Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮದ್ದೂರು ಗಣೇಶ ಗಲಾಟೆ: ಯಾರೆಲ್ಲ ಮೇಲೆ ಕೇಸ್, ನ್ಯಾಯಾಂಗ ಬಂಧನ ಗೊತ್ತಾ? ಇಲ್ಲಿದೆ ಪಟ್ಟಿ

09/09/2025 12:34 PM

ಹೆಸರು ದುರುಪಯೋಗಿಸಿಕೊಂಡು `AI’ ಪೋಟೋಗಳ ಪ್ರಸಾರ: ದೆಹಲಿ ಹೈಕೋರ್ಟ್‌ಗೆ ಬಾಲಿವುಡ್ ನಟಿ ಐಶ್ವರ್ಯಾ ರೈ ಅರ್ಜಿ

09/09/2025 12:33 PM

BREAKING : ನೇಪಾಳದಲ್ಲಿ ತೀವ್ರ ಸ್ವರೂಪ ಪಡೆದ ಪ್ರತಿಭಟನೆ : ದುಬೈಗೆ ಪರಾರಿಯಾಗಲು ಸಜ್ಜಾದ ಪ್ರಧಾನಿ ಕೆ.ಪಿ.ಶರ್ಮಾ ಓಲಿ.!

09/09/2025 12:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SESP, TSP ಯೋಜನೆ ಹಣ ಬೇರೆ ಯೋಜನೆಗಳಿಗೆ ಬಳಸದಂತೆ ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಪತ್ರ
KARNATAKA

SESP, TSP ಯೋಜನೆ ಹಣ ಬೇರೆ ಯೋಜನೆಗಳಿಗೆ ಬಳಸದಂತೆ ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಪತ್ರ

By kannadanewsnow0923/02/2025 8:00 PM

ಬೆಂಗಳೂರು: SESP, TSP ವಿಶೇಷ ಯೋಜನೆ ಹಣ ಬೇರೆ ಯೋಜನೆಗಳಿಗೆ ಬಳಸದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರ ಬರೆದು ಮನವಿ ಮಾಡಿದ್ದಾರೆ.

ಇಂದು ಸಿಎಂಗೆ ಪತ್ರ ಬರೆದಿರುವಂತ ಅವರು, ಕಾಂಗ್ರೆಸ್‌ ಸರ್ಕಾರದ ತಮ್ಮ ಎರಡು ಅವಧಿಯ 2023-24 ಮತ್ತು 2024-25ರ ಆಯ-ವ್ಯಯದಲ್ಲಿ ತಾವು ರಾಜ್ಯದ ಜನತೆಗೆ ನೀಡಿರುವ ಚುನಾವಣಾ ಆಶ್ವಾಸನೆಯ ಗ್ಯಾರಂಟಿಗಳಿಗೆ ಆಯ-ವ್ಯಯದಲ್ಲಿ ಹಣವನ್ನು ಮೀಸಲಿಟ್ಟಿದ್ದರೂ ಸಹ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ರೂಪಿಸಲಾದ ಎಸ್.ಸಿ.ಎಸ್‌.ಪಿ/ಟಿ.ಎಸ್.ಪಿ ವಿಶೇಷ ಯೋಜನೆಯಲ್ಲಿ ರೂ.11,144.00 + ರೂ.14,282.38 = ರೂ. 25,426.38 ಕೋಟಿ ಹಣವನ್ನು ಕಾನೂನು ಬಾಹಿರವಾಗಿ ಅನ್ಯ ಯೋಜನೆಗಳಿಗೆ ಅರ್ಥಾತ್‌ ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದಾಗಿ ತಾವೇ ಒಪ್ಪಿಕೊಂಡಿದ್ದೀರಿ ಎಂದಿದ್ದಾರೆ.

