation, Visual Effects, Gaming, Comics, and Extended Reality- ಅನಿಮೇಶನ್, ದೃಶ್ಯಪರಿಣಾಮಗಳು, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತ್ರತ ನೈಜತೆ) 2025ರ ಫೆಬ್ರವರಿ 27ರಿಂದ ಮಾರ್ಚ್ 1ರವರೆಗೆ ಬೆಂಗಳೂರಿನ ಲಲಿತ್ ಅಶೋಕ ಹೋಟೆಲ್‌ನಲ್ಲಿ ನಡೆಯಲಿದೆ.
“ತಲ್ಲೀನತೆಯ ಭವಿಷ್ಯ: ಅನುಭವಿಸಿ. ಅನ್ವೇಷಿಸಿ, ಭೇದಿಸಿ” (“Future of Immersion: EXPERIENCE. EXPLORE. DISRUPT”) ಗೆಫೆಕ್ಸ್ 2025ರ ವಸ್ತುವಾಗಿದ್ದು (ಥೀಮ್) ಕ್ರಿಯಾಶೀಲತೆ ಮತ್ತು ತಂತ್ರಜ್ಞಾನದ ಎಲ್ಲೆಗಳನ್ನು ವಿಸ್ತರಿಸುವಲ್ಲಿನ ಸಮ್ಮೇಳನದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಸಮ್ಮೇಳನದಲ್ಲಿ ಭಾಗವಹಿಸುವವರು ನೈಜಾವಧಿಯ ನಿರೂಪಣೆಯಲ್ಲಿನ ಪ್ರಗತಿಯಿಂದ ಭ್ರಾಮಕವಾದ ಹಾಗೂ ವೃದ್ಧಿಸಲಾದ ನೈಜತೆಯ ಪರಿವರ್ತಕ ಸಾಮರ್ಥ್ಯದವರೆಗೆ ತಲ್ಲೀನಾತ್ಮಕ ತಂತ್ರಜ್ಞಾನಗಳ ಶಕ್ತಿಯನ್ನು ಅನುಭವಿಸಲಿದ್ದಾರೆ. GAFX 2025 ಕಥಾನಿರೂಪಣೆ ಮತ್ತು ಪ್ರತಿಕ್ರಿಯಾತ್ಮಕ ಅನುಭವದ ಭವಿಷ್ಯದ ಅನ್ವೇಷಣೆಗೆ ವೇದಿಕೆಯಾಗಲಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರವು ಡಿಜಿಟಲ್ ಮಾಧ್ಯಮ ಉದ್ಯಮಕ್ಕೆ ಶಕ್ತಿಯನ್ನು ತುಂಬುವ ಕಾರ್ಯದಲ್ಲಿ ನಿರತವಾಗಿದೆ. ಕೌಶಲ್ಯಗಳು ಮತ್ತು ಶಿಕ್ಷಣದಿಂದ ಸ್ಟುಡಿಯೋಗಳು, ಸ್ಟಾರ್ಟ್-ಅಪ್‌ಗಳಿಂದ ಜಾಗತಿಕ ನಾಕಯಕರು – ಹೀಗೆ ರಾಜ್ಯದ ನಾವೀನ್ಯದ ಪರಿಸರ ವ್ಯವಸ್ಥೆಗೆ ಸಾಮರ್ಥ್ಯವನ್ನು ತುಂಬುವ ವಿಶಾಲ ವ್ಯಾಪ್ತಿಯ ಚಟುವಟಿಕೆಗಳನ್ನು ಸರ್ಕಾರವು ಪೋಷಿಸುತ್ತಿದೆ. ಈ ವಲಯವನ್ನು ಪರಿವರ್ತಿಸುವ ವಿಧಗಳಲ್ಲಿ ಮಾನವ ಸೃಷ್ಟಿಶೀಲತೆ ಮತ್ತು AI ಸಾಧನಗಳ ಮೇಳವನ್ನು ಪೋಷಿಸುವ ವೇಗವರ್ಧಕವಾಗಿ ನಾವು ಸರ್ಕಾರದ ಪಾತ್ರವನ್ನು
ಪರಿಭಾವಿಸುತ್ತೇವೆ, ಬೆಂಗಳೂರು ಗೆಫೆಕ್ಸ್ (GAFX) 2025ರಲ್ಲಿ ನಾವು ಭಾರತದ ಅತ್ಯುತ್ಕೃಷ್ಟ ಪ್ರತಿಭೆ ಮತ್ತು ಹೂಡಿಕೆ ಅಭ್ಯರ್ಥಿಗಳನ್ನು ಪ್ರಸ್ತುತಪಡಿಸುತ್ತಿದ್ದು ಇದರಿಂದಾಗಿ ಈ ಸಮ್ಮೇಳನವು ದೃಶ್ಯ ತಲ್ಲೀನತೆ, ಮತ್ತು ಕಥಾನಿರೂಪಣೆಯಲ್ಲಿ ಎವಿಜಿಸಿ-ಎಕ್ಸ್‌ಆರ್ (AVGC-XR) ನ ಮೂಲ ವೇದಿಕೆಯಾಗಿ ಹೊರಹೊಮ್ಮಲಿದೆ”-ಪ್ರಿಯಾಂಕ್ ಖರ್ಗೆ
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಕಾರ್ಯದರ್ಶಿಗಳಾದ ಡಾ. ಏಕರೂಪ್ ಕೌರ್, ಬೆಂಗಳೂರು ಗೆಫೆಕ್ಸ್ ಅಧ್ಯಕ್ಷರು ಮತ್ತು ಅಬಯ್ (ABAI) ಅಧ್ಯಕ್ಷರಾದ ಬಿರೇನ್ ಘೋಷ್ ಮಾತನಾಡಿದರು.
GAFX ನಲ್ಲಿ ABAI ಅನೇಕ ನೆಲೆಗಳನ್ನು, ಹೊಸದಾದ ಸಾಧ್ಯತೆಗಳನ್ನು ತೋರುವ ಹಾದಿಗಳನ್ನು, 50 ಅದ್ಭುತವಾದ ಪಿಚ್ ಸತ್ರಗಳನ್ನು, ಮತ್ತು ರಾಷ್ಟ್ರದ ಬೇರೆ ಬೇರೆ ಭಾಗಗಳಿಂದ ತಂತ್ರಜ್ಞಾನದ ವಿವಿಧ ರೂಪಗಳನ್ನು ಹಾಗೂ 12ಕ್ಕೂ ಹೆಚ್ಚು ರಾಜ್ಯಗಳಿಂದ ಪ್ರತಿನಿಧಿಗಳನ್ನು ಒಳಗೊಳ್ಳುವ ಇಂಡಿಯಾ ಎಕ್ಸ್‌ಪೋ ವನ್ನು ಪ್ರಸ್ತುತಪಡಿಸಲಿದೆ. ಕಥೆ ಹೇಳುವ ಕಲೆಯನ್ನು ಮರುವ್ಯಾಖ್ಯಾನಿಸುವ ಭವಿಷ್ಯದ ಬುದ್ದಿಮತ್ತೆಯ ಪ್ರತಿಯೊಂದು ಮುಖವನ್ನೂ ತೆರೆದಿಡುವ ಅತಿ ದೊಡ್ಡದಾದ ಏಕೈಕ ಪ್ರದರ್ಶನವು ಇದಾಗಲಿದೆ” ಎಂದು ಹೇಳಿ