ಬೆಂಗಳೂರು: ನಗರದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವನ್ನು ಪೊಲೀಸ್ ಪೇದೆಯೇ ಎಸಗಲಾಗಿದೆ. ಸಹಾಯ ಮಾಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಪೊಲೀಸ್ ಕಾನ್ಸ್ ಸ್ಟೇಬಲ್ ಒಬ್ಬರು ಅತ್ಯಾಚಾರ ಎಸಗಿರೋದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ಇಂತಹ ಕೃತ್ಯವನ್ನು ಎಸಗಲಾಗಿದೆ. ಪೊಲೀಸ್ ಪೇದೆ ಅರುಣ್ ಎಂಬುವರು 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಬೆಂಗಳೂರಿನ ಬೊಮ್ಮನಹಳ್ಳಿಯ ಠಾಣೆಯ ಪೊಲೀಸ್ ಪೇದೆ ಅರುಣ್ ಎಂಬುವರೇ ಈ ಕೃತ್ಯವೆಸಗಿದಂತವರಾಗಿದ್ದಾರೆ.
ನೆರಮನೆಯ ವಿಕ್ಕಿ ಎಂಬಾತ ಮದುವೆಯಾಗುವುದಾಗಿ ನಂಬಿಸಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದನು. ಈ ಸಂಬಂಧ ದೂರು ನೀಡಲು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ತಾಯಿ, ಸಂತ್ರಸ್ತೆ ತೆರಳಿದ್ದರು. ಅವರನ್ನು ಪರಿಚಯ ಮಾಡಿಕೊಂಡಿದ್ದ ಪಿಸಿ ಅರುಣ್, ಅವರಿಗೆ ಸಹಾಯ ಮಾಡುವುದಾಗಿ ಹೇಳಿದ್ದನು.
ನ್ಯಾಯ ಕೊಡಿಸುತ್ತೇನೆ, ಅಲ್ಲದೇ ಬಾಲಕಿಗೆ ಕೆಲಸ ಕೊಡುವುದಾಗಿಯೂ ತಾಯಿ, ಸಂತ್ರಸ್ತೆಯನ್ನು ನಂಬಿಸಿದ್ದನು. ಬಾಲಕಿಯನ್ನು ಕಳೆದ ಡಿಸೆಂಬರ್ 2024ರಂದು ಓಯೋ ರೂಮಿಗೆ ಕರೆಸಿಕೊಂಡು ಅತ್ಯಾಚಾರಕ್ಕೆ ಒಳಗಾಗಿ, ನೆರವಿಗೆ ಧಾರಿಸುವಂತ ದೂರು ನೀಡಲು ಹೋಗಿದ್ದಂತ ಅಪ್ರಾಪ್ತೆಯ ಮೇಲೆ ಪಿಸಿ ಅರುಣ್ ಅತ್ಯಾಚಾರ ಎಸಗಿದ್ದಾನೆ.
ಕುಡಿಯುವ ಪಾನೀಯದಲ್ಲಿ ಮತ್ತುಬರಿಸುವಂತ ಔಷಧಿ ನೀಡಿ, ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಈ ವಿಷಯ ಯಾರಿಗಾದರೂ ಹೇಳಿದ್ರೆ ವೀಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಪಿಸಿ ಅರುಣ್ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಅಪ್ರಾಪ್ತೆ ಯಾರಿಗೂ ತಿಳಿಸಿಲ್ಲ.
ಇಂದು ಸಂತ್ರಸ್ತ ಬಾಲಕಿ ಹಾಗೂ ತಾಯಿ ಮೈಕೋ ಲೇಔಟ್ ಗೆ ತೆರಳಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ ನೆರೆಮನೆಯ ವಿಕ್ಕಿ ಹಾಗೂ ಬೊಮ್ಮನಹಳ್ಳಿ ಠಾಣೆಯ ಪೊಲೀಸ್ ಪೇದೆ ಅರುಣ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
2028ರ ಚುನಾವಣೆಗೆ ಸಜ್ಜಾಗುವಂತೆ ಪರಾಜಿತ ಅಭ್ಯರ್ಥಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
BREAKING : ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ‘HSRP’ ನಂಬರ್ ಪ್ಲೇಟ್ ಅಳವಡಿಕೆ ಮಾ.31ರವರೆಗೆ ವಿಸ್ತರಣೆ
BREAKING : ಬೆಂಗಳೂರಲ್ಲಿ ‘RTO’ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : 100ಕ್ಕೂ ಹೆಚ್ಚು ಶಾಲಾ ವಾಹನಗಳು ಸೀಜ್!