ಈ ವಿಚಾರದ ಕುರಿತು ನಾನು ಸದನದಲ್ಲಿ ಹಲವಾರು ಬಾರಿ ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಹಾಗೂ ಚರ್ಚೆಗಳ ಸಂದರ್ಭದಲ್ಲಿ ಈ ಹಣವನ್ನು ಗ್ಯಾರಂಟಿಗಳಿಗೆ ಬಳಸಿರುವುದಾಗಿ ಸರ್ಕಾರವು ಒಪ್ಪಿರುತ್ತದೆ. ಈ ವಿಷಯವು ತಪ್ಪೆಂದು ತಮಗೆ ಅನಿಸಿದರೂ, ಸಂದರ್ಭದ ಒತ್ತಡದಿಂದ ತಾವು ಸಮರ್ಥಿಸಿಕೊಂಡಿದ್ದೀರಿ. ಆಯ-ವ್ಯಯದಲ್ಲಿ ರೂ. 52,000.00 ಕೋಟಿಗಳಿಗೂ ಹೆಚ್ಚು ಹಣವನ್ನು ಗ್ಯಾರಂಟಿಗಳಿಗಾಗಿ ತಾವು ಮೀಸಲಿಟ್ಟ ಮೇಲೆ ಎಸ್.ಸಿ.ಎಸ್‌.ಪಿ/ಟಿ.ಎಸ್.ಪಿ ಯೋಜನೆಯ ರೂ. 25,426.38 ಕೋಟಿ ಎಲ್ಲಿ ವಿನಿಯೋಗಿಸಲಾಗಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಮೀಸಲಿಟ್ಟ ಮೇಲೆ ಪರಿಶಿಷ್ಟರಿಗಾಗಿ ಮೀಸಲಿಟ್ಟ ರೂ. 25,426.38 ಕೋಟಿ ಹಣ ತೆಗೆಯುವ ಅವಶ್ಯಕತೆಯೇ ಇರಲಿಲ್ಲ. ಒಂದು ವೇಳೆ ಪರಿಶಿಷ್ಟರಿಗಾಗಿ ಮೀಸಲಿಟ್ಟ ಹಣದಲ್ಲೇ ಗ್ಯಾರಂಟಿ ಯೋಜನೆಗಳಲ್ಲಿ ಅವರಿಗೆ ಹಣ ವ್ಯಯಿಸುವುದಾದರೆ ಆಯ-ವ್ಯಯದಲ್ಲಿ ಮೀಸಲಿಟ್ಟ ರೂ. 52,000.00 ಕೋಟಿಗೂ ಹೆಚ್ಚು ಹಣ ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ? ಪ್ರಶ್ನೆ ಏನೆಂದರೆ, ತಾವು ಆಯ-ವ್ಯಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟ ಹಣಕ್ಕೆ ಪರಿಶಿಷ್ಟರು ಭಾದ್ಯರಲ್ಲವೇ ಎಂಬ ಅನುಮಾನ ಸಹ ಮೂಡುತ್ತದೆ. ಹೀಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಲ್ಲಿ ಎಸ್.ಸಿ.ಎಸ್‌.ಪಿ/ಟಿಎಸ್.ಪಿ ವಿಶೇಷ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿರುವ ಕುರಿತು ಅನೇಕ ಪ್ರಶ್ನೆಗಳಿವೆ ಎಂದಿದ್ದಾರೆ.

ಐತಿಹಾಸಿಕವಾಗಿ ಹಿಂದುಳಿದವರನ್ನು ಮೇಲಸ್ತರಕ್ಕೆ ತರಲು ಹಾಗೂ ಅವರು ಆರ್ಥಿಕವಾಗಿ ಸದೃಢರನ್ನಾಗಿಸಲು ಸರ್ಕಾರ ಈಗಲಾದರು ಮುಂದೆ ಬರಬೇಕು. ಇಲ್ಲದಿದ್ದಲ್ಲಿ, ಅವರ ಸರ್ವಾಂಗೀಣ ಅಭಿವೃದ್ಧಿಯು ಕುಂಠಿತವಾಗುವುದಿಲ್ಲವೇ? ಅವರ ಬಡತನವನ್ನು ಹಾಗೂ ಅಸಹಾಯಕತೆಯನ್ನ ಸರ್ಕಾರವೇ ನೇರವಾಗಿ ಯಥಾಸ್ಥಿತಿಯಲ್ಲಿ ಮುಂದುವರಿಸಿದಂತೆ ಆಗುವುದಿಲ್ಲವೇ? ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಬೇಕಲ್ಲವೇ? ಅವರಿಗಾಗಿ ವಿಶೇಷ ಯೋಜನೆಗಳನ್ನು ತಯಾರಿಸಿ ಅನುಷ್ಠಾನ ಮಾಡಲು ಹಿಂಜರಿಯುತ್ತಿರುವುದೇಕೆ? ಗ್ಯಾರಂಟಿಯಂತಹ ಯೋಜನೆಗಳಿಂದ ಅವರ ಮಾನವ ಸಹಜ ಕೌಶಲ್ಯಗಳಿಗೆ ಹೇಗೆ ಅಭಿವೃದ್ಧಿಯಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಶ್ರೇಯೋಭಿವೃದ್ಧಿಗೆ ವಿಶೇಷವಾಗಿ ತಯಾರಿಸಿದ SCSP / TSP ಯೋಜನೆಯ ಪ್ರಮುಖ ಉದ್ದೇಶ ಈ ಸಮುದಾಯಗಳ ಶಿಕ್ಷಣ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗುವುದು. ಆದರೆ, ಈ ಯೋಜನೆಗಳಿಗಾಗಿ ಮೀಸಲಾಗಿರುವ ಹಣವನ್ನು ಇತರ ಯೋಜನೆಗಳಿಗೆ ಬಳಸುವ ಪ್ರಕ್ರಿಯೆಯು ತಳ ಸಮುದಾಯಗಳ ಅಭಿವೃದ್ಧಿಗೆ ಹಿನ್ನಡೆಯುಂಟು ಮಾಡುತ್ತದೆ. ಅನ್ಯ ಯೋಜನೆಗಳಿಗೆ SCSP / TSP ಹಣವನ್ನು ಬಳಕೆ ಮಾಡಿದರೆ ಈ ಸಮುದಾಯಗಳ ಮೇಲಿನ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇನ್ನೂ ಗಟ್ಟಿಯಾಗುತ್ತದೆ. ಇಂತಹ ಕಾರಣಗಳಿಂದ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ತೀವ್ರ ಆಘಾತವುಂಟಾಗುತ್ತದೆ ಎಂದು ತಿಳಿಸಿದ್ದಾರೆ.

SCSP ಮತ್ತು TSP ಯೋಜನೆಗಳು ಸಂವಿಧಾನ ಬದ್ಧವಾಗಿ ಪರಿಶಿಷ್ಟ ಜನಾಂಗಗಳ ಶ್ರೇಯೋಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿವೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ನಿವಾರಣೆ, ಶಿಕ್ಷಣದ ಪ್ರೋತ್ಸಾಹ, ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಮೂಲಭೂತ ಸೌಲಭ್ಯಗಳ ಒದಗಿಸುವಿಕೆ ಈ ಯೋಜನೆಗಳ ಪ್ರಧಾನ ಉದ್ದೇಶಗಳು. ಇವುಗಳಿಗೆ ಮೀಸಲಾಗಿರುವ ಹಣವನ್ನು ಈ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಬಳಸಿದರೆ ಮಾತ್ರ ಸದ್ಫಲಿತಾಂಶ ದೊರೆಯುತ್ತದೆ ಹಾಗೂ ಅವರು ಬೆಳವಣಿಗೆಯ ಹಾದಿಗೆ ತಲುಪಲು ನೆರವಾಗುತ್ತದೆ ಎಂದಿದ್ದಾರೆ.

SCSP ಮತ್ತು TSP ಯೋಜನೆಗಳು ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಜೀವಾಳವಾಗಿವೆ. ಈ ಯೋಜನೆಗಳ ಹಣವನ್ನು ಅನ್ಯ ಯೋಜನೆಗಳಿಗೆ ಬಳಸುವುದು ಈ ಸಮುದಾಯಗಳ ಅಭಿವೃದ್ದಿಯನ್ನು ಮೊಟಕುಗೊಳಿಸುತ್ತದೆ. ಆದ್ದರಿಂದ, ಸರ್ಕಾರವು ಈ ಯೋಜನೆಗಳ ನಿಧಿಗಳನ್ನು ಗುರಿ ಮಾಡಿದ ಉದ್ದೇಶಗಳಿಗೆ ಮಾತ್ರ ಬಳಸುವಂತಾಗಬೇಕು ಇದರಿಂದ ಮಾತ್ರ ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಮೀಸಲಾಗಿರುವ ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಅವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುನ್ನಡೆಯಲು ಸಾಧ್ಯ. ಈ ಸಮುದಾಯಗಳ ಅಭಿವೃದ್ಧಿಗೆ ಕೈಜೋಡಿಸಿದಾಗ ಸಮತೋಲನವಾದ ಮತ್ತು ನ್ಯಾಯಸಮ್ಮತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದಿದ್ದಾರೆ.

ತಮ್ಮ 5 ಗ್ಯಾರಂಟಿ ಯೋಜನೆಗಳಲ್ಲಿ ಪ.ಜಾ /ಪ.ಪಂ ಜನರು ಕೂಡ ಇದ್ದಾರೆ, ಆದ್ದರಿಂದ ಎಸ್.ಸಿ.ಎಸ್.ಪಿ/ ಟಿ.ಎಸ್‌.ಪಿ ಮೀಸಲು ಹಣವನ್ನು ಖರ್ಚು ಮಾಡುವುದು ಸರಿ ಎಂಬ ನಿಮ್ಮ ವಾದವು ಚರ್ಚಾಸ್ಪದವಾದುದು ಅಲ್ಲದೇ ಅನುಮಾನಾಸ್ಪದವಾದುದು ಹಾಗೂ ಅನ್ಯಾಯದ ಮಾರ್ಗದಲ್ಲಿ ಮುನ್ನಡೆಯುತ್ತದೆ ಎಂದು ಮನಗಾಣಬೇಕಿದೆ ಎಂದು ತಿಳಿಸಿದ್ದಾರೆ.

ಆದ್ದರಿಂದ ಮಾನ್ಯರಲ್ಲಿ ನನ್ನ ಈಗಿನ ಮನವಿ ಏನೆಂದರೆ, 2025-26ನೇ ಆಯ-ವ್ಯಯದಲ್ಲಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗಾಗಿ ಮೀಸಲಿಡಲಾದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಹಣವನ್ನು ದಯಮಾಡಿ ಗ್ಯಾರಂಟಿಗಳಿಗೆ ಬಳಸದೇ ಪರಿಶಿಷ್ಟರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಆಗ್ರಹಪಡಿಸುವುದರ ಜೊತೆಗೆ ಗ್ಯಾರಂಟಿಗಳಿಗೆ ಆಯ-ವ್ಯಯದಲ್ಲಿ ಮೀಸಲಿಟ್ಟಿರುವ ಹಣದಲ್ಲೇ ಗ್ಯಾರಂಟಿ ಯೋಜನೆಗಳಲ್ಲಿ ಫಲಾನುಭವಿಯಾಗಿರುವ ಪ.ಜಾ/ಪ.ಪಂ ದವರಿಗೆ ವ್ಯಯಿಸಬೇಕು ಎಂದು ಮನವಿ ಮಾಡಿದ್ದಾರೆ.

ಬಡವರ ‘ಸಂತಾನ’ಕ್ಕೆ ವರದಾನ: ಶೀಘ್ರವೇ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಪ್ರಥಮ ‘IVF ಕೇಂದ್ರ’ ಹುಬ್ಬಳ್ಳಿಯಲ್ಲಿ ಆರಂಭ

ಏಕದಿನ ಕ್ರಿಕೆಟ್ನಲ್ಲಿ 9000 ರನ್ ಗಳಿಸಿದ ಭಾರತದ 3ನೇ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರ | Rohit Sharma

Share. Facebook Twitter LinkedIn WhatsApp Email

Related Posts

ಮದ್ದೂರು ಗಣೇಶ ಗಲಾಟೆ: ಯಾರೆಲ್ಲ ಮೇಲೆ ಕೇಸ್, ನ್ಯಾಯಾಂಗ ಬಂಧನ ಗೊತ್ತಾ? ಇಲ್ಲಿದೆ ಪಟ್ಟಿ

09/09/2025 12:34 PM1 Min Read

ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ವಿಕಲಚೇತನರ ಕುಂದು ಕೊರತೆಗಳ ನಿವಾರಣಾಧಿಕಾರಿ ನೇಮಕ : ಸರ್ಕಾರದಿಂದ ಆದೇಶ

09/09/2025 11:57 AM1 Min Read

BREAKING : ನನಗೆ ಬದುಕೋಕೆ ಆಗ್ತಿಲ್ಲ ವಿಷ ಕೊಡಿ : ಕೋರ್ಟ್ ನಲ್ಲಿ ಜಡ್ಜ್ ಗೆ ಮನವಿ ಮಾಡಿದ ನಟ ದರ್ಶನ್!

09/09/2025 11:38 AM1 Min Read
Recent News

ಮದ್ದೂರು ಗಣೇಶ ಗಲಾಟೆ: ಯಾರೆಲ್ಲ ಮೇಲೆ ಕೇಸ್, ನ್ಯಾಯಾಂಗ ಬಂಧನ ಗೊತ್ತಾ? ಇಲ್ಲಿದೆ ಪಟ್ಟಿ

09/09/2025 12:34 PM

ಹೆಸರು ದುರುಪಯೋಗಿಸಿಕೊಂಡು `AI’ ಪೋಟೋಗಳ ಪ್ರಸಾರ: ದೆಹಲಿ ಹೈಕೋರ್ಟ್‌ಗೆ ಬಾಲಿವುಡ್ ನಟಿ ಐಶ್ವರ್ಯಾ ರೈ ಅರ್ಜಿ

09/09/2025 12:33 PM

BREAKING : ನೇಪಾಳದಲ್ಲಿ ತೀವ್ರ ಸ್ವರೂಪ ಪಡೆದ ಪ್ರತಿಭಟನೆ : ದುಬೈಗೆ ಪರಾರಿಯಾಗಲು ಸಜ್ಜಾದ ಪ್ರಧಾನಿ ಕೆ.ಪಿ.ಶರ್ಮಾ ಓಲಿ.!

09/09/2025 12:26 PM

SHOCKING : ಹಾಡಹಗಲೇ 11 ವರ್ಷದ ಬಾಲಕಿಗೆ ವೃದ್ಧನಿಂದ ಲೈಂಗಿಕ ಕಿರುಕುಳ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

09/09/2025 12:18 PM
State News
KARNATAKA

ಮದ್ದೂರು ಗಣೇಶ ಗಲಾಟೆ: ಯಾರೆಲ್ಲ ಮೇಲೆ ಕೇಸ್, ನ್ಯಾಯಾಂಗ ಬಂಧನ ಗೊತ್ತಾ? ಇಲ್ಲಿದೆ ಪಟ್ಟಿ

By kannadanewsnow0509/09/2025 12:34 PM KARNATAKA 1 Min Read

ಮಂಡ್ಯ : ಮದ್ದೂರು ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗು ಪೊಲೀಸರು ಸುಮಾರು 21ಕ್ಕೂ ಅಧಿಕ…

ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ವಿಕಲಚೇತನರ ಕುಂದು ಕೊರತೆಗಳ ನಿವಾರಣಾಧಿಕಾರಿ ನೇಮಕ : ಸರ್ಕಾರದಿಂದ ಆದೇಶ

09/09/2025 11:57 AM

BREAKING : ನನಗೆ ಬದುಕೋಕೆ ಆಗ್ತಿಲ್ಲ ವಿಷ ಕೊಡಿ : ಕೋರ್ಟ್ ನಲ್ಲಿ ಜಡ್ಜ್ ಗೆ ಮನವಿ ಮಾಡಿದ ನಟ ದರ್ಶನ್!

09/09/2025 11:38 AM

ನನಗೆ ಸ್ವಲ್ಪ ವಿಷ ಕೊಡಿ ಎಂದು ಕೋರ್ಟ್ ನಲ್ಲಿ ನಟ ದರ್ಶನ್ ಮನವಿ.!

09/09/2025 11:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.